Horoscope: ಸೂರ್ಯದೇವನ ಆಶೀರ್ವಾದದಿಂದ ಈ ರಾಶಿಯವರ ಅದೃಷ್ಟ ಶುರು, ಉದ್ಯೋಗದಲ್ಲಿ ಯಶಸ್ಸು

Written by Pooja Siddaraj

Published on:

Horoscope: ಸೂರ್ಯದೇವನನ್ನು ಎಲ್ಲಾ ಗ್ರಹಗಳಿಗಿಂತ ಹೆಚ್ಚು ಶಕ್ತಿಶಾಲಿ ಗ್ರಹ ಎಂದು ಕರೆಯುತ್ತಾರೆ. ಸೂರ್ಯನು ಗೌರವ, ಆಶೀರ್ವಾದ, ಸರ್ಕಾರಿ ಕೆಲಸ, ಆಡಳಿತ ಇದೆಲ್ಲದರ ಅಂಶ ಸೂರ್ಯದೇವ ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳು ಆಕ್ಟೊಬರ್ 18ರಂದು ಸೂರ್ಯದೇವನು ಸ್ಥಾನ ಬದಲಾವಣೆ ಮಾಡಿ ತುಲಾ ರಾಶಿಗೆ ಬಂದಿದ್ದಾನೆ. ಈ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ 3 ರಾಶಿಗಳ ಮೇಲೆ ವಿಶೇಷ ಪ್ರಯೋಜನ ಬೀರುತ್ತದೆ. ಅವರಿಗೆ ಅದೃಷ್ಟದ ಜೊತೆಗೆ ದಿಢೀರ್ ಧನಲಾಭ ಸಿಗುತ್ತದೆ.

ವೃಷಭ ರಾಶಿ :- ವೃತ್ತಿ ಬದುಕಿನಲ್ಲಿ ನಿಮಗೆ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಎತ್ತರದ ಸ್ಥಾನಕ್ಕೆ ಹೋಗುತ್ತೀರಿ. ನೀವು ಕೆಲಸ ಮಾಡುವ ಶೈಲಿ ಕೂಡ ಸುಧಾರಿಸುತ್ತದೆ. ಎಲ್ಲಾ ವಿಚಾರದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ.

ಮಿಥುನ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ನಿಮ್ಮ ಲವ್ ಲೈಫ್ ತುಂಬಾ ಚೆನ್ನಾಗಿರುತ್ತದೆ. ಈ ವೇಳೆ ನಿಮಗೆ ಹೊಸ ಕೆಲಸಕ್ಕೆ ಆಫರ್ ಸಿಗುತ್ತದೆ. ನಿಮ್ಮಲ್ಲಿ ಶೌರ್ಯ, ಧೈರ್ಯ ಹೆಚ್ಚಿರುವ ಆಧಾರದ ಮೇಲೆ ನಿಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯುತ್ತೀರಿ.

ಧನು ರಾಶಿ :- ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಸುಧಾರಣೆಯಾಗಿ ನಿಮ್ಮ ಪರಿಸ್ಥಿತಿ ಚೆನ್ನಾಗಿರುತ್ತದೆ. ಈ ಹಿಂದೆ ಮಾಡಿದ ಹೂಡಿಕೆ ಇಂದ ಲಾಭ ನಿಮ್ಮದಾಗುತ್ತದೆ. ಆಸ್ತಿ ವಿಚಾರದಲ್ಲಿ ಲಾಭವಾಗುತ್ತದೆ.

Leave a Comment