Darshan: ದರ್ಶನ್ ಅವರನ್ನು ಮನೆಯಲ್ಲಿ ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊತ್ತಾ?

Written by Pooja Siddaraj

Published on:

Darshan: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ ಸ್ನೇಹಿತರು ಎಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಫ್ರೆಂಡ್ಸ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.

ಫ್ಯಾಮಿಲಿಗು ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಪತ್ನಿ, ತಾಯಿ, ಮಗ, ಅಕ್ಕ, ತಮ್ಮ, ಅಕ್ಕನ ಕುಟುಂಬ ಎಲ್ಲರನ್ನು ಕಂಡರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಮನೆಯವರಿಗೂ ಅಷ್ಟೇ ದರ್ಶನ್ ಅವರನ್ನು ಕಂಡರೆ ಅಷ್ಟೇ ಇಷ್ಟ. ದರ್ಶನ್ ಅವರು ತಮ್ಮ ಕುಟುಂಬದ ಜೊತೆಗೆ ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳುವುದಿಲ್ಲ, ಆದರೆ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಫ್ಯಾಮಿಲಿ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ ಡಿಬಾಸ್.

ಆಗೊಮ್ಮೆ ಈಗೊಮ್ಮೆ ಫ್ಯಾಮಿಲಿ ಜೊತೆಗಿರುವ ಫೋಟೋಸ್ ಕೂಡ ವೈರಲ್ ಆಗುತ್ತದೆ. ಇನ್ನು ಒಂದು ಕುಟುಂಬ ಎಂದಮೇಲೆ ಅವರ ಮನೆಯವರು ಪ್ರೀತಿಯಿಂದ ವಿಶೇಷವಾದ ಹೆಸರುಗಳಿಂದ ಕರೆಯುವುದು ಉಂಟು. ಅದೇ ರೀತಿ ದರ್ಶನ್ ಅವರನ್ನು ಸಹ ಅವರ ಮನೆಯಲ್ಲಿ ತುಂಬಾ ಪ್ರೀತಿಯಿಂದ ಒಂದು ವಿಶೇಷವಾದ ಹೆಸರಿನಿಂದ ಕರೆಯುತ್ತಾರೆ. ಆ ಹೆಸರು ಏನು ಗೊತ್ತಾ? ನಿನ್ನೆಯಷ್ಟೇ ಈ ವಿಚಾರ ರಿವೀಲ್ ಆಗಿದೆ..

ನಿನ್ನೆ ನಟ ಡಾಲಿ ಧನಂಜಯ್ ನಿರ್ಮಾಣ ಮಾಡಿ, ನಾಗಭೂಷಣ್, ಅಮೃತಾ ಪ್ರೇಮ್ ಹೀರೋ ಹೀರೋಯಿನ್ ಆಗಿ ನಟಿಸಿರುವ ಟಗರು ಪಲ್ಯ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ನಟ ದರ್ಶನ್ ಅವರು ಅತಿಥಿಯಾಗಿ ಬಂದು, ಟಗರು ಪಲ್ಯ ತಂಡಕ್ಕೆ ಸಾಥ್ ನೀಡಿದರು. ಈ ಸಿನಿಮಾದಲ್ಲಿ ನಟಿ ತಾರಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿನ್ನೆಯ ಕಾರ್ಯಕ್ರಮದಲ್ಲಿ ತಾರಾ ಅವರು ದರ್ಶನ್ ಅವರನ್ನು ವೇದಿಕೆಯ ಮೇಲೆ ಬರುವಂತೆ ಕರೆದರು.

ಆಗ ತಾರಾ ಅವರು ದರ್ಶನ್ ಅವರ ತಾಯಿ ಕರೆಯುವ ಹೆಸರಿನಲ್ಲೇ ಡಿಬಾಸ್ ಅವರನ್ನು ಕರೆದರು. ತಾರಾ ಅವರು ದರ್ಶನ್ ಅವರನ್ನು ಕರೆದದ್ದು ಅಪ್ಪು ಎನ್ನುವ ಹೆಸರಿನಿಂದ. ಹೌದು, ದರ್ಶನ್ ಅವರನ್ನು ಮನೆಯಲ್ಲಿ ಅಪ್ಪು ಅಂತ ಕರೆಯುತ್ತಾರಂತೆ. ದರ್ಶನ್ ಅವರ ತಾಯಿ, ತಮ್ಮ, ಅಕ್ಕ ಎಲ್ಲರೂ ಕೂಡ ಅದೇ ಹೆಸರಿನಿಂದ ಕರೆಯುತ್ತಾರೆ. ತಾರಾ ಅವರಿಗು ಕೂಡ ಅದೇ ಹೆಸರಿನಿಂದ ಕರೆಯುವ ಅಭ್ಯಾಸ ಎಂದು ಹೇಳಿಕೊಂಡಿದ್ದಾರೆ

Leave a Comment