Viral News: ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದ ಇಡೀ ಬದುಕಿಗೆ ಹಾಗೂ ಮತ್ತೊಂದು ಜೀವಕ್ಕೂ ತೊಂದರೆ ಆಗಿಬಿಡುತ್ತದೆ. ಆ ತಪ್ಪನ್ನು ಮಾಡುವಾಗ ನಮಗೆ ಆ ರೀತಿ ಆಗಬಹುದು ಎನ್ನುವ ಅರಿವು ಆಗುವುದಿಲ್ಲ. ಅಂಥದ್ದೊಂದು ಘಟನೆ ಇದೀಗ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ತವರೂರು ಮೈಸೂರು, ಈ ಊರಿನಲ್ಲಿ ವ್ಯಕ್ತಿಯೊಬ್ಬ ಮಗುವನನ್ನು ಸಾಕೋದಕ್ಕೆ ಆಗೋದಿಲ್ಲ ಎಂದು ಮಗುವನ್ನು ಮುಗಿಸಿಬಿಟ್ಟಿದ್ದಾನೆ..
ಈ ವ್ಯಕ್ತಿಯ ಹೆಸರು ಗಣೇಶ್, ಈತನಿಗೆ ಲಕ್ಷ್ಮಿ ಎನ್ನುವ ಮಹಿಳೆಯ ಜೊತೆಗೆ ಮದುವೆಯಾಗಿತ್ತು, ಇವರಿಬ್ಬರು ಬೆಂಗಳೂರಿನ ದೊಡ್ಡಸನ್ನೇ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದರು. ಇವರಿಬ್ಬರಿಗೆ ಮೂವರು ಮಕ್ಕಳು ಕೂಡ ಜನಿಸಿದ್ದರು, ಮೂರನೇ ಮಗುವಿನ ಹೆರಿಗೆ ಸಮಯದಲ್ಲಿ ಲಕ್ಷ್ಮಿ ಮೃತರಾದರು. ಇಬ್ಬರು ಹೆಣ್ಣುಮಕ್ಕಳು ಮತ್ತು ಕೊನೆಯ ಮಗು ಗಂಡುಮಗು ಈ ಜೋಡಿಗೆ ಜನಿಸಿತ್ತು.
ಮೊದಲ ಇಬ್ಬರು ಹೆಣ್ಣುಮಕ್ಕಳನ್ನು ಸಹ ಲಕ್ಷ್ಮಿಯ ತಾಯಿ ಅಂಜನಮ್ಮ ಅವರು ನೋಡಿಕೊಳ್ಳುತ್ತಿದ್ದಾರೆ. ಗಂಡು ಮಗುವನ್ನು ಹೆಂಡತಿಯ ತಾಯಿಗೆ ಅಂಜನಮ್ಮ ಅವರಿಗೆ ಕೊಡುವುದಿಲ್ಲ ಎಂದು ಹೇಳಿದ ಗಣೇಶ್, ತಾನೇ ನೋಡಿಕೊಳ್ಳುತ್ತೇನೆ ಎಂದಿದ್ದ. ಹೆಂಡತಿ ನಿಧನವಾದ ತನ್ನ ಊರಾದ ಮೈಸೂರು ಜಿಲ್ಲೆಯ, ಪೀರಿಯಾಪಟ್ನ ತಾಲ್ಲೂಕಿನ ಮಾಕೋಡು ಗ್ರಾಮದಲ್ಲಿ ತನ್ನ ತಾಯಿಯ ಜೊತೆಗೆ ಇರುತ್ತಿದ್ದ.
ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ತಾಯಿಗೆ ಕೊಟ್ಟಿದ್ದ ಗಣೇಶ್. ಕಳೆದ 4 ದಿನಗಳ ಹಿಂದೆ ತನ್ನ ತಾಯಿಯ ಜೊತೆಯಲ್ಲೂ ಜಗಳ ಆಡಿಕೊಂಡು, ಮಗುವನ್ನು ಎತ್ತಿಕೊಂಡು ಹೊರಟು ಹೋಗಿದ್ದ ಗಣೇಶ್. ಈ ವೇಳೆ ಮಗುವನ್ನು ಸಾಕಲು ಆಗೋದಿಲ್ಲ ಎಂದು ಹತ್ತಿರವಿದ್ದ ಕೆರೆಗೆ ಒಂದೂವರೆ ವರ್ಷದ ಮಗುವನ್ನು ಬಿಸಾಕಿ, ಮಗುವನ್ನು ಮುಗಿಸಿಬಿಟ್ಟಿದ್ದಾನೆ. ಇಂಥದ್ದೊಂದು ಕೃತ್ಯದಿಂದ ಅನ್ಯಾಯವಾಗಿ ಆ ಮಗು ಪ್ರಾಣ ಬಿಟ್ಟಿದೆ.