Personal Loan: ಮನುಷ್ಯರ ಬದುಕಿನಲ್ಲಿ ಕಷ್ಟಕಾಲ ಎನ್ನುವುದು ಯಾವಾಗ ಹೇಗೆ ಬರುತ್ತದೆ ಎಂದು ಹೇಳಲು ಆಗೋದಿಲ್ಲ. ಆರ್ಥಿಕ ಸಮಸ್ಯೆಗಳು ಬಂದಾಗ ಅದನ್ನು ಬಗೆಹರಿಸಿಕೊಳ್ಳಲು ಮನುಷ್ಯ ಹಲವು ಮಾರ್ಗಗಳನ್ನು ಹುಡುಕುತ್ತಾನೆ. ಅವುಗಳಲ್ಲಿ ಒಂದು ಪರ್ಸನಲ್ ಲೋನ್, ಬ್ಯಾಂಕ್ ಗಳಿಂದ ವೈಯಕ್ತಿಕ ಸಾಲ ಪಡೆಯುತ್ತಾರೆ. ಆದರೆ ಇವುಗಳಿಗೆ ಬಡ್ಡಿ ಮೊತ್ತ ಸಿಕ್ಕಾಪಟ್ಟೆ ಜಾಸ್ತಿ. ಈ ಕಾರಣಕ್ಕೆ ಹಲವರು ಪರ್ಸನಲ್ ಲೋನ್ ಇಂದ ಬದುಕನ್ನು ಹೊರೆ ಮಾಡಿಕೊಳ್ಳುತ್ತಾರೆ.
ಒಂದು ವೇಳೆ ನೀವು ಕೂಡ ಹಣದ ಅವಶ್ಯಕತೆ ಇಂದ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರೆ, ನಿಮಗಾಗಿ ಬೇರೆ ಮಾರ್ಗಗಳನ್ನು ತಿಳಿಸುತ್ತೇವೆ, ಅದರ ಮೂಲಕ ಸಾಲ ಪಡೆದರೆ ನಿಮ್ಮ ಹೊರೆ ಕಡಿಮೆ ಆಗುತ್ತದೆ. ಆ ಸಾಲದ ಮಾರ್ಗಗಳು ಯಾವುವು ಎಂದರೆ, ಪಿಪಿಎಫ್ ಮೇಲೆ ಲೋನ್, ಚಿನ್ನದ ಮೇಲೆ ಸಾಲ ಮತ್ತು ಎಫ್.ಡಿ ಲೋನ್. ಇವುಗಳನ್ನು ಸಹ ನೀವು ಪಡೆದುಕೊಳ್ಳಬಹುದು. ಪರ್ಸನಲ್ ಲೋನ್ ಗಿಂತ ಈ ಸಾಲದ ಮೇಲೆ ನಿಮಗೆ ಕಡಿಮೆ ಬಡ್ಡಿ ಬೀಳುತ್ತದೆ.
ಪಿಪಿಎಲ್ ಅಕೌಂಟ್ ಮೇಲೆ ಸಾಲ :- ಒಂದು ವೇಳೆ ನಿಮ್ಮ ಬಳಿ ಪಿಪಿಎಫ್ ಖಾತೆ ಇದ್ದು, ಅದರಲ್ಲಿ ನೀವು ಹೂಡಿಕೆ ಮಾಡಿದ್ದರೆ, ಆ ಖಾತೆಯ ಮೇಲೆ ಕೂಡ ನೀವು ಸಾಲ ಪಡೆದುಕೊಳ್ಳಬಹುದು. ಈ ರೀತಿಯ ಸಾಲ ಪಡೆಯಲು ಪಿಪಿಎಲ್ ಖಾತೆ ತೆರೆದು ಮಿನಿಮಮ್ 1 ವರ್ಷ ಆಗಿರಬೇಕು. ನೀವು ಪಿಪಿಎಫ್ ಖಾತೆಯಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಾ ಎನ್ನುವುದರ ಮೇಲೆ ನಿಮಗೆ ಸಾಲ ಸಿಗುತ್ತದೆ. ಈ ಖಾತೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ 7.1% ಬಡ್ಡಿ ಸಿಗಲಿದ್ದು, ಇದರ ಮೇಲೆ ನೀವು ಪಡೆಯುವ ಸಾಲಕ್ಕೆ 8.1% ಬಡ್ಡಿದರ ಇರಲಿದೆ.
ಗೋಲ್ಡ್ ಲೋನ್ :- ಪರ್ಸನಲ್ ಲೋನ್ ಗಿಂತ, ಇದು ಕೂಡ ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಸ್ಟೇಟ್ ಬ್ಯಾಂಕ್ ನಲ್ಲಿ ಗೋಲ್ಡ್ ಮೇಲೆ ಸುಮಾರು 3 ಲಕ್ಷದವರೆಗು ಪಡೆಯುವ ವಾಲಕ್ಕೆ ಸಂಸ್ಕರಣಾ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ. ಪ್ರಸ್ತುತ ಸ್ಟೇಟ್ ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ಗೆ 8.70% ಬಡ್ಡಿ ನಿಗದಿ ಮಾಡಲಾಗಿದೆ..ಹಾಗಾಗಿ ಪರ್ಸನಲ್ ಲೋನ್ ಗಿಂತ ಇದು ಕೂಡ ಒಳ್ಳೆಯ ಆಯ್ಕೆ ಆಗಿದೆ.
ಎಫ್.ಡಿ ಲೋನ್ :- ಒಂದು ವೇಳೆ ನೀವು ಯಾವುದಾದರೂ ಬ್ಯಾಂಕ್ ನಲ್ಲಿ ಎಫ್.ಡಿ ಮಾಡಿದ್ದರೆ, ಅದರ ಮೇಲೆ ಕೂಡ ಸಾಲ ಪಡೆಯಬಹುದು. ಎಫ್.ಡಿ ಇಟ್ಟಿರುವ ಒಟ್ಟು ಮೊತ್ತದಲ್ಲಿ ಸುಮಾರು 90 ಇಂದ 95% ವರೆಗು ಹಣವನ್ನು ಸಾಲ ಪಡೆಯಬಹುದು. ಎಫ್.ಡಿ ಮೇಲೆ ತೆಗೆದುಕೊಳ್ಳುವ ಸಾಲಕ್ಕೆ ಸಂಸ್ಕರಣಾ ಶುಲ್ಕ ಇರುವುದಿಲ್ಲ. ಇಲ್ಲಿ ಬಡ್ಡಿದರ ಎಷ್ಟು ಎಂದರೆ, ನಿಮಗೆ ಎಫ್.ಡಿ ಗೆ ಸಿಗುವ ಬಡ್ಡಿಗಿಂತ 1 ಅಥವಾ 2% ಹೆಚ್ಚು ಬಡ್ಡಿ ಪಾವತಿ ಮಾಡಬೇಕಾಗುತ್ತದೆ.