Deepika Padukone: ಯಾರಿಗೂ ಹೆದರಲ್ಲ, ದೇಶ ಬಿಟ್ಟು ಹೋಗಲ್ಲ: ದೀಪಿಕಾ ಪಡುಕೋಣೆ ಹೀಗಂದಿದ್ದು ಯಾರಿಗೆ?

0 18

Deepika Padukone: ಕರ್ನಾಟಕದ ಹುಡುಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ, ಕನ್ನಡದಲ್ಲಿ ಉಪೇಂದ್ರ ಅವರೊಡನೆ ಐಶ್ವರ್ಯ ಸಿನಿಮಾದಲ್ಲಿ ನಟಿಸಿದ ದೀಪಿಕಾ ಪಡುಕೋಣೆ ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ ನಟಿ. ಅತಿದೊಡ್ಡ ಅಭಿಮಾನಿ ಬಳಗ ಗಳಿಸಿಕೊಂಡಿರುವ ದೀಪಿಕಾ ಪಡುಕೋಣೆ ಅವರು ಇದೀಗ ತಮ್ಮ ಪರ್ಸನಲ್ ಲೈಫ್ ಬಗ್ಗೆ ಕೊಟ್ಟಿರುವ ಹೇಳಿಕೆ ಭಾರಿ ವೈರಲ್ ಆಗಿದೆ.

ನಟಿ ದೀಪಿಕಾ ಪಡುಕೋಣೆ ಓಂ ಶಾಂತಿ ಓಂ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು, ಮೊದಲ ಸಿನಿಮಾದಲ್ಲೇ ಸ್ಟಾರ್ ಆದ ದೀಪಿಕಾ ಅವರು, ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿ ಎನ್ನಿಸಿಕೊಂಡಿದ್ದು ಮಾತ್ರವಲ್ಲದೆ, ಹಾಲಿವುಡ್ ಸಿನಿಮಾದಲ್ಲಿ ಕೂಡ ನಟಿಸಿ ಹೆಸರು ಮಾಡಿದ್ದಾರೆ. ದೀಪಿಕಾ ಅವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿ ಕೂಡ ಸಾಕಷ್ಟು ಅಭಿಮಾನಿಗಳಿದ್ದಾರೆ..

ದೀಪಿಕಾ ಪಡುಕೋಣೆ ಅವರು ನಮ್ಮ ದೇಶದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮತ್ತು ಅತಿಹೆಚ್ಚು ಬೇಡಿಕೆ ಹೊಂದಿರುವ ನಟಿ ಕೂಡ ಹೌದು. ಇನ್ನು ದೀಪಿಕಾ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ ಇವರು ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಡನೆ ಮದುವೆಯಾಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮದುವೆ ಬಳಿಕ ಮೊದಲ ಸಾರಿ ರಣವೀರ್ ಮತ್ತು ದೀಪಿಕಾ ಜೊತೆಯಾಗಿ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು.

ಈ ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ, ಕೆರಿಯರ್ ಆರಂಭದಲ್ಲಿ ಅವರು ಎದುರಿಸಿದ ಕಷ್ಟಗಳು, ಅವಮಾನಗಳು ಇದೆಲ್ಲದರ ಬಗ್ಗೆ ದೀಪಿಕಾ ಅವರು ಮಾತನಾಡಿದ್ದಾರೆ. ಮಾಡೆಲ್ ಆಗಿ ಕೆರಿಯರ್ ಶುರು ಮಾಡಿದಾಗ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು ದೀಪಿಕಾ, ಆ ವೇಳೆ ಅವರಿಗೆ ಅನೇಕರು ಪ್ಯಾರಿಸ್ ಗೆ ಹೋಗಿ ಎಂದು ಸಲಹೆ ನೀಡಿದ್ದರಂತೆ, ಅಲ್ಲಿ ಚೆನ್ನಾಗಿ ಹೆಸರು ಮಾಡಬಹುದು ಎಂದು ಹೇಳಿದರಂತೆ. ಆದರೆ ದೀಪಿಕಾ ಅವರು ಯೋಚಿಸಿ, ತಾನೇಕೆ ತನ್ನ ದೇಶ ಬಿಟ್ಟು ಹೋಗಬೇಕು, ಯಾರಿಗೂ ಹೆದರಿಕೊಂಡು ದೇಶ ಬಿಟ್ಟು ಹೋಗಬೇಕಾ ಎಂದು ಯೋಚಿಸಿದ್ದರಂತೆ.

ಇಲ್ಲಿಯೇ ಇದ್ರು ಜಾಗತಿಕ ಮಟ್ಟಕ್ಕೆ ಬೆಳೆಯಬೇಕು ಎಂದುಕೊಂಡಿದ್ದ ದೀಪಿಕಾ, ಅಂದುಕೊಂಡ ಹಾಗೆಯೇ ಇಂದು ಸಾಧನೆ ಮಾಡಿದ್ದಾರೆ. ಈ ವಿಷಯವಾಗಿ ಮುಂದುವರೆದು ಮಾತನಾಡಿದ ದೀಪಿಕಾ ಅವರು, “ಸಾಕಷ್ಟು ಇಂಟರ್ನ್ಯಾಶನಲ್ ಬ್ರ್ಯಾಂಡ್ ಗಳಿಗೆ ಮಾಡೆಲ್ ಆಗಿದ್ದೇನೆ, ಕ್ಯಾನೆಸ್ ಚಿತ್ರೋತ್ಸವಕ್ಕೆ ಜ್ಯುರಿ ಆಗಿ ಹೋದಾಗ ಫ್ರಾನ್ಸ್ ನಲ್ಲಿ ನನ್ನ ಹೋರ್ಡಿಂಗ್ ಹಾಕಿದ್ದರು. ಅದನ್ನು ನೋಡಿ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ ಅನ್ನಿಸಿತು..ನನ್ನ ಬಗ್ಗೆ ಹೆಮ್ಮೆಯಾಯಿತು.. ಎಂದು ಹೇಳಿದ್ದಾರೆ ದೀಪಿಕಾ.

ಈ ರೀತಿಯಾಗಿ ದೀಪಿಕಾ ಅವರು ಆಗ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ, ಇಂದು ಅವರು ಅಂದುಕೊಂಡಿದ್ದನ್ನು ಸಾಧಿಸಿರುವ ತೃಪ್ತಿ ಕೂಡ ಅವರಲ್ಲಿದೆ. ದೀಪಿಕಾ ಅವರು ಐಶ್ವರ್ಯ ರೈ ಅವರ ಹಾಗೆಯೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತದ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ.

Leave A Reply

Your email address will not be published.