Virat Anushka: ವಿರಾಟ್ ಕೊಹ್ಲಿ ಶತಕ ಸಿಡಿಸುತ್ತಿದ್ದ ಹಾಗೆ ಅನುಷ್ಕಾ ಶರ್ಮಾ ಕೊಟ್ಟ ರಿಯಾಕ್ಷನ್ ಏನು ಗೊತ್ತಾ?

Written by Pooja Siddaraj

Published on:

Virat Anushka: ಇಂದು ಭಾರತ ಕ್ರಿಕೆಟ್ ಇತಿಹಾಸದಲ್ಲೇ ಎಲ್ಲರೂ ನೆನಪಿಡುವ ಸುವರ್ಣ ದಿವಸ ಎಂದರೆ ತಪ್ಪಾಗುವುದಿಲ್ಲ. ವಿಶ್ವದ ದಿಗ್ಗಜ ಕ್ರಿಕೆಟಿಗ ಎಂದೇ ಹೆಸರು ಮಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮುರಿದಿದ್ದಾರೆ ಕಿಂಗ್ ಕೊಹ್ಲಿ. ಬಲಿಷ್ಠ ರೆಕಾರ್ಡ್ ಬ್ರೇಕ್ ಮಾಡಿರುವ ಕಾರಣಕ್ಕೆ ವಿರಾಟ್ ಕೊಹ್ಲಿ ಅವರನ್ನು ಇಡೀ ವಿಶ್ವವೇ ಇಂದು ಕೊಂಡಾಡುತ್ತಿದೆ.

ಐಸಿಸಿ ಓಡಿಐ ವರ್ಲ್ಡ್ ಕಪ್ ಭಾರತದಲ್ಲಿಯೇ ನಡೆಯುತ್ತಿದೆ ಎನ್ನುವ ವಿಷಯ ಗೊತ್ತೇ ಇದೆ. ಈ ವರ್ಲ್ಡ್ ಕಪ್ ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ, ಸೋಲನ್ನೇ ಕಾಣದ ತಂಡವಾಗಿದೆ. ಇದುವರೆಗೂ ಟೀಮ್ ಇಂಡಿಯಾ ಅಡಿರುವ ಯಾವ ಪಂದ್ಯದಲ್ಲಿ ಕೂಡ ಸೋತಿಲ್ಲ. ಎಲ್ಲಾ ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್ ನ ಟಾಪ್ ನಲ್ಲಿದೆ. ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದರೆ ತಪ್ಪಲ್ಲ.

ಇಂದು ಓಡಿಐ ವರ್ಲ್ಡ್ ಕಪ್ ನ ಮುಖ್ಯವಾದ ಪಂದ್ಯ ನಡೆದಿದೆ, ಈ ಪಂದ್ಯವು ಭಾರತ ವರ್ಸಸ್ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯುತ್ತಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂ ನಲ್ಲಿ ಇಂದಿನ ಪಂದ್ಯ ನಡೆಯುತ್ತಿದೆ. ಇಂದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಪರವಾಗಿ ಓಪನಿಂಗ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು 47 ರನ್ಸ್ ಗಳಿಸಿ ಔಟ್ ಆದ ಬಳಿಕ ವಿರಾಟ್ ಕೊಹ್ಲಿ ಕ್ರೀಸ್ ಗೆ ಎಂಟ್ರಿ ಕೊಟ್ಟರು.

ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಅದ್ಭುತವಾಗಿಯೇ ನಿಭಾಯಿಸಿದ ವಿರಾಟ್ ಅವರು 1 ಭರ್ಜರಿ ಸಿಕ್ಸರ್, 8 ಫೋರ್ ಹಾಗೂ ಸತತ ರನ್ ಗಳನ್ನು ಕಲೆಹಾಕುವ ಮೂಲಕ ಸೆಂಚುರಿ ಸಿಡಿಸಿ, ಒಟ್ಟು 117 ರನ್ಸ್ ಗಳಿಸಿ ಔಟ್ ಆದರು ವಿರಾಟ್. ಇಂದು ವಿರಾಟ್ ಅವರು ಶತಕ ಸಿಡಿಸುತ್ತಿದ್ದ ಹಾಗೆಯೇ ಇಡೀ ಭಾರತ ವಿರಾಟ್ ಅವರ ಶತಕವನ್ನು ಸಂಭ್ರಮಿಸಿದೆ. ಓಡಿಐ ನಲ್ಲಿ 50ನೇ ಶತಕ ಸಿಡಿಸಿದ್ದಾರೆ ವಿರಾಟ್, ಸಚಿನ್ ತೆಂಡೂಲ್ಕರ್ ಅವರು ಈವರೆಗೂ ಅತಿಹೆಚ್ಚು ಶತಕ ಸಿಡಿಸಿದ ಪ್ಲೇಯರ್ ಆಗಿದ್ದರು.

ಇಂದು ಆ ದಾಖಲೆಯನ್ನು ವಿರಾಟ್ ಅವರು ಮುರಿದಿದ್ದಾರೆ. ವಿರಾಟ್ ಅವರು ಶತಕ ಸಿಡಿಸುತ್ತಿದ್ದ ಹಾಗೆಯೇ ಇಡೀ ಸ್ಟೇಡಿಯಂ ಸಂಭ್ರಮಿಸಿತ್ತು, ಇಂದು ಪಂದ್ಯ ನೋಡಲು ಅನುಷ್ಕಾ ಶರ್ಮಾ ಅವರು ಕೂಡ ಆಗಮಿಸಿದ್ದರು, ಶತಕ ಸಿಡಿಸುತ್ತಿದ್ದ ಹಾಗೆಯೇ ಅನುಷ್ಕಾ ಅವರ ಕಡೆಗೆ ತಿರುಗಿ ಫ್ಲೈಯಿಂಗ್ ಕಿಸ್ ಕೊಟ್ಟರು, ಅನುಷ್ಕಾ ಅವರು ಕೂಡ ಖುಷಿಯಲ್ಲಿ ಎದ್ದು ನಿಂತು ವಿರಾಟ್ ಅವರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಇದೀಗ ಅನುಷ್ಕಾ ವಿರಾಟ್ ಅವರ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಈ ಜೋಡಿ ನೋಡಿ ಸಂತೋಷ ಪಡುತ್ತಿದ್ದಾರೆ.

Leave a Comment