Dhoni: ಅಂದು ಕಾವೇರಿ ವಿಚಾರಕ್ಕೆ ಕನ್ನಡಿಗರ ಪರವಾಗಿ ನಿಂತಿದ್ರು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ, ಆ ಘಟನೆ ಏನು ಗೊತ್ತಾ?

Written by Pooja Siddaraj

Published on:

ಕಾವೇರಿ ವಿವಾದ ನಮ್ಮ ರಾಜ್ಯದಲ್ಲಿ ಈಗಿನಿಂದ ಅಲ್ಲ, ಸಾಕಷ್ಟು ವರ್ಷಗಳಿಂದ ಇದೆ. ಯಾವ ಪಕ್ಷದವರು ಏನೇ ಪ್ರಯತ್ನ ಮಾಡಿದರು ಕೂಡ ಕಾವೇರಿ ವಿವಾದ ಬಗೆ ಹರಿಯುವ ಹಾಗೆ ಕಾಣುತ್ತಿಲ್ಲ. ಚಿತ್ರರಂಗದವರು ಕೂಡ ಹೋರಾಟ ಮಾಡಿದ್ದಾರೆ, ಏನೇ ಪ್ರಯತ್ನ ಮಾಡಿದರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಇರುವ ಬಿಕ್ಕಟ್ಟು ಮಾತ್ರ ಬಗೆಹರಿಯುತ್ತಿಲ್ಲ. ಕೆಲವರು ನಮ್ಮ ರಾಜ್ಯದ ಜನರ ವಿರುದ್ಧವೇ ನಿಂತಿರುವಾಗ ಟೀಮ್ ಇಂಡಿಯಾ ಕ್ಯಾಪ್ಟನ್ ಧೋನಿ ಅವರು ಕಾವೇರಿ ವಿಚಾರದಲ್ಲಿ ಕನ್ನಡಿಗರ ಮನ ಗೆದ್ದಿದ್ದರು ಈ ಘಟನೆ ಬಗ್ಗೆ ನಿಮಗೆ ಗೊತ್ತಾ?

ಕಾವೇರಿ ನೀರು ಹಂಚಿಕೆ ವಿಷಯಕ್ಕೆ ಬಂದರೆ ಒಬ್ಬರಲ್ಲ ಒಬ್ಬರು ಪರ ವಿರೋಧ ಮಾಡುತ್ತಲೇ ಇರುತ್ತಾರೆ. ಇದರಿಂದ ವಿವಾದಗಳು ಹೆಚ್ಚಾಗಿಯೇ ಕಂಡುಬರುತ್ತದೆ. ಈ ವರ್ಷ ಕೂಡ ಕಾವೇರಿ ವಿವಾದ ಕಡಿಮೆ ಆಗಿಲ್ಲ, ಈ ವರ್ಷ ಕೂಡ ಮಳೆ ಬರದ ಕಾರಣ ನಮ್ಮ ರಾಜ್ಯದಲ್ಲೇ ನೀರು ಕಡಿಮೆ ಇರುವಾಗ, ತಮಿಳುನಾಡಿಗೆ ನೀರು ಬಿಡಬೇಕು ಎಂದು ನ್ಯಾಯಾಲಯದಲ್ಲಿ ತೀರ್ಪು ಬಂದಾಗ ನಮ್ಮ ರಾಜ್ಯದಲ್ಲಿ ಹೋರಾಟ ಬಂದ್ ಎಲ್ಲವೂ ಶುರುವಾಗಿತ್ತು.

ಆದರೆ ಅದೊಂದು ದಿನ ಕಾವೇರಿ ವಿಚಾರಕ್ಕೆ ಧೋನಿ ಅವರು ಕನ್ನಡಿಗರನ್ನು ಬಿಟ್ಟು ಕೊಡಲಿಲ್ಲ ಎನ್ನುವುದು ಹಲವರಿಗೆ ಗೊತ್ತಿಲ್ಲ. ಕ್ಯಾಪ್ಟನ್ ಕೂಲ್ ಧೋನಿ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ, ಕ್ಯಾಪ್ಟನ್ ಆಗಿ 3 ಬಾರಿ ಐಸಿಸಿ ಟ್ರೋಫಿ ಗೆದ್ದಿದ್ದಾರೆ, ಐಪಿಎಲ್ ನಲ್ಲಿಯೂ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ಅಂದು ಕಾವೇರಿ ವಿಚಾರಕ್ಕೆ ಧೋನಿ ಅವರು ಕನ್ನಡಿಗರ ಪರ ನಿಂತಿದ್ದರು.

2018ರಲ್ಲಿ ಕೂಡ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ವಿವಾದ ಶುರುವಾಗಿತ್ತು, ಆಗ ಐಪಿಎಲ್ ಟೂರ್ನಿ ಕೂಡ ನಡೆಯುತ್ತಿತ್ತು, ಧೋನಿ ಅವರು ಸಿ.ಎಸ್.ಕೆ ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ಧೋನಿ ಅವರು ಐಪಿಎಲ್ ಪಂದ್ಯ ಆಡುವಾಗ, ಇಡೀ ಸಿ.ಎಸ್.ಕೆ ತಂಡ ತಮಿಳುನಾಡಿಗೆ ಸಪೋರ್ಟ್ ಮಾಡಿ ಕಪ್ಪು ಪಟ್ಟಿ ಧರಿಸಿಕೊಂಡು ಪಂದ್ಯವನ್ನು ಆಡಬೇಕು ಎಂದು ಕೇಳಲಾಗಿತು. ಸಿ.ಎಸ್.ಕೆ ತಂಡದ ಓನರ್ ಕೂಡ ತಮಿಳುನಾಡಿನವರೇ ಎನ್ನುವುದು ಗೊತ್ತಿರುವ ವಿಷಯ..

ಆ ವೇಳೆ ತಮಿಳು ನಟ ಸಿಂಬು ಅವರು ಕೂಡ ಧೋನಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಧೋನಿ ಅವರು ಇದಕ್ಕೆ ಒಪ್ಪಲಿಲ್ಲ, ಅಂದು ಕೆಕೆಆರ್ ತಂಡದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಅಡುವುದಿಲ್ಲ, ಇಲ್ಲಿಗೆ ನಾನು ಬಂದಿರೋದು ಕ್ರಿಕೆಟ್ ಆಡೋದಕ್ಕೆ. ನಾನು ಕರ್ನಾಟಕಕ್ಕೆ ವಿರೋಧಿ ಆಗೋದಕ್ಕೆ ಸಾಧ್ಯವಿಲ್ಲ.. ಎಂದು ಹೇಳಿದ್ದರು. ತಮಿಳುನಾಡಿನ ಜನ ಕೂಡ ಅಂದು ದೊಡ್ಡ ಹೋರಾಟ ಮಾಡಲು ಕಾದಿದ್ದರು, ಆದರೆ ಧೋನಿ ಅವರು ಕನ್ನಡಿಗರ ಪರವಾಗಿ ನಿಂತಿದ್ದರು.

Leave a Comment