ODI World Cup: ನಿನ್ನೆ ಭಾರತದ ವಿರುದ್ಧ ಸೋತು ವಿಶ್ವಕಪ್ ಇಂದ ಹೊರಬಿದ್ದಿರುವ ನ್ಯೂಜಿಲೆಂಡ್ ತಂಡಕ್ಕೆ ಐಸಿಸಿ ಇಂದ ಸಿಕ್ಕ ಹಣವೆಷ್ಟು ಗೊತ್ತಾ?

0 15

ODI World Cup: ಐಸಿಸಿ ಓಡಿಐ ವರ್ಲ್ಡ್ ಕಪ್ ಈ ವರ್ಷ ಭಾರತದಲ್ಲೇ ನಡೆಯುತ್ತಿರುವುದು ಬಹಳ ವಿಶೇಷ. ಓಡಿಐ ವರ್ಲ್ಡ್ ಕಪ್ ಈಗ ಮುಕ್ತಾಯ ಹಂತದಲ್ಲಿದೆ. ಸೆಮಿ ಫೈನಲ್ಸ್ ನ ಪಂದ್ಯ ನಿನ್ನೆಯಷ್ಟೇ ನಡೆದಿದ್ದು, ನಿನ್ನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಭಾರತ ತಂಡ ಸೆಮಿ ಫೈನಲ್ಸ್ ಗೆದ್ದು, ಫೈನಲ್ಸ್ ಗೆ ಎಂಟ್ರಿ ಕೊಟ್ಟಿದೆ. ಸೆಮಿ ಫೈನಲ್ಸ್ ಸೋತ ನ್ಯೂಜಿಲೆಂಡ್ ತಂಡಕ್ಕೆ ಸಿಕ್ಕಿರುವ ಹಣ ಎಷ್ಟು ಗೊತ್ತಾ?

ಈ ವರ್ಷ ಭಾರತ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಆಡಿರುವ ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ಸೋತಿಲ್ಲ. ಪ್ರತಿ ಪಂದ್ಯವನ್ನು ಗೆದ್ದು, ಸೋಲಿಲ್ಲದ ಸರದಾರರು ಎನ್ನಿಸಿಕೊಂಡಿದೆ ಭಾರತ ತಂಡ. ನಮ್ಮ ತಂಡದ ಎಲ್ಲಾ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ಸಿರಾಜ್ ಎಲ್ಲರ ಪ್ರದರ್ಶನವು ಅದ್ಭುತ ಎಂದು ಹೇಳಬಹುದು.

ಇನ್ನೇನು ಮುಕ್ತಾಯ ಹಂತದಲ್ಲಿರುವ ಟೂರ್ನಿಯಲ್ಲಿ ನಿನ್ನೆ ಸೆಮಿ ಫೈನಲ್ಸ್ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಸೋತಿದೆ. ಸೋತ ತಂಡಕ್ಕೆ ಸಿಕ್ಕ ಹಣ ಎಷ್ಟು ಎಂದು ನೋಡುವುದಾದರೆ, ಐಸಿಸಿ ವರ್ಲ್ಡ್ ಕಪ್ ನಲ್ಲಿ ಯಾವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ ಎಂದು ನೋಡುವುದಾದರೆ, ಓಡಿಐ ವರ್ಲ್ಡ್ ಕಪ್ ಗಾಗಿ ಈಗಾಗಲೇ ಐಸಿಸಿ 10 ಮಿಲಿಯನ್ ಯು.ಎಸ್.ಡಿ ಘೋಷಣೆ ಮಾಡಿದೆ. ಈ ಟೂರ್ನಿಯಲ್ಲಿ ಆಡುವ, ಗೆಲ್ಲುವ, ಟ್ರೋಫಿ ಗೆಲ್ಲುವ ತಂಡಗಳಿಗೆ ಸಿಗೋದು ಎಷ್ಟು ಎಂದು ನೋಡುವುದಾದರೆ..

ಒಂದು ಪಂದ್ಯ ಗೆದ್ದರು ಕೂಡ ಹಣ ಸಿಗಲಿದೆ, ಅಫ್ಘಾನಿಸ್ತಾನ್, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೆದರ್ ಲ್ಯಾನ್ಡ್ಸ್ ಈ 6 ತಂಡಗಳು ಫೈನಲ್ಸ್ ಗೆ ಲಗ್ಗೆ ಇಡದ ಕಾರಣ ಇವರಿಗೆ 100,000 USD ಅಂದರೆ ಸುಮಾರು 84 ಲಕ್ಷ ಹಣ ಸಿಕ್ಕಿದೆ. ಲೀಗ್ ಪಂದ್ಯ ಗೆದ್ದ ತಂಡಕ್ಕೂ 40,000 USD ಸುಮಾರು 33 ಲಕ್ಷ ಪ್ರೋತ್ಸಾಹ ಧನ ಸಿಗುತ್ತದೆ. ಇನ್ನು ಟಾಪ್ 4 ನಲ್ಲಿ ಭಾರತ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳಿದ್ದವು.

ನಿನ್ನೆಯ ಸೆಮಿ ಫೈನಲ್ಸ್ ಪಂದ್ಯದಲ್ಲಿ ಸೋತ ನ್ಯೂಜಿಲೆಂಡ್ ತಂಡ ವರ್ಲ್ಡ್ ಕಪ್ ಇಂದ ಹೊರಬಿದ್ದಿದೆ, ಈ ತಂಡಕ್ಕೆ 1,60,000 USD ಸಿಗಲಿದ್ದು, ವರ್ಲ್ಡ್ ಕಪ್ ಗೆಲ್ಲುವ ತಂಡಕ್ಕೆ 4,00,000 USD ಸಿಗಲಿದೆ. ರನ್ನರ್ ಅಪ್ ಆಗುವ ತಂಡಕ್ಕೆ 2,00,000 USD ಹಣ ಸಿಗಲಿದೆ.

Leave A Reply

Your email address will not be published.