Ind vs Pak: ಇಂಡಿಯಾ ವರ್ಸಸ್ ಪಾಕಿಸ್ತಾನ್ ಪಂದ್ಯದ ನಡುವೆ ಬರುವ 10 ಸೆಕಂಡ್ನ್ ಜಾಹೀರಾತಿನ ಬೆಲೆ ಎಷ್ಟು ಗೊತ್ತಾ? ಇಷ್ಟೊಂದು ಲಕ್ಷಾನ?

Written by Pooja Siddaraj

Published on:

ಓಡಿಐ ವರ್ಲ್ಡ್ ಕಪ್ ಪಂದ್ಯಗಳು ಭಾರತದಲ್ಲಿ ನಡೆಯುತ್ತಿದೆ, ಈಗಾಗಲೇ ಭಾರತ ತಂಡ ಎರಡು ಪಂದ್ಯಗಳನ್ನಾಡಿದ್ದು ಎರಡರಲ್ಲೂ ಗೆದ್ದು ಬೀಗಿದೆ. ಮುಂದಿನ ಪಂದ್ಯ ನಾಳೆ ಆಕ್ಟೊಬರ್ 14ರಂದು ಅಹಮದಾಬಾದ್ ನಲ್ಲಿ ನಡೆಯಲಿದ್ದು, ಪಾಕಿಸ್ತಾನ್ ತಂಡದ ವಿರುದ್ಧ ಈ ಪಂದ್ಯ ನಡೆಯಲಿದೆ. ಇಂಡಿಯಾ ಪಾಕಿಸ್ತಾನ್ ಮ್ಯಾಚ್ ಎಂದರೆ ಕ್ರೇಜ್ ಎಷ್ಟರ ಮಟ್ಟಿಗೆ ಇರುತ್ತದೆ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ..

ಅದರಲ್ಲೂ ಭಾರತದಲ್ಲಿಯೇ ಪಂದ್ಯ ನಡೆಯುತ್ತಿದ್ದು, ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕಿಂತ ಬೇರೆ ಹಬ್ಬವಿಲ್ಲ. ಮೊದಲಿಗೆ ಈ ಪಂದ್ಯ ಆಕ್ಟೊಬರ್ 15ರಂದು ನಡೆಯಬೇಕಿತ್ತು, ಆದರೆ ಅಂದು ನವರಾತ್ರಿ ಹಬ್ಬದ ಮೊದಲ ದಿನ ಆಗಿದ್ದು, ಈ ದಿನ ಪಂದ್ಯ ನಡೆದರೆ ಸೆಕ್ಯೂರಿಟಿ ಕೊರತೆ ಉಂಟಾಗಬಹುದು ಎನ್ನುವ ಕಾರಣಕ್ಕೆ ಆಕ್ಟೊಬರ್ 14ರಂದು ಇಂಡಿಯಾ ಪಾಕಿಸ್ತಾನ್ ಪಂದ್ಯವನ್ನು ಶೆಡ್ಯೂಲ್ ಮಾಡಲಾಗಿದೆ.

ಪಂದ್ಯ ನಡೆಯುವಾಗ ಅದರ ನಡುವೆ 10 ಸೆಕೆಂಡ್ ಜಾಹಿರಾತು ಬರುತ್ತದೆ, ಈ ಜಾಹೀರಾತಿಗೆ ಅದೆಷ್ಟು ಲಕ್ಷ ಕೊಡಲಾಗುತ್ತಿದೆ ಎನ್ನುವುದು ಗೊತ್ತಾದರೆ ನಿಮಗೆ ನಿಜಕ್ಕೂ ಶಾಕ್ ಆಗೋದು ಗ್ಯಾರಂಟಿ. ಓಡಿಐ ವರ್ಲ್ಡ್ ಕಪ್ ಡಿಸ್ನಿ+ಹಾಟ್ ಸ್ಟಾರ್ ಆಪ್ ನಲ್ಲಿ ಸ್ಟ್ರೀಮ್ ಆಗುತ್ತಿದೆ. ಹಾಟ್ ಸ್ಟಾರ್ ಈಗ 10 ಸೆಕೆಂಡ್ ನ ಒಂದು ಜಾಹೀರಾತಿಗೆ 25 ರಿಂದ 30 ಲಕ್ಷ ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಹೌದು, ಕೇವಲ ಒಂದು ಜಾಹೀರಾತಿಗೆ ಇಷ್ಟು ಹಣ ಚಾರ್ಜ್ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಬೇರೆ ಪಂದ್ಯದಲ್ಲಿ ಒಂದು ಜಾಹೀರಾತಿಗೆ 15 ರಿಂದ 18 ಲಕ್ಷ ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಆದರೆ ಇಂಡಿಯಾ ಪಾಕಿಸ್ತಾನ್ ಪಂದ್ಯ ಆಗಿರುವ ಕಾರಣ, ಈ ಹೈ ವೋಲ್ಟೇಜ್ ಪಂದ್ಯದ ಜಾಹೀರಾತಿಗೆ ಇಷ್ಟು ದೊಡ್ಡ ಮೊತ್ತವನ್ನು ಚಾರ್ಜ್ ಮಾಡಲಾಗುತ್ತಿದೆ. ಏಷಿಯಾ ಕಪ್ ಟೂರ್ನಿ ನಡೆಯುವಾಗ ಜಿಯೋ ಸಿನಿಮಾದಲ್ಲಿ ಮ್ಯಾಚ್ ಗಳು ಸ್ಟ್ರೀಮ್ ಆಗುತ್ತಿದ್ದವು, ಆಗ ಜಿಯೋ ಕೂಡ ಇಷ್ಟೇ ಹಣ ಚಾರ್ಜ್ ಮಾಡಿತ್ತು.

ಇದೀಗ ಹಾಟ್ ಸ್ಟಾರ್ ಕೂಡ ಅಷ್ಟೇ ಚಾರ್ಜ್ ಮಾಡುತ್ತಿದ್ದು, ಓಡಿಐ ವರ್ಲ್ಡ್ ಕಪ್ ಬಳಿಕ ಬಿಸಿಸಿಐ ಜೊತೆಗೆ ಹಾಟ್ ಸ್ಟಾರ್ ಒಪ್ಪಂದ ಮುಗಿಯಲಿದೆ. ಇನ್ನು ನಾಳೆಯ ಪಂದ್ಯ ಇರುವುದರಿಂದ ಅಹಮಾದಾಬಾದ್ ನಲ್ಲಿರುವ ಎಲ್ಲಾ ಹೋಟೆಲ್ ಗಳು ಕೂಡ ಬುಕ್ ಆಗಿ, ಅತಿಹೆಚ್ಚು ಹಣ ಚಾರ್ಜ್ ಮಾಡುತ್ತಿವೆ ಹೋಟೆಲ್ ಗಳು. ಐಷಾರಾಮಿ ಹೋಟೆಲ್ ಗಳಲ್ಲಿ ಒಂದು ರೂಮ್ ಗೆ 1 ಲಕ್ಷದವರೆಗು ಚಾರ್ಜ್ ಮಾಡುತ್ತಿವೆ.

Leave a Comment