ದೇಶದಲ್ಲಿ ಹಣದುಬ್ಬರ ಹೆಚ್ಚಾಗಿ, ಸಾಮಾನ್ಯ ಜನರ ಜೀವನ ಇದರಿಂದ ಅಸ್ತವ್ಯಸ್ತವಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಇಂದಾಗಿ ಜನರು ಅವುಗಳನ್ನು ಕೊಂಡುಕೊಳ್ಳುವುದು ಸಹ ಕಷ್ಟವಾಗುತ್ತಿತ್ತು. ಹಣದುಬ್ಬರದ ಕಾರಣ ಟೊಮ್ಯಾಟೋ ಬೆಲೆ ಸಿಕ್ಕಾಪಟ್ಟೆ ಏರಿಕೆ ಆಗಿತ್ತು, ಇದರಿಂದ ಒಂದಷ್ಟು ದಿನಗಳ ಕಾಲ ಜನರು ಟೊಮ್ಯಾಟೋ ಕೊಂಡುಕೊಳ್ಳುವುದಕ್ಕೆ ಕಷ್ಟಪಟ್ಟರು..
ಈಗ ಟೊಮ್ಯಾಟೋ ಬೆಲೆ ಇಳಿಕೆ ಆಗಿದೆ, ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದೆ ಎಂದುಕೊಳ್ಳುವಾಗಲೇ ಈರುಳ್ಳಿ ಬೆಲೆ ಏರಿಕೆ ಆಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಹೌದು, ರಾಜ್ಯದಲ್ಲಿ ಈಗ ಈರುಳ್ಳಿ ಪೂರೈಕೆ ಕಡಿಮೆ ಆಗುತ್ತಿದೆ. ನಮ್ಮ ರಾಜ್ಯದ ಜಿಲ್ಲೆಗಳಿಂದ ಈರುಳ್ಳಿ ಪೂರೈಕೆ ಕಡಿಮೆ ಆಗಿದೆ. ಇಷ್ಟು ದಿವಸ ನಾಸಿಕ್ ಮತ್ತು ಪುಣೆ ಇಂದ ಈರುಳ್ಳಿ ಪೂರೈಕೆ ಮಾಡಿಕೊಳ್ಳಲಾಗುತ್ತಿತ್ತು, ಆದರೆ ಅಲ್ಲಿಯೂ ಸ್ಟಾಕ್ ಇಲ್ಲದೆ ಈರುಳ್ಳಿ ಪೂರೈಕೆ ಕಡಿಮೆ ಆಗಿದೆ..
ಈರುಳ್ಳಿ ಪ್ರತಿದಿನ ಅಡುಗೆಯಲ್ಲಿ ಬಳಸುವ ವಸ್ತು, ಆದರೆ ಮುಂದಿನ ಕೆಲವು ದಿನಗಳಲ್ಲಿ ಈರುಳ್ಳಿ ವಿಪರೀತ ಏರಿಕೆ ಆಗಬಹುದು ಎನ್ನಲಾಗುತ್ತಿದ್ದು, ಮಹಿಳೆಯರು ಈರುಳ್ಳಿ ಇಲ್ಲದೆ ಅಡುಗೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಳೆದ ವಾರದ ವರೆಗು ಒಂದು ಕೆಜಿ ಈರುಳ್ಳಿ ಬೆಲೆ 15 ರಿಂದ 20 ರೂಪಾಯಿ ಇತ್ತು, ಆದರೆ ಈಗ 30 ರಿಂದ 40 ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಇನ್ನು ಜಾಸ್ತಿ ಆಗಬಹುದು ಎಂದು ಕೂಡ ಹೇಳಲಾಗುತ್ತಿದೆ.
ಪ್ರಸ್ತುತ ನಾಫೆಡ್ ಇಂದ ಈರುಳ್ಳಿ ಪೂರೈಕೆ ಆಗುತ್ತಿದೆ.. ಯಶವಂತಪುರ ಮಾರ್ಕೆಟ್ ಗೆ ಪ್ರತಿದಿನ 1.20 ಲಕ್ಷ ಈರುಳ್ಳಿ ಚೀಲಗಳು ಬರುತ್ತಿದ್ದವು ಆದರೆ ಈಗ 30% ಕಡಿಮೆ ಆಗಿ, 60 ರಿಂದ 70 ಸಾವಿರ ಚೀಲ ಈರುಳ್ಳಿ ಮಾತ್ರ ಬರುತ್ತಿದೆ, ಮುಂದಿನ ದಿನಗಳಲ್ಲಿ ಇನ್ನು ಕಡಿಮೆ ಆಗಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿ ಈರುಳ್ಳಿ ಬೆಲೆ ಗಗನಕ್ಕೆ ಏರುವ ಎಲ್ಲಾ ಲಕ್ಷಣವಿದ್ದು, ಜನರು ಈಗಿನಿಂದಲೇ ಈರುಳ್ಳಿ ಇಲ್ಲದೆ ಅಡುಗೆ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.