ಶ್ರೀರಾಮುಲು ಮಾಡಿದ ಜನಸೇವೆಯ ಬಗ್ಗೆ ವೈರಲ್ ಆಗ್ತಿದೆ “ಶ್ರೀರಾಮುಲು ಹಾಡು”

0 975

ಬಳ್ಳಾರಿಯಲ್ಲಿ ಸಾಧಾರಣ ಹಿನ್ನೆಲೆಯಿಂದ ಬಂದ ಒಬ್ಬ ಗಮನಾರ್ಹ ವ್ಯಕ್ತಿ ಇವರು. ಅಣ್ಣ ಶ್ರೀ ರಾಮುಲು ಬಗ್ಗೆ ಇತ್ತೀಚೆಗೆ ಯೂಟ್ಯೂಬ್ ಮತ್ತು ವಿವಿಧ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಅದ್ಭುತ ಹಾಡೊಂದು ಎಲ್ಲಾ ಕಡೆಯಲ್ಲಿಯೂ ಕೇಳಿ ಬರುತ್ತಿದೆ.

ಶ್ರೀ ರಾಮುಲು ಅವರು ಬಳ್ಳಾರಿ ಮತ್ತು ಕರ್ನಾಟಕಕ್ಕೆ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅವರ ಸಾಧನೆಗಳ ಬಗ್ಗೆ ಈ ಹಾಡು ಎಲ್ಲವನ್ನು ಹೇಳುತ್ತದೆ. ಈ ಹಾಡನ್ನು ರಾಜೇಂದ್ರ ಅವರು ಬರೆದಿದ್ದಾರೆ ಮತ್ತು ರವಿ ಕಲ್ಯಾಣ ಅವರು ಸಂಯೋಜಿಸಿದ್ದಾರೆ, ನಲಗೊಂಡ ಗದ್ದರ್ ಅವರು ಹಾಡಿದ್ದಾರೆ. ಇನ್ನು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಬಳ್ಳಾರಿಯಿಂದ ಶ್ರೀ ರಾಮುಲು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಹಾಡು ರಿಲೀಸ್ ಆಗಿದ್ದು, ಕೇಳುಗರು ಹಾಗೂ ಶ್ರೀರಾಮುಲು ಅಭಿಮಾನಿಗಳು ಖುಷಿಯಾಗಿದ್ದಾರೆ. ಮೇ 7 ರಂದು ಲೋಕಸಭೆ ಚುನಾವಣೆ ನಡೆಯಲಿದ್ದು, ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಶ್ರೀರಾಮುಲು ಅವರು ಮಾಡಿದ ಕೆಲಸ ಒಂದಲ್ಲ ಎರಡಲ್ಲ ಹತ್ತು ಹಲವು ರೀತಿಯಲ್ಲಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸಿದ್ದಾರೆ ಇವರ ಸೇವೆ ಅವಿಸ್ಮರಣೀಯ. ಬಡವರಿಂದ ಹಿಡಿದು ಎಲ್ಲಾ ವರ್ಗದ ಜನರಿಗೂ ಕೂಡ ಇವರು ಮಾಡಿದ ಸಹಾಯ ಮರೆಯುವಂತಿಲ್ಲ. ನಮ್ಮ ಕನ್ನಡಮ್ಮನ ಹೆಮ್ಮೆಯ ನಾಯಕ ಇವರು. ಅವರ ಸೇವೆ ನಿರಂತರವಾಗಿ ನಡೆಯಲಿ ಎಂದು ಶ್ರೀರಾಮುಲು ಅವರ ಅಭಿಮಾನಿಗಳು ಆಶಿಸುತ್ತೇವೆ ಇನ್ನು ಹೆಚ್ಚಿನ ಸೇವೆಯನ್ನು ಮಾಡುವಂತಾಗಲಿ, ಜೈ ಕನ್ನಡಾಂಬೆ!

Leave A Reply

Your email address will not be published.