News: ದಪ್ಪವಿದ್ದೀನಿ, ತೂಕ ಕಡಿಮೆ ಆಗುತ್ತಿಲ್ಲ ಎಂದು ನೋಟ್ ಬರೆದಿಟ್ಟು ಪ್ರಾಣ ಕಳೆದುಕೊಂಡ ಎಂಬಿಬಿಎಸ್ ವಿದ್ಯಾರ್ಥಿನಿ!

0 41

News: ಕೆಲವೊಮ್ಮೆ ನಾವು ದುಡುಕಿ ತೆಗೆದುಕೊಳ್ಳುವ ನಿರ್ಧಾರದಿಂದ ನಮ್ಮ ಜೀವನ ಮಾತ್ರವಲ್ಲದೆ, ನಮ್ಮ ಇಡೀ ಕುಟುಂಬದ ಭವಿಷ್ಯಕ್ಕೆ ಸಮಸ್ಯೆ ಆಗಿಬಿಡುತ್ತದೆ. ಹಾಗಾಗಿ ಬದುಕಲ್ಲಿ ಎಷ್ಟೇ ಕಷ್ಟಬಂದರು ಕೂಡ ಯೋಚಿಸಿ, ಎಲ್ಲವೂ ಸರಿಹೋದರೆ ಮಾತ್ರ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದೆ ಹೋದರೆ ನಾವು ತೆಗೆದುಕೊಳ್ಳುವ ನಿರ್ಧಾರದಿಂದ ನಾವೇ ಇಲ್ಲದ ಹಾಗೆ ಆಗಿಬಿಡಬಹುದು.

ಈಗಿನ ಕಾಲದ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ಯಾವ ಕಾರಣಕ್ಕೆ ಡಿಪ್ರೆಷನ್ ಗೆ ಒಳಗಾಗುತ್ತಾರೆ, ಯಾತಕ್ಕಾಗಿ ತಮ್ಮ ಬದುಕಿಗೆ ಸಮಸ್ಯೆ ಆಗುವ ಹಾಗೆ ಮಾಡಿಕೊಳ್ಳುತ್ತಾರೆ ಎಂದು ಊಹಿಸುವುದು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಹಲವು ಸಾರಿ ಮನಸ್ಸು ದುರ್ಬಲವಾಗಿದ್ದಾಗ ತೆಗೆದುಕೊಳ್ಳುವ ನಿರ್ಧಾರದಿಂದ ಆಗುವ ಅನಾಹುತ ಎಂದಿಗೂ ಸರಿಪಡಿಸಲಾಗದ ಹಂತಕ್ಕೆ ತಲುಪಿಬಿಡುತ್ತದೆ..

ಅಂಥ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ, ಅಂಥದ್ದೇ ಒಂದು ಘಟನೆಯನ್ನು ಇಂದು ನಿಮಗೆ ತಿಳಿಸುತ್ತೇವೆ, ಈ ಘಟನೆ ನಡೆದಿರುವುದು ಮಂಗಳೂರಿನಲ್ಲಿ, ಇಲ್ಪಿನ ಎಸ್.ಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಮಾಡುತ್ತಿದ್ಸ ವೈದ್ಯಕೀಯ ವಿದ್ಯಾರ್ಥಿನಿ, ತಾನು ದಪ್ಪಗಿರುವ ಕಾರಣ ಪ್ರಾಣ ಕಳೆದುಕೊಂಡಿದ್ದಾಳೆ. ಆಕೆ ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ.

ಆಕೆಗೆ ಈಗ 20 ವರ್ಷ, ಹಾಸ್ಟೆಲ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದಿಂದ ಕಕೆಳಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ತಾನು ದಪ್ಪಗಿದ್ದು, ಎಷ್ಟೇ ಪ್ರಯತ್ನ ಪಟ್ಟರು ಸಣ್ಣ ಆಗಲು ಸಾದ್ಜ್ಯ ಆಗುತ್ತಿಲ್ಲ ಎಂದು ಈ ರೀತಿ ಮಾಡಿಕೊಂಡಿದ್ದಾರೆ. “ನಾನು ತುಂಬಾ ದಪ್ಪ ಇದ್ದೀನಿ. ಎಂಬಿಬಿಎಸ್​ ಮುಗಿಸಲೇಬೇಕು ಅನ್ನೋ ಆಸೆ ಇದೆ. ಆದರೆ, ನನ್ನ ಸೌಂದರ್ಯಕ್ಕೆ ನಾನು ದಪ್ಪ ಆಗಿರೋದೇ ಅಡ್ಡಿಯಾಗಿದೆ.

ತೂಕ ಕಡಿಮೆ ಮಾಡಲು ಎಷ್ಟು ಟ್ರೈ ಮಾಡಿದ್ರೂ ಕಡಿಮೆ ಆಗುತ್ತಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಆಗಿದ್ದೇನೆ..” ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಹಲವು ಪುಟಗಳ ಡೆತ್ ನೋಟ್ ಬರೆದು ಇಟ್ಟಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಆತುರದ ನಿರ್ಧಾರಕ್ಕೆ ಒಂದು ಜೀವವೇ ಹೋಗಿದೆ.

Leave A Reply

Your email address will not be published.