Varthur Santhosh: ವರ್ತೂರ್ ಸಂತೋಷ್ ಅವರಿಗೆ ನಿಜಕ್ಕೂ ಮದುವೆ ಆಗಿದ್ಯಾ? ವೈರಲ್ ಆಗಿದೆ ಮದುವೆ ಫೋಟೋಸ್!

0 20

Varthur Santhosh: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವವರು ಯಾರು ಎನ್ನುವುದರ ಜೊತೆಗೆ ಒಂದು ದೊಡ್ಡ ಟ್ವಿಸ್ಟ್ ಸಹ ಇತ್ತು, ಇನ್ನು ಯಾರು ಎಲಿಮಿನೇಟ್ ಆಗಿಲ್ಲ. ಕಿಚ್ಚ ಸುದೀಪ್ ಅವರು ವರ್ತೂರ್ ಸಂತೋಷ್ ಅವರನ್ನು ಮನೆಯಿಂದ ಸೇವ್ ಮಾಡಿದ್ದಾರೆ. ವರ್ತೂರ್ ಸಂತೋಷ್ ಅವರೇ ನೀವು ಸೇಫ್ ಆಗಿದ್ದೀರಿ ಎಂದು ಹೇಳಿದಾಗ ಸಂತೋಷ್ ಅವರು ಮನೆಯಿಂದ ಹೊರಗಡೆ ನಡೆದ ಒಂದು ಘಟನೆ ಇಂದ ನನಗೆ ಮನೆಯಲ್ಲಿ ಇರೋದಕ್ಕೆ ಆಗ್ತಾ ಇಲ್ಲ.

ನಾನು ಹೋಗ್ತೀನಿ ಎಂದು ಕಣ್ಣೀರು ಹಾಕುತ್ತಾರೆ. ಆಗ ಸುದೀಪ್ ಅವರು ವರ್ತೂರ್ ಸಂತೋಷ್ ಅವರಿಗೆ ಸುಮಾರು 34 ಲಕ್ಷದ 15 ಸಾವಿರ ವೋಟ್ ಗಳು ಬಂದಿವೆ ಎನ್ನುವುದನ್ನು ಹೇಳುತ್ತಾರೆ. ಹಾಗೆಯೇ ಇದು ಜನರ ತೀರ್ಮಾನ ತಾವು ಜನರ ವಿರುದ್ಧ ಹೋಗೋದಿಲ್ಲ ಎಂದು ಹೇಳುವ ಸುದೀಪ್ ಅವರು ವೇದಿಕೆಯಿಂದ ಹೊರಹೋಗಿದ್ದಾರೆ. ಇತ್ತ ವರ್ತೂರ್ ಸಂತೋಷ್ ಅವರನ್ನು ಮನೆಯವರು ಮನೆಯಲ್ಲೇ ಇರಿ ಎಂದು ಕನ್ವಿನ್ಸ್ ಮಾಡಲು ಪ್ರಯತ್ನ ಮಾಡಿದರು ಅವರು ಕೇಳಲಿಲ್ಲ.

ವರ್ತೂರ್ ಸಂತೋಷ್ ಅವರಿಗೆ ಅರ್ಥ ಮಾಡಿಸಿ, ಹೊರಗಡೆ ಯಾರಿಗೂ ಏನು ತೊಂದರೆ ಆಗಿಲ್ಲ ಎಂದು ಸುದೀಪ್ ಅವರು ಹೇಳುವ ಪ್ರಯತ್ನ ಮಾಡಿದರು ಸಹ, ಸಂತೋಷ್ ಅವರು ಅರ್ಥ ಮಾಡಿಕೊಳ್ಳದೆ, ಹೊರಗೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದರು. ಮನೆಯ ಸ್ಪರ್ಧಿಗಳು ಕೂಡ ಸಂತೋಷ್ ಅವರೊಡನೆ ಮಾತನಾಡಿ, ಎಲ್ಲವನ್ನು ಸರಿಪಡಿಸಲು ಪ್ರಯತ್ನ ಪಟ್ಟರು ಸಹ, ಸಂತೋಷ್ ಅವರು ಯಾರ ಮಾತನ್ನು ಕೇಳದೇ, ಹೊರಗೆ ಹೋಗಲೇಬೇಕು ಎಂದಿದ್ದರು.

ಕಿಚ್ಚ ಸುದೀಪ್ ಅವರು ಜನರ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ವೇದಿಕೆಯಿಂದ ಹೊರಟು ಬಿಟ್ಟರು. ಸಧ್ಯಕ್ಕೆ ಬಿಗ್ ಬಾಸ್ ಮನೆಯಲ್ಲೇ ಇರುವ ವರ್ತೂರ್ ಸಂತೋಷ್ ಅವರೊಡನೆ ಗೆಸ್ಟ್ ಆಗಿ ಬಂದಿದ್ದ ಸುಶ್ಮಾ ಅವರು ಬಂದು ಮಾತನಾಡಿದರು ಕೂಡ ಸಂತೋಷ್ ಅವರು ತಾವು ಹೊರಗಡೆ ಹೋಗಬೇಕು ಎಂದೇ ಹೇಳಿದರು. ಇಂದಿನ ಸಂಚಿಕೆಯಲ್ಲಿ ವರ್ತೂರ್ ಸಂತೋಷ್ ಅವರ ಅಮ್ಮ ಬಿಗ್ ಬಾಸ್ ಮನೆಗೆ ಬಂದು ಮಗನಿಗೆ ಊಟ ಮಾಡಿಸಿ, ತನ್ನ ರಿಕ್ವೆಸ್ಟ್ ನಡೆಸಿಕೊಡು ಎಂದು ಕೇಳಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಈ ರೀತಿ ನಡೆಯುತ್ತಿದೆ, ಆದರೆ ಹೊರಗಡೆ ಬೇರೆಯದೇ ಸುದ್ದಿಗಳು ವೈರಲ್ ಆಗುತ್ತಿದ್ದು, ವರ್ತೂರ್ ಸಂತೋಷ್ ಅವರ ಮದುವೆ ಫೋಟೋಸ್ ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ವರ್ತೂರ್ ಸಂತೋಷ್ ಅವರಿಗೆ ಮದುವೆ ಆಗಿಲ್ಲ, ಸಿಂಗಲ್ ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಅವರ ಮದುವೆ ಫೋಟೋಸ್ ವೈರಲ್ ಆಗಿದ್ದು, ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಆದರೆ ಫೋಟೋಸ್ ಅಂತೂ ವೈರಲ್ ಆಗಿದೆ.

Leave A Reply

Your email address will not be published.