Viral News: ಕೆಳಗೆ ಬಿದ್ದ ಫೋನ್ ತೆಗೆದುಕೊಳ್ಳಲು, ಮೆಟ್ರೋ ಟ್ರ್ಯಾಕ್ ಒಳಗೆ ಇಳಿದ ಮಹಿಳೆ! ಬೆಂಗಳೂರಿನ ಮೆಟ್ರೋ ಸಿಬ್ಬಂದಿ ಶಾಕ್!

0 24

Viral News: ನಮಗೆಲ್ಲಾ ಗೊತ್ತಿರುವ ಹಾಗೆ ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ಮೆಟ್ರೋನಲ್ಲಿ ಓಡಾಡುತ್ತಾರೆ. ಮೆಟ್ರೋ ನಲ್ಲಿ ಓಡಾಡುವುದರಿಂದ ಸಮಯ ಉಳಿತಾಯ ಆಗುತ್ತದೆ. ಅದರ ಜೊತೆಗೆ ಮೆಟ್ರೋ ನಲ್ಲಿ ಪ್ರಯಾಣ ಮಾಡುವವರು ಬಹಳ ಹುಷಾರಾಗಿರಬೇಕು. ಯಾಕೆಂದರೆ, ಮೆಟ್ರೋ ಎಲೆಕ್ಟ್ರಿಕ್ ಟ್ರೇನ್ ಆಗಿದ್ದು, ಇದರ ಟ್ರ್ಯಾಕ್ ಹತ್ತಿರಕ್ಕೆ ಸುಳಿಯಬಾರದು.

ಈ ಬಗ್ಗೆ ಮೆಟ್ರೋ ಸಿಬ್ಬಂದಿಗಳು ಎಚ್ಚರಿಕೆ ನೀಡುತ್ತಾರೆ. ಆದರೆ ನಿನ್ನೆ ಇಂದಿರಾನಗರ ಮೆಟ್ರೋ ಸ್ಟೇಶನ್ ನಲ್ಲಿ ಮಹಿಳೆ ಒಬ್ಬರು ಮೆಟ್ರೋ ಟ್ರ್ಯಾಕ್ ಗೆ ಇಳಿದಿದ್ದಾರೆ. ತಮ್ಮ ಕೈಯಲ್ಲಿದ್ದ ಫೋನ್ ಕೆಳಗೆ ಬಿದ್ದ ಕಾರಣ ಆಕೆ ಮೆಟ್ರೋ ಟ್ರ್ಯಾಕ್ ಒಳಗೆ ಇಳಿದಿದ್ದು, ತಕ್ಷಣವೇ ಸಿಬ್ಬಂದಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಇದರಿಂದ ಆಕೆಯ ಪ್ರಾಣ ಉಳಿದಿದೆ ಎಂದು ತಿಳಿದುಬಂದಿದೆ.

ಮೆಟ್ರೋ ಸಿಬ್ಬಂದಿಗಳು ಪ್ರತಿ ಬಾರಿ ಎಲ್ಲರಿಗೂ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಆದರೆ ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳವುದಿಲ್ಲ, ಒಂದು ವೇಳೆ ಸಿಬ್ಬಂದಿಗಳು ಎಲೆಕ್ಟ್ರಿಸಿಟಿ ಬಂದ್ ಮಾಡಿಲ್ಲ ಎಂದರೆ ಆಕೆಯ ಪ್ರಾಣಕ್ಕೆ ಆಪತ್ತಾಗುತ್ತಿತ್ತು. ಈ ಘಟನೆ ಇಂದ ಜನರಿಗೂ ತೊಂದರೆ ಉಂಟಾಯಿತು. ಪರ್ಪಲ್ ಲೈನ್ ಮೆಟ್ರೋ ದಲ್ಲಿ ನಿನ್ನೆ ಸಂಜೆ 6;40ಕ್ಕೆ ಈ ಘಟನೆ ನಡೆದಿದೆ. ಇದರಿಂದ 15 ನಿಮಿಷಗಳ ಕಾಲ ಮೆಟ್ರೋ ಟ್ರೇನ್ ನಿಂತಿತ್ತು.

ಇದರಿಂದ ಬೇರೆ ಪ್ರಯಾಣಿಕರಿಗೂ ಸಹ ತೊಂದರೆ ಉಂಟಾಗಿತ್ತು. ಇದ್ದಕ್ಕಿದ್ದ ಹಾಗೆ ಟ್ರೇನ್ 15 ನಿಮಿಷಗಳ ಕಾಲ ನಿಂತಿದ್ದಕ್ಕಾಗಿ, ಪ್ರಯಾಣಿಕರಿಗೆ ಶಾಂತ ರೀತಿಯಲ್ಲಿ ತಿಳಿಸಿ ಹೇಳಲಾಯಿತು. ಒಟ್ಟಿನಲ್ಲಿ ಒಬ್ಬ ಮಹಿಳೆ ಮಾಡಿದ ತಪ್ಪಿಗೆ ಎಲ್ಲಾ ಪ್ರಯಾಣಿಕರಿಗೂ ತೊಂದರೆ ಆಗಿದೆ.

Leave A Reply

Your email address will not be published.