Astrology: ಪಿತೃಪಕ್ಷದ ಅಮಾವಾಸ್ಯೆ ದಿನ ದೋಷಗಳ ಪರಿಹಾರಕ್ಕೆ ಈ ಕೆಲಸಗಳನ್ನು ತಪ್ಪದೇ ಮಾಡಿ

0 19

ಇಂದು ಪಿತೃಪಕ್ಷ ಅಮವಾಸ್ಯೆ, ಈ ಅಮಾವಾಸ್ಯೆಯನ್ನು ಬಹಳ ಮುಖ್ಯವಾದ ಅಮಾವಾಸ್ಯೆ ಎಂದು ಪರಿಗಣಿಸಲಾಗುತ್ತದೆ. ಈ ದಿನವನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ. ಮಹಾಲಯ ಅಮಾವಾಸ್ಯೆ ಶನಿವಾರದ ದಿನ ಬಂದರೆ ಅದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯುತ್ತಾರೆ.

ಈ ದಿನ ನೀವು ಪಿಂಡ ದಾನ ಮಾಡುವುದು, ತರ್ಪಣ ಬಿಡುವುದು ಮಾಡಿದರೆ ನಿಮ್ಮ ಎಲ್ಲಾ ಪಿತೃಪಕ್ಷ ದೋಷಗಳು ನಿವಾರಣೆ ಆಗುತ್ತದೆ. ಈ ವರ್ಷದ ಸರ್ವ ಪಿತೃಪಕ್ಷ ಅಮಾವಾಸ್ಯೆ ಯಾವಾಗ ಶುರುವಾಗಿ ಯಾವಾಗ ಮುಗಿಯುತ್ತದೆ ಎಂದು ನೋಡುವುದಾದರೆ, ಆಕ್ಟೊಬರ್ 13ರ ರಾತ್ರಿ 9;50ಕ್ಕೆ ಶುರುವಾಗಿ ಆಕ್ಟೊಬರ್ 14ರ ರಾತ್ರಿ 11:24ಕ್ಕೆ ಮುಗಿಯುತ್ತದೆ.

ಈ ದಿವಸದ ವಿಶೇಷ ಮುಹೂರ್ತದಲ್ಲಿ ಪೂಜೆ ಮಾಡಿದರೆ, ಪೂರ್ವಿಕರ ಮತ್ತು ಶನಿದೇವರ ಆಶೀರ್ವಾದ ನಿಮ್ಮದಾಗುತ್ತದೆ. ಈ ದಿನ ನೀವು ಪೂರ್ವಿಕರ ಆಶೀರ್ವಾದ ಪಡೆಯಲು ಯಾವ ಕೆಲಸಗಳನ್ನು ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ..
*ಸೂರ್ಯನಿಗೆ ಆರ್ಘ್ಯ ಅರ್ಪಿಸಿ :- ಪಿತೃಪಕ್ಷ ಅಮಾವಾಸ್ಯೆ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಒಂದು ತಾಮ್ರದ ಪಾತ್ರೆಯಲ್ಲಿ ಆ ಪವಿತ್ರವಾದ ನೀರನ್ನು ತೆಗೆದುಕೊಂಡು ಅದನ್ನು ಸೂರ್ಯನಿಗೆ ಆರ್ಘ್ಯ ಅರ್ಪಿಸಿ.

*ತರ್ಪಣ ನೀಡಿ :- ಈ ದಿನ ಮಹಾಲಯ ಅಮಾವಾಸ್ಯೆಯ ಜೊತೆಗೆ ಶನಿ ಅಮಾವಾಸ್ಯೆ ಕೂಡ ಹೌದು. ಈ ದಿನ ನಿಮ್ಮ ಪೂರ್ವಿಕರಿಗೆ ತರ್ಪಣ ನೀಡಿ, ಪಿಂಡ ದಾನ ಮಾಡಿ.
*ಅರಳಿ ಮರಕ್ಕೆ ಪೂಜೆ :- ಈ ವೇಳೆ ಶನಿದೇವರ ಸಾಡೇಸಾತಿ ಮತ್ತು ಧೈಯಾ ಸಮಯ ಕಳೆಯುತ್ತಿರುವವರು ಈ ಶನಿಶ್ಚರ ಅಮಾವಾಸ್ಯೆಯ ದಿನ ತಪ್ಪದೇ ಅರಳಿ ಮರಕ್ಕೆ ಪೂಜೆ ಸಲ್ಲಿಸಿ.

*ಸಾಸಿವೆ ಎಣ್ಣೆ ಅರ್ಪಣೆ :- ಶನಿದೇವರ ಅಮಾವಾಸ್ಯೆ ದಿವಸ ದೇವರಿಗೆ ಕಪ್ಪು ಎಳ್ಳು ಮತ್ತು ಸಾಸಿವೆ ಎಣ್ಣೆ ಅರ್ಪಣೆ ಮಾಡುವುದು ಒಳ್ಳೆಯದು.
*ಶನಿದೇವರ ಅಮಾವಾಸ್ಯೆ ಜೊತೆಗೆ ಮಹಾಲಯ ಅಮಾವಾಸ್ಯೆ ಕೂಡ ಇರುವುದರಿಂದ ಈ ದಿನ ನೀವು ಶನಿದೇವರ ಚಾಲೀಸ ಪಠಣೆ ಮಾಡುವುದು ಕೂಡ ಒಳ್ಳೆಯದು.
*ಈ ದಿವಸ ಪೂರ್ವಿಕರಿಗೆ ತರ್ಪಣ ಬಿಟ್ಟು, ಪಿಂಡ ದಾನ ಮಾಡಿ ಉಪವಾಸ ಮಾಡಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.

Leave A Reply

Your email address will not be published.