Charlie: ಚಾರ್ಲಿ ಇನ್ನು ಬಿಗ್ ಬಾಸ್ ಮನೆಗೆ ಯಾಕೆ ಹೋಗಿಲ್ಲ? ಅಸಲಿ ಕಾರಣ ರಿವೀಲ್ ಮಾಡಿದ್ದಾರೆ ಚಾರ್ಲಿಗೆ ತರಬೇತಿ ನೀಡುವ ಪ್ರಮೋದ್

0 19

ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ ಒಂದು ವಾರ ಕಳೆಯುತ್ತಿದೆ. ಮೊದಲ ವಾರದ ಕಿಚ್ಚನ ಪಂಚಾಯಿತಿ ಇಂದು ನಡೆಯಲಿದೆ. ಮೊದಲ ವಾರ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದು, ಮೊದಲ ವಾರದಲ್ಲೇ ಜಗಳ, ಕದನ, ಭಿನ್ನಾಭಿಪ್ರಾಯ, ದುಃಖ ಎಲ್ಲಾ ರೀತಿಯ ಎಮೋಷನ್ ಗಳು ಹೊರಬಂದಿವೆ. ಮೊದಲ ವಾರ ಸುಮಾರು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ..

8ರಲ್ಲಿ ಎಲಿಮಿನೇಟ್ ಆಗೋರು ಯಾರು? ಅಸಮರ್ಥರ ಪೈಕಿ ಮನೆಯಿಂದ ಯಾರು ಹೊರಹೋಗ್ತಾರೆ ? ಎನ್ನುವ ಕುತೂಹಲ ಜನರಲ್ಲಿದೆ. ಇದರ ನಡುವೆಯೇ ಒಂದು ಪ್ರಶ್ನೆ ಜನರನ್ನು ಕಾಡುತ್ತಿದೆ, ಅದೇನು ಎಂದರೆ ಬಿಗ್ ಬಾಸ್ ಮನೆಗೆ ಚಾರ್ಲಿ ಯಾಕೆ ಇನ್ನು ಬಂದಿಲ್ಲ ಎನ್ನುವುದಾಗಿದೆ. ಚಾರ್ಲಿ ಬಿಗ್ ಬಾಸ್ ಮನೆಗೆ ಹೋಗ್ತಾಳೆ ಎನ್ನುವ ವಿಷಯ ಶೋ ಶುರುವಾಗುವ 2 ವಾರಗಳ ಮೊದಲೇ ಗೊತ್ತಾಗಿತ್ತು.

ಅನುಬಂಧ ಅವಾರ್ಡ್ಸ್ ಶೋನಲ್ಲಿ ಈ ವಿಚಾರವನ್ನು ರಿವೀಲ್ ಮಾಡಲಾಗಿತ್ತು. ಅದೇ ರೀತಿ ಲಾಂಚ್ ಎಪಿಸೋಡ್ ದಿನ ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಹೋಗ್ತಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು, ಆದರೆ ಆ ರೀತಿ ನಡೆಯಲಿಲ್ಲ. ಲಾಂಚ್ ದಿನ ಸಂಗೀತ ಅವರು ಹೋಗುವಾಗ ಸುದೀಪ್ ಅವರ ಮಾತಿನಂತೆ ಚಾರ್ಲಿ ಎಂದು ಕರೆದರು ಕೂಡ ಚಾರ್ಲಿ ಬಂದಿರಲಿಲ್ಲ. ಸಂಗೀತ ಒಬ್ಬರೇ ಮನೆಯೊಳಗೆ ಹೋದರು.

ಮುಂದಿನ ಎಪಿಸೋಡ್ ಗಳಲ್ಲಿ ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಹೋಗಬಹುದು ಎನ್ನಲಾಗಿತ್ತು, ಆದರೆ ಒಂದು ವಾರ ಕಳೆದರು ಕೂಡ ಇನ್ನು ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಹೋಗಿಲ್ಲ. ಚಾರ್ಲಿ ಇನ್ನು ಯಾಕೆ ಹೋಗಿಲ್ಲ? ಚಾರ್ಲಿ ಬಿಗ್ ಮನೆಗೆ ಹೋಗೋದು ಯಾವಾಗ ಎನ್ನುವ ಪ್ರಶ್ನೆ ಎಲ್ಲಾ ವೀಕ್ಷಕರಲ್ಲಿ ಮೂಡಿದೆ. ಅದಕ್ಕೆಲ್ಲ ಈಗ ಉತ್ತರ ಸಿಕ್ಕಿದ್ದು, ಚಾರ್ಲಿಗೆ ತರಬೇತಿ ನೀಡುವ ಪ್ರಮೋದ್ ಅವರು ಅಸಲಿ ಕಾರಣ ತಿಳಿಸಿದ್ದಾರೆ..

ಒಂದು ಶ್ವಾನ ವನ್ನು ರಿಯಾಲಿಟಿ ಶೋಗೆ ಕಳಿಸೋದು ಅಷ್ಟು ಸುಲಭವಲ್ಲ, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಇಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಚಾರ್ಲಿ ಬಿಗ್ ಬಾಸ್ ಮನೆಗೆ ಹೋಗಲು ಇನ್ನು ಅನುಮತಿ ಸಿಕ್ಕಿಲ್ಲ, ಅನುಮತಿ ಸಿಕ್ಕ ಕೂಡಲೇ ಚಾರ್ಲಿ ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾಳೆ. ಈ ಬಗ್ಗೆ ಪ್ರಮೋದ್ ಅವರು ಹೇಳಿರೋದು ಹೀಗೆ..

“ಬಿಗ್ ಬಾಸ್ ಮನೆಗೆ ಚಾರ್ಲಿಯನ್ನು ಕಳಿಸೋಕೆ ಬೇಕಿರುವ ಎಲ್ಲಾ ಪ್ರಿಪರೇಷನ್ಸ್ ನಡೀತಾ ಇದೆ. ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಇಂದ ಇನ್ನು ಪರ್ಮಿಶನ್ ಸಿಕ್ಕಿಲ್ಲ. ಅದಕ್ಕಾಗಿ ಪ್ರಯತ್ನ ನಡೆಯುತ್ತಿದೆ, ಲೆಟರ್ ಮತ್ತು ಮೇಲ್ ಮೂಲಕ ಪರ್ಮಿಶನ್ ಕೇಳಲಾಗಿತ್ತು, ಈಗ ಅದೇ ಪ್ರೊಸಿಜರ್ ನಡೆಯುತ್ತಿದೆ. ಶೀಘ್ರದಲ್ಲೇ ಅನುಮತಿ ಸಿಗಲಿದ್ದು, ಸಿಕ್ಕ ಕೂಡಲೇ ಚಾರ್ಲಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಲಿದ್ದಾಳೆ..” ಎಂದು ಹೇಳಿದ್ದಾರೆ ಪ್ರಮೋದ್..

ಅಂದ ಹಾಗೆ ಬಿಗ್ ಬಾಸ್ ಮನೆಗೆ ಚಾರ್ಲಿ ಒಬ್ಬ ಸ್ಪರ್ಧಿಯಾಗಿ ಹೋಗುತ್ತಿಲ್ಲ, ಬದಲಾಗಿ ಚಾರ್ಲಿ ಹೋಗ್ತಿರೋದು ಎಂಟರ್ಟೈನರ್ ಆಗಿ ಎನ್ನಲಾಗುತ್ತಿದೆ. ಚಾರ್ಲಿ ಎಷ್ಟು ದಿವಸ ಬಿಗ್ ಬಾಸ್ ಮನೆಯೊಳಗೆ ಇರುತ್ತಾಳೆ ಎನ್ನುವುದು ಇನ್ನು ತಿಳಿದುಬಂದಿಲ್ಲ..

Leave A Reply

Your email address will not be published.