Tanisha: ನೋಡಲು ಯಂಗ್ ಆಗಿ ಕಾಣುವ ಬಿಗ್ ಬಾಸ್ ತನಿಷಾ ಅವರ ವಯಸ್ಸು ಎಷ್ಟು ಗೊತ್ತಾ?

0 18

ಬಿಗ್ ಬಾಸ್ ಶೋ ಶುರುವಾಗಿ ನೋಡುನೋಡುತ್ತಲೇ ಮೊದಲ ವಾರ ಮುಗಿದಿದೆ. ಇಂದು ಕಿಚ್ಚನ ಪಂಚಾಯಿತಿ ಕೂಡ ನಡೆಯಲಿದೆ. ಈ ಒಂದು ವಾರದಲ್ಲೇ ಮನೆಯಲ್ಲಿ ಈಗಾಗಲೇ ಸಾಕಷ್ಟು ಜಗಳ, ಮನಸ್ತಾಪ ನಡೆದು ಹೋಗಿದೆ. ಈ ವಾರ ಮನೆಯ ಸದಸ್ಯರು ಸಮರ್ಥರು, ಅಸಮರ್ಥರು ಎಂದು ಎರಡು ಭಾಗವಾಗಿದ್ದರು. ಅಸಮರ್ಥರಾಗಿ ಬಂದವರೆ ಸಮರ್ಥರಾಗಿ ಗುರುತಿಸಿಕೊಂಡಿದ್ದಾರೆ. ಸಮರ್ಥರು ಅವರೆದುರು ಸೋತಿದ್ದಾರೆ.

ಅಸಮರ್ಥರಲ್ಲಿ ತನಿಷಾ ಈ ವಾರ ವಾರದ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಸದಸ್ಯರು ಆಯ್ಕೆ ಮಾಡಿದ್ದಾರೆ. ತನಿಷಾ ಅವರು ಬಿಗ್ ಬಾಸ್ ನೀಡಿದ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹಾಗೆಯೇ ಅಡುಗೆ ಮನೆಯಲ್ಲಿ ಕೂಡ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಅಡುಗೆ ಮನೆ ಡಿಪಾರ್ಟ್ಮೆಂಟ್ ವಹಿಸಿಕೊಂಡಿದ್ದು ಇವರೇ ಎಂದರೆ ತಪ್ಪಲ್ಲ. ಹಾಗೆಯೇ ಎಲ್ಲಾ ವಿಷಯಕ್ಕೂ ನೇರವಾಗಿ ಮಾತನಾಡುತ್ತಿದ್ದರು.

ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು, ಈ ಕಾರಣಕ್ಕೆ ತನಿಷಾ ಅವರನ್ನು ಬೆಸ್ಟ್ ಪರ್ಫಾರ್ಮರ್ ಎಂದು ಆಯ್ಕೆ ಮಾಡಲಾಯಿತು. ಆದರೆ ತನಿಷಾ ಅವರ ಮಾತು ಜೋರು ಎನ್ನುವ ಕಾರಣಕ್ಕೆ ಕೆಲವು ಸದಸ್ಯರ ಜೊತೆಗೆ ಜಗಳ, ಮನಸ್ತಾಪ ಉಂಟಾಗಿದ್ದು ಇದೆ. ನಮ್ರತಾ ಗೌಡ ಮತ್ತು ತನಿಷಾ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ತನಿಷಾ ಅಡುಗೆ ಮಾಡುವ ರೀಸನ್ ಕೊಡುತ್ತಿದ್ದಾರೆ ಎಂದು ಕೂಡ ಹೇಳಲಾಗಿತ್ತು.

ಎಷ್ಟೇ ಮನಸ್ತಾಪಗಳು ಬಂದರು, ಟಾಸ್ಕ್ ಎಂದು ಬಂದಾಗ ಪೂರ್ತಿ ಮನಸ್ಸಿನಿಂದ, ಏಕಾಗ್ರತೆಯಿಂದ ಮಾಡಿದ ತನಿಷಾ ಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಹೆಚ್ಚಿನ ಸಪೋರ್ಟ್ ಸಿಗುತ್ತಿರುವುದು ತನಿಷಾ ಅವರಿಗೆ ಎಂದರೆ ತಪ್ಪಲ್ಲ. ತನಿಷಾ ಅವರು ಕನ್ನಡ ಕಿರುತೆರೆಯಲ್ಲಿ ವಿಲ್ಲನ್ ಆಗಿ ಗುರುತಿಸಿಕೊಂಡಿದ್ದಾರೆ. ಮಂಗಳಗೌರಿ ಮದುವೆ ಧಾರವಾಹಿಯಲ್ಲಿ ಇವರು ನಟಿಸಿದ ಖಡಕ್ ವಿಲ್ಲನ್ ಪಾತ್ರದಿಂದ ಹೆಚ್ಚು ಸುದ್ದಿಯಾಗಿದ್ದರು.

ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ಆಸೆ ಇಟ್ಟುಕೊಂಡಿದ್ದ ತನಿಷಾ, ತಮನ್ನು ಎಲ್ಲರೂ ರೀಪ್ಲೇಸ್ಮೆಂಟ್ ಆಗಿ ಆಯ್ಕೆ ಮಾಡುತ್ತಾರೆ, ತಮಗಾಗಿ ಒಂದು ಪಾತ್ರವಾದರು ಸಿಗಬೇಕು ಎನ್ನುವುದು ತಮ್ಮ ಆಸೆ ಎಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸುದ್ದಿಯಾಗಿರುವ ತನಿಷಾ ಅವರ ವಯಸ್ಸು ಎಷ್ಟು ಎಂದು ಕೂಡ ಜನರಲ್ಲಿ ಕುತೂಹಲ ಇದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ತನಿಷಾ ಅವರಿಗೆ 33 ವರ್ಷ ವಯಸ್ಸು, ಆದರೆ ಇವರನ್ನು ನೋಡಿದರೆ ಇನ್ನು ಚಿಕ್ಕವರ ಹಾಗೆ ಕಾಣುತ್ತಾರೆ.

Leave A Reply

Your email address will not be published.