Smartphone Tricks: ಈ ಸಣ್ಣ ತಪ್ಪುಗಳನ್ನು ಮಾಡಿದರೆ ನಿಮ್ಮ ಫೋನ್ ಬ್ಯಾಟರಿ ಕಥಂ!

0 18

Smartphone Tricks:ಸ್ಮಾರ್ಟ್ ಫೋನ್ ಗಳು ಈಗ ಎಲ್ಲರ ಹತ್ತಿರ ಇರುತ್ತದೆ. ಸಿಟಿಗಳು, ಹಳ್ಳಿಗಳು, ಮಕ್ಕಳು, ದೊಡ್ಡವರು ಎಲ್ಲರ ಹತ್ತಿರ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇದ್ದು ಅಸನ್ನು ನೀವು ಬಳಸಬೇಕು ಎಂದರೆ ಮುಖ್ಯವಾಗಿ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಬ್ಯಾಟರಿ ಇರಬೇಕು. ನಿಮ್ಮ ಫೋನ್ ಹೆಚ್ಚು ಸಮಯ ಆಕ್ಟಿವ್ ಆಗಿರಬೇಕು ಎಂದರೆ ಬ್ಯಾಟರಿ ಬಹಳ ಮುಖ್ಯ, ನಿಮ್ಮ ಫೋನ್ ಬಳಸುವಾಗ ನೀವು ಮಾಡುವ ಕೆಲವು ಸಣ್ಣ ತಪ್ಪುಗಳು ನಿಮ್ಮ ಫೋನ್ ಬ್ಯಾಟರಿ ಬೇಗ ಖಾಲಿ ಆಗುವ ಹಾಗೆ ಮಾಡಬಹುದು. ಹಾಗಾಗಿ ಈ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

Smartphone Tricks

*ಹೆಡ್ ಫೋನ್ ಬಳಸುವುದು :- ನಿಮ್ಮ ಫೋನ್ ನಲ್ಲಿ ಹಾಡುಗಳನ್ನ ಕೇಳೋದಕ್ಕೆ ಬ್ಲೂಟೂತ್ ಅಥವಾ ಹೆಡ್ ಫೋನ್ ಬಳಸುತ್ತಾರೆ. ಇವುಗಳನ್ನು ಅತಿಯಾಗಿ ಬಳಸಿದರೆ, ಅದರಿಂದ ನಿಮ್ಮ ಫೋನ್ ಬ್ಯಾಟರಿ ಬಹಳ ಬೇಗ ಖಾಲಿಯಾಗುತ್ತದೆ.

*ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚಾಗಿ ಗೇಮ್ ಆಡುವುದರಿಂದ ಫೋನ್ ಬ್ಯಾಟರಿ ಬೇಗ ಖಾಲಿ ಆಗುತ್ತದೆ. ಹಾಗೆಯೇ ನೀವು ಫೋನ್ ಚಾರ್ಜ್ ಗೆ ಹಾಕಿ ಗೇಮ್ ಆಡುವುದರಿಂದ ಫೋನ್ ಜಾಸ್ತಿ ಹೀಟ್ ಆಗುತ್ತದೆ ಇದು ನಿಮ್ಮ ಫೋನ್ ಬ್ಯಾಟರಿ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುತ್ತದೆ.

*ಹಲವರಿಗೆ ಫೋನ್ ಅನ್ನು ವೈಬ್ರೇಟ್ ಮೋಡ್ ನಲ್ಲಿ ಇಡುವ ಅಭ್ಯಾಸ ಇರುತ್ತದೆ. ರಿಂಗ್ ಮೋಡ್ ಜೊತೆಗೆ ವೈಬ್ರೇಷನ್ ಆನ್ ಮಾಡಿತ್ತುಕೊಂಡರೆ, ಫೋನ್ ಅಥವಾ ಮೆಸೇಜ್ ಬಂದಾಗ ವೈಬ್ರೇಷನ್ ಆಗುತ್ತದೆ. ಅದರಿಂದ ನಿಮ್ಮ ಫೋನ್ ಬ್ಯಾಟರಿ ಪರ್ಫಾರ್ಮೆನ್ಸ್ ಕಡಿಮೆ ಆಗುತ್ತದೆ.

*ಈಗಿನ ಫೋನ್ ಗಳಲ್ಲಿ ನಮಗೆ ಇಷ್ಟ ಆಗುವ ಹಾಡುಗಳನ್ನು ರಿಂಗ್ ಟೋನ್ ಆಗಿ ಸೆಟ್ ಮಾಡಿಕೊಳ್ಳಬಹುದು.ಆದರೆ ಫೋನ್ ನಲ್ಲಿ ಇರುವ ಇನ್ ಬಿಲ್ಟ್ ರಿಂಗ್ ಟೋನ್ ಗಳನ್ನು ಇಟ್ಟುಕೊಂಡರೆ ಅದರ ಸೌಂಡ್, ಬೀಟ್ ಎಲ್ಲವೂ ಫೋನ್ ಗೆ ತಕ್ಕ ಹಾಗಿರುತ್ತದೆ. ರಿಂಗ್ ಟೋನ್ ಡೌನ್ಲೋಡ್ ಮಾಡಿ ಇಟ್ಟರೆ, ಅದರ ಬೀಟ್ ಸೌಂಡ್ ಎಲ್ಲವೂ ಜಾಸ್ತಿ ಇರುತ್ತದೆ. ಇದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಹಾಗಾಗಿ ಫೋನ್ ನಲ್ಲಿರುವ ರಿಂಗ್ ಟೋನ್ ಅನ್ನೇ ಬಳಸಿ.

*ಫೋನ್ ನಲ್ಲಿ ಅಗತ್ಯ ಇಲ್ಲದೆ ಹೋದರು ಹೆಚ್ಚು ಫೋಟೋಗಳು, ವಿಡಿಯೋ ಗಳನ್ನು ಇಟ್ಟುಕೊಂಡರೆ ಅದು ಪ್ರೊಸೆಸರ್ ಮೇಲೆ ಪ್ರೆಶರ್ ಹಾಕುತ್ತದೆ. ಇದರಿಂದ ಫೋನ್ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸ್ಮಾರ್ಟ್ ಫೋನ್ ಬಳಸುವಾಗ ಅಗತ್ಯವಿಲ್ಲದ ಫೋಟೋಸ್ ಗಳನ್ನು ವಿಡಿಯೋಗಳನ್ನು ಡಿಲೀಟ್ ಮಾಡಿ.

ಇದನ್ನೂ ಓದಿ:Tanisha: ನೋಡಲು ಯಂಗ್ ಆಗಿ ಕಾಣುವ ಬಿಗ್ ಬಾಸ್ ತನಿಷಾ ಅವರ ವಯಸ್ಸು ಎಷ್ಟು ಗೊತ್ತಾ?

Leave A Reply

Your email address will not be published.