Viral News: ಪ್ರೀತಿ ಮಾಡುವುದು ಸುಲಭ ಆದರೆ ಪ್ರೀತಿ ಶುರುವಾಗುವ ಮುನ್ನ ನೀವು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ಎಂಥವರು? ಅವರು ನಿಜಕ್ಕೂ ಒಳ್ಳೆಯವರಾ? ಆತನಿಂದ ನಿಮಗೆ ತೊಂದರೆ ಆಗುವುದಿಲ್ಲವಾ ಎನ್ನುವುದನ್ನು ತಿಳಿದುಕೊಂಡು ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇಲ್ಲದೆ ಹೋದರೆ ನಿಮ್ಮ ಜೀವನಕ್ಕೆ ತೊಂದರೆ ಆಗಬಹುದು, ಇಂಥ ಹಲವು ಘಟನೆಗಳು ಕೂಡ ನಡೆಯುತ್ತದೆ..
ಇತ್ತೀಚೆಗೆ ಇಂಥದ್ದೊಂದು ಘಟನೆ ನಮ್ಮ ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಬೇಲೂರು ತಾಲ್ಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ. ಇಲ್ಲಿನ ಹುಡುಗಿ ಒಬ್ಬಳು, ಪದವಿ ಓದುತ್ತಿದ್ದು, ಆಕೆ ಪ್ರೀತಿ ಮಾಡುತ್ತಿದ್ದ ಹುಡುಗನಿಂದ ಪ್ರಾಣ ಬೆದರಿಕೆ ಬಂದಿದೆ ಜೊತೆಗೆ ಮತ್ತು ಆತನಿಂದ ಈ ಹುಡುಗಿ ಮೋಸ ಹೋಗಿದ್ದಳು, ಈ ಕಾರಣಕ್ಕೆ ಆಕೆ ಕಾಲೇಜಿನಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾಳೆ.
ಪ್ರಾಣ ಕಳೆದುಕೊಂಡಿರುವ ಈ ಹುಡುಗಿಯ ಹೆಸರು ಆಶಾ, ಈಕೆಗೆ 20 ವರ್ಷ ವಯಸ್ಸಾಗಿತ್ತು. ಈಕೆ ಬೇಲೂರಿನ YDD ಕಾಲೇಜಿನಲ್ಲಿ ಓದುತ್ತಿದ್ದರು, ಆಕೆಯ ಕಾಲೇಜಿನಲ್ಲೇ ಬಿಎ ಎರಡನೇ ವರ್ಷದಲ್ಲಿ ಓದುತ್ತಿದ್ದ ಮಂಜುನಾಥ್ ಎನ್ನುವ ಹುಡುಗನನ್ನು ಆಶಾ ಪ್ರೀತಿಸುತ್ತಿದ್ದಳು. ಇವರಿಬ್ಬರು ಜೊತೆಯಾಗಿ ಕೆಲವು ಕಡೆ ಸುತ್ತಾಡುತ್ತಿದ್ದರು. ಈ ಹುಡುಗ ಆಲೂರು ತಾಲ್ಲೂಕಿನ ಕಾಟೇಹಳ್ಳಿಯಲ್ಲಿ ವಾಸವಿದ್ದ.
ಕೆಲ ದಿನಗಳಿಂದ ಈ ಹುಡುಗ, ಆಶಾ ಇದ್ದರು ಕೂಡ ಮತ್ತೊಬ್ಬ ಹುಡುಗಿಯ ಜೊತೆಗೆ ಮಾತನಾಡಿಕೊಂಡು ಸುತ್ತಾಡುತ್ತಿದ್ದಾನೆ ಎನ್ನುವ ವಿಷಯ ಆಶಾಳಿಗೆ ಗೊತ್ತಾಗಿ, ಆತನನ್ನು ಈ ಬಗ್ಗೆ ಪ್ರಧನೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಂಜುನಾಥ್ ಆಶಾಳಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಆಶಾ ತನಗೆ ಮಾಡಿರುವ ಮೆಸೇಜ್, ತನ್ನೊಡನೆ ತೆಗೆಸಿಕೊಂಡಿರುವ ಫೋಟೋ ಇದೆಲ್ಲವನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾನೆ.
ಈ ರೀತಿ ಆದ ಕಾರಣ ಆಕೆ ಭಯದಲ್ಲಿ ಕಾಲೇಜಿನಲ್ಲಿ ಇರುವಾಗಲೇ ವಿಷ ಸೇವಿಸಿದ್ದಾಳೆ, ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ನೀಡಿದ ಚಿಕಿತ್ಸೆಗೆ ಆಶಾ ಸ್ಪಂದಿಸಲಿಲ್ಲ ಎಂದು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಕೂಡ ವೈದ್ಯರು ನೀಡಿದ ಚಿಕಿತ್ಸೆ ಫಲ ನೀಡದೆ ಆಶಾ ವಿಧಿವಶಳಾಗಿದ್ದಾಳೆ. ಒಂದು ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ, ಆಕೆಯ ತಂದೆ ತಾಯಿಗೆ ಇಂದು ದುಃಖ ನೀಡಿದೆ.