Jobs: ನಿಮ್ಮ ಬಳಿ ಹಳೆಯ ಸ್ಮಾರ್ಟ್ ಫೋನ್ ಇದ್ರೆ ಸಾಕು ಕೈತುಂಬಾ ಸಂಪಾದನೆ ಮಾಡಬಹುದು

0 20

Jobs: ಒಂದು ವೇಳೆ ನೀವು ಮಾಡುತ್ತಿರುವ ಕೆಲಸದಲ್ಲಿ ನಿಮಗೆ ಸಿಗುವ ಸಂಬಳ ಸಾಕಾಗುತ್ತಿಲ್ಲ ಎಂದರೆ, ಸಂಬಳ ಜಾಸ್ತಿ ಆಗಿಲ್ಲ ಎಂದು ನೀವು ಚಿಂತೆ ಮಾಡುತ್ತಿದ್ದರೆ, ಸುಲಭವಾಗಿ ಹಣ ಸಂಪಾದನೆ ಮಾಡುವ ವಿಧಾನಗಳನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ. ನಿಮ್ಮ ಹತ್ತಿರ ಹಳೆಯ ಸ್ಮಾರ್ಟ್ ಫೋನ್ ಜೊತೆಗೆ ಇಂಟರ್ನೆಟ್ ಇದ್ದರೆ ಸಾಕು, ಸುಲಭವಾಗಿ ಮನೆಯಲ್ಲೇ ಕೂತು ಕೈತುಂಬಾ ಸಂಪಾದನೆ ಮಾಡಬಹುದು. ಅದು ಹೇಗೆ ಎಂದು ಈಗ ತಿಳಿಯೋಣ..

ಆನ್ಲೈನ್ ಸಮೀಕ್ಷೆ :- ಇದು ನೀವು ಸುಲಭವಾಗಿ ಮಾಡಬಹುದಾದ ಕೆಲಸ ಆಗಿದೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಸಮೀಕ್ಷೆ ಹೆಚ್ಚಾಗಿ ಮಾಡುತ್ತಾರೆ. ಆನ್ಲೈನ್ ಸಮೀಕ್ಷೆ ಮಾಡುವ ಕೆಲವು ವೆಬ್ಸೈಟ್ ಗಳು ಕೂಡ ಇದೆ. ಇವುಗಳಲ್ಲಿ ಆನ್ಲೈನ್ ಸಮೀಕ್ಷೆ ಮಾಡುವುದಕ್ಕೆ ಸಾವಿರಾರು ರೂಪಾಯಿ ಹಣ ಕೊಡುತ್ತಾರೆ.

ಅಫಿಲಿಯೇಟ್ ಮಾರ್ಕೆಟಿಂಗ್ :- ಇದು ಕೂಡ ಈಗ ಒಂದು ರೀತಿ ಕಾಮನ್ ಆದ ಕೆಲಸ ಆಗಿದೆ. ಇ ಕಾಮರ್ಸ್ ಸೈಟ್ ಗಳಲ್ಲಿ ಅಫಿಲಿಯೇಟ್ ಮಾರ್ಕೆಟಿಂಗ್ ಮಾಡಬಹುದು. ಇದಕ್ಕಾಗಿ ನೀವು ಅಮೆಜಾನ್, ಫ್ಲಿಪ್ ಕಾರ್ಟ್ ಅಂಥ ಸೈಟ್ ಗಳಲ್ಲಿ ಅಫಿಲಿಯೇಟ್ ಪ್ರೊಫೈಲ್ ಓಪನ್ ಮಾಡಿ, ನಂತರ ಈ ಸೈಟ್ ಗಳಲ್ಲಿ ಮಾರಾಟ ಆಗುವ ವಸ್ತುಗಳ ಲಿಂಕ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ, ಆ ಲಿಂಕ್ ಇಂದ ಯಾರಾದರು ಆ ಪ್ರಾಡಕ್ಟ್ ಖರೀದಿ ಮಾಡಿದರೆ, ಕಮಿಷನ್ ರೀತಿಯಲ್ಲಿ ನಿಮಗೆ ಹಣ ಸಿಗುತ್ತದೆ.

ಆನ್ಲೈನ್ ಆಪ್ ಟೆಸ್ಟಿಂಗ್ :- ಡಿಜಿಟಲ್ ಮೀಡಿಯಾದಲ್ಲಿ ದಿನಕ್ಕೆ ಸಾಕಷ್ಟು ಆಪ್ ಗಳು ಲಾಂಚ್ ಆಗುತ್ತಲೇ ಇರುತ್ತದೆ. ಅವುಗಳನ್ನು ಮೊದಲು ಕೆಲವು ತಿಂಗಳುಗಳ ಕಾಲ ಟೆಸ್ಟ್ ಮಾಡಬೇಕಾಗುತ್ತದೆ. ಆಪ್ ಟೆಸ್ಟಿಂಗ್ ಗಾಗಿ ಒಂದು ದಿನಕ್ಕೆ 500 ಇಂದ 1000 ರೂಪಾಯಿಯವರೆಗು ಹಣ ನೀಡುತ್ತಾರೆ. ಆಪ್ ಟೆಸ್ಟ್ ಮಾಡುವ ಕೆಲವು ಆಪ್ ಗಳಿದ್ದು, ಅವುಗಳ ಮೂಲಕ ಈ ಕೆಲಸ ಮಾಡಬಹುದು.

ಗೇಮ್ ಟೆಸ್ಟಿಂಗ್ :- ಆಪ್ ಗಳ ಹಾಗೆ ಹೊಸದಾಗಿ ಲಾಂಚ್ ಆಗುವ ಗೇಮ್ ಗಳನ್ನು ಕೂಡ ಟೆಸ್ಟ್ ಮಾಡುತ್ತಾರೆ. ಇದಕ್ಕಾಗಿಯು ಕೆಲವು ಆಪ್ ಗಳಿದ್ದು, ಗೇಮ್ ಟೆಸ್ಟಿಂಗ್ ಮಾಡುವವರಿಗೆ ಕೆಲವೊಮ್ಮೆ ಲಕ್ಷಗಟ್ಟಲೇ ಹಣ ಪಾವತಿ ಮಾಡುವುದು ಉಂಟು, ಹಾಗಾಗಿ ನೀವು ಗೇಮ್ ಟೆಸ್ಟಿಂಗ್ ಮೂಲಕ ಕೂಡ ಉತ್ತಮವಾಗಿ ಹಣ ಗಳಿಸಬಹುದು.

Leave A Reply

Your email address will not be published.