Horoscope: 30 ವರ್ಷಗಳ ನಂತರ ದಸರಾ ಹಬ್ಬದ ದಿನ ರಾಜಯೋಗ, 3 ರಾಶಿಗಳ ಕಷ್ಟವೆಲ್ಲಾ ಮಾಯ

0 26

Horoscope: ಇಂದು ದಸರಾ ಹಬ್ಬ, ನವರಾತ್ರಿಯ 10ನೇ ದಿನವಾದ ಈ ದಿನ ಕೆಟ್ಟತನವನ್ನು ಸಂಹರಿಸಿ ಒಳ್ಳೆಯತನ ವಿಜಯ ಸಾಧಿಸಿದ ದಿನ, ಹಾಗಾಗಿ ಈ ದಿನವನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಈ ದಿನ ತಾಯಿ ಚಾಮುಂಡೇಶ್ವರಿ ದೇವಿ ದಶಾವತಾರ ತಾಳಿ ಮಹಿಷಾಸುರನ ಸಂಹಾರ ಮಾಡಿದಳು. ಈ ವಿಶೇಷ ದಿನದಂದು ಎರಡು ರಾಜಯೋಗಗಳು ರೂಪುಗೊಳ್ಳುತ್ತಿವೆ. ಒಂದು ಶುಕ್ರ ಮತ್ತು ಚಂದ್ರರ ಸಂಯೋಗದಿಂದ ಶಾಶ ರಾಜಯೋಗ ಮತ್ತೊಂದು ಬುಧ ಮತ್ತು ಸೂರ್ಯದೇವನ ಸಂಯೋಗದಿಂದ ಬುಧಾದಿತ್ಯ. ಈ ಎರಡು ಯೋಗಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ 3 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಅದೃಷ್ಟ ಪಡೆಯುವ ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ದಸರಾ ಹಬ್ಬದ ದಿನ ರೂಪುಗೊಳ್ಳುತ್ತಿರುವ 2 ರಾಜಯೋಗಗಳಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಈ ವೇಳೆ ನಿಮಗೆ ದಿಢೀರ್ ಧನಲಾಭ ಉಂಟಾಗುತ್ತದೆ, ಇದರಿಂದಾಗಿ ಆರ್ಥಿಕವಾಗಿ ಏಳಿಗೆ ಕಾಣುತ್ತೀರಿ. ಉದ್ಯೋಗದಲ್ಲಿ ಎತ್ತರಕ್ಕೆ ಬೆಳೆಯುತ್ತೀರಿ.

ಕರ್ಕಾಟಕ ರಾಶಿ :- ದಸರಾ ಹಬ್ಬದ ದಿನ ರೂಪುಗೊಳ್ಳುತ್ತಿರುವ 2 ರಾಜಯೋಗಗಳಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯುತ್ತೀರಿ. ಇನ್ನು ಮದುವೆ ಆಗಿರದ ಹುಡುಗ ಉಡುಗಿಯರಿಗೆ ಒಳ್ಳೆಯ ಸಂಬಂಧ ಕೂಡಿ ಬರುತ್ತದೆ.

ತುಲಾ ರಾಶಿ :- ದಸರಾ ಹಬ್ಬದ ದಿನ ರೂಪುಗೊಳ್ಳುತ್ತಿರುವ 2 ರಾಜಯೋಗಗಳಿಂದ ಈ ರಾಶಿಯವರಿಗೆ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಹಾಗಾಗಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ಹೊಸ ಮನೆ ಅಥವಾ ವಾಹನ ಖರೀದಿ ಮಾಡುತ್ತೀರಿ.

Leave A Reply

Your email address will not be published.