Virat Kohli: ವರ್ಲ್ಡ್ ಕಪ್ ಸೋಲಿನ ನಂತರ ವಿರಾಟ್ ಕೊಹ್ಲಿ ಅವರು ಒಂದು ಜಾಹೀರಾತಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

0 1

Virat Kohli: ನಮ್ಮ ದೇಶ ಕಂಡ ಅದ್ಭುತವಾದ ಕ್ರಿಕೆಟರ್ ಗಳಲ್ಲಿ ಒಬ್ಬರು ವಿರಾಟ್ ಕೊಹ್ಲಿ, ಇವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರದೇಶದಲ್ಲಿ ಕೂಡ ಅಷ್ಟೇ ಕ್ರೇಜ್ ಇದೆ. ವಿಶ್ವಾದ್ಯಂತ ಗುರುತಿಸಿಕೊಂಡು, ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿರುವವರು ವಿರಾಟ್ ಕೊಹ್ಲಿ. ಐಪಿಎಲ್, ಐಸಿಸಿ ಟೋರ್ನಮೆಂಟ್ ಗಳ ಮೂಲಕ ವಿಶ್ವವೇ ತಮ್ಮತ್ತ ತಿರುಗಿ ತಿರುಗಿ ನೋಡುವ ಜಾಗೆ ಮಾಡಿಕೊಂಡಿದ್ದಾರೆ.

ವಿಶ್ವದಲ್ಲಿ ಅತಿದೊಡ್ಡ ಫ್ಯಾನ್ ಹೆಸ್ ಹೊಂದಿರುವ ಸೆಲೆಬ್ರಿಟಿಗಳಲ್ಲಿ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದರೆ ತಪ್ಪಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಬರೋಬ್ಬರಿ 264 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇಂಥ ಆಟಗಾರ ಭಾರತ ಕ್ರಿಕೆಟ್ ತಂಡ ದೊಡ್ಡ ಆಸ್ತಿ ಇದ್ದ ಹಾಗೆ ಎಂದರೆ ತಪ್ಪಲ್ಲ. ವಿರಾಟ್ ಅವರು ಕ್ರಿಕೆಟ್ ನಲ್ಲಿ ಮಾತ್ರವಲ್ಲ, ವಾಣಿಜ್ಯದ ವಿಚಾರದಲ್ಲಿ ಕೂಡ ಟಾಪ್ ಸ್ಥಾನದಲ್ಲಿದ್ದಾರೆ..

ಇವರು ವರ್ಲ್ಡ್ ಕಪ್ ನಂತರವು ಒಂದು ಜಾಹೀರಾತಿಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಒಂದು ಬ್ರ್ಯಾಂಡ್ ನ ಜಾಹೀರಾತಿನ ಚಿತ್ರೀಕರಣಕ್ಕೆ ವಿರಾಟ್ ಕೊಹ್ಲಿ ಅವರು ವಾರ್ಷಿಕವಾಗಿ 7.5 ಇಂದ 10 ಕೋಟಿವರೆಗು ಸಂಭಾವನೆ ಪಡೆಯುತ್ತಾರೆ. ಇನ್ನು ಬ್ರ್ಯಾಂಡ್ ಎಂಡೋರ್ಸ್ಮೆಂಟ್ ಗಳಿಗೆ 175 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಕಿಂಗ್ ಕೊಹ್ಲಿ 7 ಸ್ಟಾರ್ಟಪ್ ಗಳಲ್ಲಿ ಕೂಡ ಹೂಡಿಕೆ ಮಾಡಿದ್ದಾರೆ, 2ಐಷಾರಾಮಿ ಮನೆಗಳ ಮಾಲೀಕ ಕೂಡ ಹೌದು, ತಮ್ಮದೇ ಫುಟ್ ಬಾಲ್ ಮತ್ತು ಕುಸ್ತಿ ಟೀಮ್ ಕೂಡ ಹೊಂದಿದ್ದಾರೆ ಕೊಹ್ಲಿ. ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಗೆ 8.9 ಕೋಟಿ, ಟ್ವಿಟರ್ ನಲ್ಲಿ ಪೋಸ್ಟ್ ಗೆ 2.5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಐಷಾರಾಮಿ ಕಾರ್ ಗಳನ್ನು ಕೂಡ ಹೊಂದಿದ್ದಾರೆ. ಸಾವಿರ ಕೋಟಿ ಒಡೆಯ ಕಿಂಗ್ ಕೊಹ್ಲಿ.

Leave A Reply

Your email address will not be published.