Chanakyaneeti: ಈ 5 ಮಹಿಳೆಯರಿಗೆ ಗೌರವ ಕೊಡಿ ನಿಮ್ಮ ಬದುಕಿನಲ್ಲಿ ಹಣದ ಹೊಳೆಯೇ ಹರಿಯುತ್ತದೆ

0 25

ರಾಜತಂತ್ರ ಮತ್ತು ತತ್ವಜ್ಞಾನಿ ಆಗಿ ಖ್ಯಾತಿ ಪಡೆದಿರುವುದು ಆಚಾರ್ಯ ಚಾಣಕ್ಯರು. ಶತಮಾನದ ಹಿಂದೆ ಇವರು ರಚಿಸಿರುವ ಚಾಣಕ್ಯನೀತಿಯಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಲು ಏನು ಬೇಕೋ ಅದೆಲ್ಲವನ್ನು ತಿಳಿಸಿದ್ದಾರೆ. ಚಾಣಕ್ಯನೀತಿಯಲ್ಲಿ ತಿಳಿಸಿರುವ ನೀತಿಯನ್ನು ತಿಳಿದು, ಬದುಕಿನಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಅದೇ ರೀತಿ ಹೆಚ್ಚಿನ ಸಂಪತ್ತು ಪಡೆಯಲು ನೀವು ಏನು ಮಾಡಬೇಕು ಎನ್ನುವುದನ್ನು ಕೂಡ ತಿಳಿಸಿದ್ದು, ಈ 5 ಮಹಿಳೆಯರಿಗೆ ನೀವು ಗೌರವ ಕೊಡುತ್ತಾ ಬಂದರೆ ಸಾಕು. ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಇರುತ್ತದೆ..

1.ತಾಯಿ :- ನಿಮಗೆ ಜನ್ಮ ಕೊಡುವ ದೇವತೆ ತಾಯಿ. ತನ್ನ ಸುಖ, ಸಂತೋಷ ಎಲ್ಲವನ್ನು ಬದಿಗಿಟ್ಟು ತನ್ನ ಮಗುವಿಗೆ ಎಲ್ಲವನ್ನು ಮಾಡುವವಳು ತಾಯಿ. ಹಾಗಾಗಿ ತಾಯಿಯ ಮೇಲೆ ಪ್ರೀತಿ, ಗೌರವ ಇಟ್ಟುಕೊಂಡು, ಕಾಳಜಿ ತೋರಿಸುತ್ತಾರೋ ಅಂಥ ವ್ಯಕ್ತಿಯ ಮೇಲೆ ಲಕ್ಷ್ಮೀದೇವಿಯ ಆಶೀರ್ವಾದ ಯಾವಾಗಲೂ ಇರುತ್ತದೆ. ಇವರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಸದಾ ನೆಲೆಸಿರುತ್ತದೆ. ತಾಯಿಯ ಸೇವೆಯನ್ನು ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಲಾಗುತ್ತದೆ.

  1. ಗುರುಗಳ ಪತ್ನಿ :- ಪ್ರತಿ ವ್ಯಕ್ತಿಗೆ ಅಕ್ಷರ ಕಲಿಸಿ, ಜ್ಞಾನ ನೀಡುವುದು ಗುರು. ಅಂಥ ಗುರುವಿಗೆ ಯಾವಾಗಲೂ ಗೌರವ ಕೊಡಬೇಕು, ಗುರುವಿಗೆ ಮಾತ್ರವಲ್ಲ ಗುರುವಿನ ಪತ್ನಿಗೂ ಕೂಡ ಅಷ್ಟೇ ಗೌರವ ಕೊಟ್ಟು, ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬೇಕು. ಅಂಥ ವ್ಯಕ್ತಿಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.
  2. ಅತ್ತೆ :- ಹೆಣ್ಣು ಕೊಟ್ಟ ಅತ್ತೆ ಮಾವ ಕಣ್ಣು ಕೊಟ್ಟ ದೇವರು ಇದ್ದ ಹಾಗೆ ಎಂದು ಹೇಳುತ್ತಾರೆ. ಅದು ಸತ್ಯವೇ ಆಗಿದೆ, ಅತ್ತೆಗೆ ಗೌರವ ಕೊಡಬೇಕು, ಹಾಗೆಯೇ ಅತ್ತೆ ಮಾವನ ಕಷ್ಟಕ್ಕೆ ಯಾವಾಗಲೂ ಸಹಾಯವಾಗಿ ನಿಲ್ಲಬೇಕು. ಅತ್ತೆ ತಾಯಿಯ ಸಮಾನ, ಹಾಗಾಗಿ ಅತ್ತೆಯನ್ನು ತಾಯಿಯನ್ನು ನೋಡಿಕೊಳ್ಳುವ ಹಾಗೆ ನೋಡಿಕೊಳ್ಳಬೇಕು. ಆಗ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.
  3. ಸ್ನೇಹಿತನ ಪತ್ನಿ :- ಸ್ನೇಹಿತರು ಬದುಕಿನಲ್ಲಿ ಆಪ್ತರು, ಯಾವಾಗಲೂ ನಮ್ಮ ಜೊತೆಗೆ ಇರುವವರು. ಸ್ನೇಹಿತರ ಜೊತೆಗೆ ಯಾವಾಗಲೂ ಸಂತೋಷವಾಗಿರುತ್ತೇವೆ. ಸ್ನೇಹಿತರ ಜೊತೆಗೆ ಸಲುಗೆ ಇದ್ದರು ಕೂಡ ಅವರ ಮೇಲೆ ಅಷ್ಟೇ ಗೌರವ ಕೂಡ ಇರುತ್ತದೆ. ಆದರೆ ನೀವು ನಿಮ್ಮ ಸ್ನೇಹಿತನಿಗೆ ಮಾತ್ರ ಗೌರವ ಕೊಡುವುದಲ್ಲ, ಜೊತೆಗೆ ಸ್ನೇಹಿತನ ಪತ್ನಿಗೆ ಕೂಡ ಗೌರವ ಕೊಡಬೇಕು. ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು. ಇದರಿಂದಾಗಿ ನಿಮ್ಮ ಮೇಲೆ ಲಕ್ಷ್ಮೀದೇವಿಯ ಅನುಗ್ರಹ ಇರುತ್ತದೆ.
  4. ರಾಜನ ಪತ್ನಿ :- ಒಂದು ಊರಿಗೆ ರಾಜ ಎಂದರೆ ಅವರು ಇಡೀ ಸಂಸ್ಥಾನವನ್ನು ನೋಡಿಕೊಳ್ಳುವ ತಂದೆ ಇದ್ದ ಹಾಗೆ. ಹಾಗೆಯೇ ಅವರ ಪತ್ನಿ ಕೂಡ ಅದೇ ರೀತಿ, ತಾಯಿಯ ಸಮಾನ. ಹಾಗಾಗಿ ರಾಜನ ಪತ್ನಿ ಅಂದರೆ ಮಹಾರಾಣಿಯನ್ನು ಕೂಡ ಅಷ್ಟೇ ಗೌರವದಿಂದ ಕಾಣಬೇಕು. ಆಗ ಲಕ್ಷ್ಮೀದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಇದೆಲ್ಲವೂ ಚಾಣಕ್ಯನೀತಿಯಲ್ಲಿ ತಿಳಿಸಲಾಗಿದೆ.
Leave A Reply

Your email address will not be published.