Valentines Day: ಮದುವೆ ಆದ್ಮೇಲೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡ್ತಿದ್ದೀರಾ? ನಿಮ್ಮ ಸಂಗಾತಿಯನ್ನು ಖುಷಿ ಪಡಿಸಲು ಇಲ್ಲಿದೆ ಸಲಹೆಗಳು.

0 34

Valentines Day: ಇಂದು ಪ್ರೇಮಿಗಳ ದಿನ ಪ್ರೀತಿ ಮಾಡುವವರಿಗೆ ಮದುವೆ ಆಗುವವರಿಗೆ ಎಲ್ಲರಿಗೂ ಬಹಳ ಸ್ಪೆಷಲ್. ಈ ದಿವಸ ತಮ್ಮ ಪ್ರೀತಿ ಪಾತ್ರರಿಗೆ ಮನಸ್ಸಿನಲ್ಲಿರುವ ಪ್ರೀತಿಯನ್ನು ಹೇಳಿಕೊಳ್ಳಲು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರಿಗೆ ತಮ್ಮ ಸಂಗಾತಿಗೆ ಏನು ಕೊಡೋದು ಎನ್ನುವ ಪ್ರಶ್ನೆ ಇರುತ್ತದೆ. ಒಂದು ವೇಳೆ ನೀವು ಮದುವೆಯಾದ ನಂತರ ಪ್ರೇಮಿಗಳ ದಿನದ ಆಚರಣೆ ಮಾಡುತ್ತಿದ್ದರೆ ಇಂದು ನಿಮಗಾಗಿ ಕೆಲವು ಗಿಫ್ಟ್ ಐಡಿಯಾಗಳನ್ನು ತಿಳಿಸುತ್ತೇವೆ. ಇದನ್ನು ನೋಡಿ ನಿಮ್ಮ ಸಂಗಾತಿಗೆ ಸಂತೋಷ ಅಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಗುಲಾಬಿ ಹೂವು: ಪ್ರೀತಿಸುವವರಿಗೆ ಗುಲಾಬಿ ಹೂ ಅಂದ್ರೆ ತುಂಬಾ ಇಷ್ಟ. ಲವ್ ನಲ್ಲಿ ಗುಲಾಬಿ ತುಂಬಾ ಸ್ಪೆಷಲ್. ಮನಸ್ಸು ಹೇಗೆ ಇದ್ದರು ಸಹ, ಗುಲಾಬಿ ಹೂವನ್ನು ನೋಡಿದ ಕೂಡಲೇ ಸಂತೋಷ ಪಡುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಸಂತೋಷಪಡಿಸಲು ಗುಲಾಬಿಗಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ ಎಂದು ಹೇಳಿದರೆ ಖಂಡಿತ ತಪ್ಪಲ್ಲ.

ಕ್ಯಾಂಡಲ್ ಲೈಟ್ ಡಿನ್ನರ್: ರೊಮ್ಯಾಂಟಿಕ್ ಆಗಿ ನಿಮ್ಮ ಸಂಗಾತಿಯ ಜೊತೆಗೆ ಸಮಯ ಕಳೆಯಲು ಮತ್ತೊಂದು ಐಡಿಯಾ ಕ್ಯಾಂಡಲ್ ಲೈಟ್ ಡಿನ್ನರ್. ಇಂದು ರಾತ್ರಿ ನಿಮ್ಮಿಷ್ಟದ ಹೋಟೆಲ್ ಒಂದರಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ ಮಾಡಿ, ನಿಮ್ಮ ಸಂಗಾತಿಯನ್ನು ಕರೆದುಕೊಂಡು ಹೋಗಿ ಸರ್ಪ್ರೈಸ್ ಕೊಡಿ, ಅದನ್ನ ನೋಡಿ ಫುಲ್ ಖುಷಿಯಾಗುತ್ತಾರೆ.

ಸರ್ಪ್ರೈಸ್ ಗಿಫ್ಟ್ ಕೊಡಿ: ನಿಮ್ಮ ಸಂಗಾತಿಯ ಇಷ್ಟ ಆಗುವ ವಸ್ತುವನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿ. ಬಟ್ಟೆ, ಬಾಳೆ, ಹೂವು, ಆಭರಣ ಅಥವಾ ಅವರ ಮನಸ್ಸಿಗೆ ಹತ್ತಿರ ಅಗುವಂಥ ಯಾವುದನ್ನಾದರು ಗಿಫ್ಟ್ ಆಗಿ ಕೊಡಬಹುದು. ಅದರಿಂದ ಸಂತೋಷವಾಗುತ್ತಾರೆ, ನಿಮ್ಮ ಬಾಂಧವ್ಯ ಕೂಡ ಜಾಸ್ತಿಯಾಗುತ್ತದೆ.

ರೊಮ್ಯಾಂಟಿಕ್ ವಾಕ್: ಸಂಜೆ ಸಮಯದಲ್ಲಿ ನೀವಿಬ್ಬರೇ ಸುತ್ತಾಡಲು ಹೊರಗೆ ಹೋಗಿ. ಇದರಿಂದ ಇಬ್ಬರ ಮನಸ್ಸಿಗೂ ಸಂತೋಷ ಸಿಗುತ್ತದೆ. ಕೈಕೈ ಹಿಡಿದು ವಾಕ್ ಗೆ ಹೋಗೋದು ಸಹ ಇಬ್ಬರಿಗೂ ಸಂತೋಷ ಕೊಡುವಂಥ ವಿಷಯ. ಈ ರೀತಿಯಾಗಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿ.

Leave A Reply

Your email address will not be published.