Actress: ರಿವಾಲ್ವರ್ ರಾಣಿ ಸಿನಿಮಾದಲ್ಲಿ ಕಂಗನಾ ರನಾವತ್ ಅವರೊಡನೆ ನಟಿಸಿದ್ದ ಸಹನಟಿ ಇನ್ನಿಲ್ಲ! ಬಾಲಿವುಡ್ ಗೆ ಬಿಗ್ ಶಾಕ್

0 19

Actress: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಲಾವಿದರು ನಿಧನ ರಾಗುತ್ತಿರುವ ವಿಚಾರಗಳನ್ನು ಕೇಳಿ ಚಿತ್ರರಂಗ ಶಾಕ್ ಆಗುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ಹಿರಿಯನಟಿ ಲೀಲಾವತಿ ಅವರು ವಿಧಿವಶರಾದರು. ಇದೀಗ ಬಾಲಿವುಡ್ ನಟಿ ಕೇವಲ 35 ವರ್ಷಕ್ಕೆ ಪ್ರಾಣ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೀಗ ಇವರ ಬಗೆಗಿನ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮರಣ ಹೊಂದಿರುವ ನಟಿಯ ಹೆಸರು ಮಲ್ಲಿಕಾ ರಾಜಪುತ್. ಇವರು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಇವರು 2014ರಲ್ಲಿ ನಟಿ ಕಂಗನಾ ರನಾವತ್ ಅವರ ರಿವಾಲ್ವರ್ ರಾಣಿ ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ಸಹನಟಿ ಹಾಗೂ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಲ್ಲಿಕಾ ರಜಪೂತ್ ಗಾಯಕಿ ಸಹ ಆಗಿದ್ದರು. ಆದರೆ ಇದೀಗ 35 ವರ್ಷಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ಮಲ್ಲಿಕಾ ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂಥ ಅವಕಾಶವೇನು ಸಿಗಲಿಲ್ಲ, ಇವರು ಗಾಯಕಿಯಾಗಿ ಕೂಡ ಗುರುತಿಸಿಕೊಂಡಿದ್ದರು. ಹಾಗೆಯೇ ಡ್ಯಾನ್ಸ್ ಕೂಡ ಹೇಳಿಕೊಡುತ್ತಿದ್ದರು. ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ಸಿಗದ ಕಾರಣ ಮಲ್ಲಿಕಾ ಅವರು 2016ರಲ್ಲಿ ಬಿಜೆಪಿ ಪಕ್ಷಕ್ಕೆ 2 ವರ್ಷ ರಾಜಕೀಯದಲ್ಲಿದ್ದರು. ಬಳಿಕ ಮಲ್ಲಿಕಾ ಅವರು ರಾಜಕೀಯದಿಂದಲು ದೂರವಾಗಿ, ಆಧ್ಯಾತ್ಮದ ಕಡೆಗೆ ವಾಲಿದರು. ಆದರೆ ಏನಾಯಿತೋ ಏನೋ ಗೊತ್ತಿಲ್ಲ..

ನಿನ್ನೆ ಉತ್ತರಪ್ರದೇಶದ ಸುಲ್ತಾನ್ ಪುರದಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ನಾರ್ಮಲ್ ಆಗಿಯೇ ಇದ್ದ ಮಲ್ಲಿಕಾ ಅವರು ತಂದೆ ತಾಯಿ ಯಾರಿವು ಹವ ಸುಳಿವನ್ನು ನೀಡದೇ ಈ ರೀತಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರಿಗೂ ಗೊತ್ತಾಗದೇ, ಬಾಗಿಲು ತೆರೆಯಲು ಆಗದೆ ಕಿಟಕಿ ಹತ್ತಿರ ಹೋಗಿ ನೋಡಿದಾಗ ಅವರು ಇನ್ನಿಲ್ಲ ಎನ್ನುವ ಸುದ್ದಿ ಗೊತ್ತಾಗಿದೆ.

Leave A Reply

Your email address will not be published.