Relationship: ಸಾಮಾನ್ಯವಾಗಿ ಬ್ರೇಕಪ್ ಆಗೋದು ಇದೇ ಕಾರಣಕ್ಕೆ! ಪ್ರೇಮಿಗಳು ಹುಷಾರಾಗಿರಿ!

0 23

Relationship: ಈ ಪ್ರಪಂಚದಲ್ಲಿ ಕೋಟ್ಯಾಂತರ ಪ್ರೇಮಿಗಳಿದ್ದಾರೆ. ಆದರೆ ಪ್ರೀತಿ ಮಾಡಿದವರೆಲ್ಲರ ಸಕ್ಸಸ್ ಆಗೋದಿಲ್ಲ ಎನ್ನುವುದು ಗೊತ್ತಿರುವ ವಿಷಯವೇ. ಅನೇಕ ಕಾರಣಗಳಿಗೆ ಪ್ರೇಮಿಗಳ ನಡುವೆ ಮನಸ್ತಾಪ ಮೂಡಿ ಬ್ರೇಕಪ್ ಮಾಡಿಕೊಳ್ಳಬಹುದು. ಎಲ್ಲವೂ ಚೆನ್ನಾಗಿದ್ದು ಮನೆಯವರ ಕಾರಣಕ್ಕೆ ಬ್ರೇಕಪ್ ಮಾಡಿಕೊಳ್ಳಬಹುದು. ಹೀಗೆ ಬ್ರೇಕಪ್ ಗೆ ನೂರಾರು ಕಾರಣಗಳು. ಆದರೆ ಸಾಮಾನ್ಯವಾಗಿ ಬ್ರೇಕಪ್ ಆಗೋದು ಈ ಕೆಲವು ಕಾರಣಗಳಿವೆ. ಅವುಗಳು ಏನೇನು ಅಂತ ನಿಮಗೆ ಗೊತ್ತಿದ್ದರೆ, ಲವ್ ಲೈಫ್ ನಲ್ಲಿ ಹುಷಾರಾಗಿ ಇರಬಹುದು…

ಬ್ರೇಕಪ್ ಗೆ ಕಾರಣಗಳು ಏನೇನು ಎಂದು ತಿಳಿಯೋಣ..

ಸುಳ್ಳು ಮೋಸ: ಒಂದು ಸಂಬಂಧದಲ್ಲಿ ನಂಬಿಕೆ ತುಂಬಾ ಮುಖ್ಯ. ನಂಬಿಕೆ ಇರಬೇಕು ಎಂದರೆ ಸುಳ್ಳು ಹೇಳುವುದು, ಮೋಸ ಮಾಡುವುದು ಮಾಡಬಾರದು. ಒಂದೇ ಒಂದು ಸುಳ್ಳು, ಸಣ್ಣ ವಿಷಯಕ್ಕೆ ಮೋಸ, ಇವುಗಳೇ ಮುಂದೆ ದೊಡ್ಡ ಭಿನ್ನಾಭಿಪ್ರಾಯವಾಗಿ ಪರಿಣಮಿಸಿ ಬ್ರೇಕಪ್ ಗೆ ಕಾರಣ ಆಗುತ್ತದೆ.

ಬ್ಯಾಲೆನ್ಸ್: ಒಂದು ಸಂಬಂಧದಲ್ಲಿ ಇಬ್ಬರಲ್ಲಿ ಹೊಂದಾಣಿಕೆ ಹೇಗಿದೆ ಅನ್ನೋದು ತುಂಬಾ ಮುಖ್ಯ. ಯಾವುದೇ ವಿಷಯಕ್ಕೆ ನಿರ್ಧಾರ ತೆಗೆದುಕೊಳ್ಳುವಾಗ ಇಬ್ಬರು ಸೇರಿ ತೆಗೆದುಕೊಳ್ಳಬೇಕು. ಒಬ್ಬರೇ ನಿರ್ಧಾರ ತೆಗೆದುಕೊಳ್ಳುವುದು, ಇನ್ನೊಬ್ಬರನ್ನು ಬಿಟ್ಟುಬಿಡುವುದು, ಹೀಗೆ ಮಾಡುವುದರಿಂದ ಬ್ರೇಕಪ್ ಆಗುತ್ತದೆ.

ಫ್ರೆಂಡ್ಸ್ ಫ್ಯಾಮಿಲಿಯನ್ನು ಬಿಡಬೇಡಿ: ನಿಮ್ಮ ಸಂಗಾತಿ ಸಿಕ್ಕ ನಂತರ ಬೇರೆ ಫ್ರೆಂಡ್ಸ್, ಫ್ಯಾಮಿಲಿ ಇವರೆಲ್ಲರನ್ನು ಬಿಟ್ಟು ಸಂಗಾತಿಯ ಜೊತೆಗೆ ಮಾತ್ರ ಇರಬಾರದು. ಒಬ್ಬರೇ ಆದರೆ ಅಲ್ಲಿ ಬೇಡದ ಮಾತು ಎಲ್ಲವೂ ಬರುತ್ತದೆ. ಆದರೆ ನಿಮ್ಮ ಫ್ರೆಂಡ್ಸ್, ಫ್ಯಾಮಿಲಿ ಎಲ್ಲರೂ ಜೊತೆಗಿದ್ದರೆ ಬ್ರೇಕಪ್ ಆಗುವುದು ಕಡಿಮೆ.

ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ: ಒಂದು ಸಂಬಂಧದಲ್ಲಿ ನೀವು ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಳ್ಳುತ್ತೀರಾ ಎನ್ನುವುದು ತುಂಬಾ ಮುಖ್ಯ. ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಹೋದರೆ, ಆ ಸಂಬಂಧ ಜಾಸ್ತಿ ದಿನ ಉಳಿಯುವುದಿಲ್ಲ.

Insecurity: ಸಂಬಂಧದಲ್ಲಿ ಸಂಗಾತಿಯ ಮೇಲೆ ನಂಬಿಕೆ ಇಲ್ಲದೇ ಇದ್ದಾಗ ಅಭದ್ರತೆ ಕಾಡುವುದಕ್ಕೆ ಶುರುವಾಗುತ್ತದೆ. ಈ ಭಾವನೆ ಶುರುವಾದರೆ ಸಂಬಂಧ ಜಾಸ್ತಿ ದಿನ ಇರುವುದಿಲ್ಲ .

ಅಸೂಯೆ: ನಿಮ್ಮ ಸಂಗಾತಿಯ ಮೇಲೆ ಅಸೂಯೆ ಶುರುವಾಗುವುದು ಒಳ್ಳೆಯದಲ್ಲ. ಇದರಿಂದ ಹಲ್ಲೆಗಳು ನಡೆಯುವುದಕ್ಕೆ ಶುರುವಾಗಬಹುದು. ಇದರಿಂದ ಬ್ರೇಕಪ್ ಆಗುತ್ತದೆ.

ಕಮ್ಯುನಿಕೇಶನ್ ಗ್ಯಾಪ್: ಯಾವುದೇ ಸಂಬಂಧ ಆದರೂ ನಿಲ್ಲುವುದು ಮಾತುಕತೆ, ಕಮ್ಯುನಿಕೇಶನ್ ಮೇಲೆ. ನಿಮ್ಮ ಸಂಬಂಧದಲ್ಲಿ ಮಾತನಾಡಿ ಕ್ಲಿಯರ್ ಮಾಡಿಕೊಳ್ಳುವುದು ಎಷ್ಟೋ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಆದರೆ ಆ ಮಾತಿನ ಸಂವಾಹನೆಯೇ ನಡೆಯಲಿಲ್ಲ ಎಂದರೆ, ಆ ಸಂಬಂಧ ಉಳಿಯುವುದಿಲ್ಲ.

ಕಂಟ್ರೋಲ್: ಸಂಬಂಧದಲ್ಲಿ ಒಬ್ಬರನ್ನು ಮತ್ತೊಬ್ಬರು ಕಂಟ್ರೋಲ್ ಮಾಡಬಾರದು. ಇಬ್ಬರಿಗೂ ಕೂಡ ಫ್ರೀಡಂ ಇರಬೇಕು. ಒಬ್ಬರನ್ನು ಮತ್ತೊಬ್ಬರು ಕಂಟ್ರೋಲ್ ಮಾಡುವುದಕ್ಕೆ ಶುರು ಮಾಡಿದರೆ, ಆ ಸಂಬಂಧ ಉಳಿಯುವುದಿಲ್ಲ. ಬ್ರೇಕಪ್ ನಲ್ಲಿ ಕೊನೆಯಾಗುತ್ತದೆ.

Leave A Reply

Your email address will not be published.