Potato Chips: ಇಷ್ಟ ಅಂತ ಅತಿಯಾಗಿ ಹೊರಗಿನ ಆಲೂಗಡ್ಡೆ ಚಿಪ್ಸ್ ತಿಂತೀರಾ? ಕೂಡಲೇ ನಿಲ್ಲಿಸಿ, ಇದು ಆರೋಗ್ಯಕ್ಕೆ ಹಾನಿಕರ

Written by Pooja Siddaraj

Published on:

Potato Chips:ಆಲೂಗಡ್ಡೆ ಚಿಪ್ಸ್, ಈ ಹೆಸರು ಕೇಳಿದ್ರೆನೆ ಎಲ್ಲರಿಗೂ ತಿನ್ನಬೇಕು ಅನ್ಸುತ್ತೆ. ದೊಡ್ಡವರಿಂದ ಮಕ್ಕಳವರೆಗೂ ಎಲ್ಲರೂ ಕೂಡ ಆಲೂಗಡ್ಡೆ ಚಿಪ್ಸ್ ಅನ್ನ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳಿಗಂತೂ ಇದು ತುಂಬಾ ಇಷ್ಟ. ಮನೆಯಲ್ಲಿದ್ದರು, ಹೊರಗಡೆ ಹೋದರು ಚಿಪ್ಸ್ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಇಷ್ಟ ಎಂದು ಅತಿಯಾಗಿ ಆಲೂಗಡ್ಡೆ ಚಿಪ್ಸ್ ತಿನ್ನಬೇಡಿ. ನಿಮ್ಮ ಆರೋಗ್ಯಕ್ಕೆ ಅದು ಒಳ್ಳೆಯದಲ್ಲ.

ಆಲೂಗಡ್ಡೆ ಚಿಪ್ಸ್ ಅನ್ನು ಮನೆಯಲ್ಲೇ ಆರೋಗ್ಯಕರವಾಗಿ ಮಾಡೋದು ಒಳ್ಳೆಯದು. ಆದರೆ ಹೊರಗಡೆ ಇಂದ ಪ್ಯಾಕೆಟ್ ತಂದು ತಿನ್ನೋದು ಒಳ್ಳೆಯದಲ್ಲ. ಹೊರಗೆ ಅಂಗಡಿಗಳಲ್ಲಿ ಮಾಡುವ ಆಲೂಗಡ್ಡೆ ಚಿಪ್ಸ್ ಆರೋಗ್ಯಕ್ಕೆ ಹಾನಿಕರ, ಇವುಗಳಲ್ಲಿ ಅತಿಯಾಗಿ ಎಣ್ಣೆ, ಉಪ್ಪು, ಖಾರ ಇದೆಲ್ಲವೂ ಸೇರಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಪ್ರಮಾಣ ಜಾಸ್ತಿ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ..

ಈ ರೀತಿ ಅಂಗಡಿಗಳಲ್ಲಿ ಪ್ಯಾಕ್ ಮಾಡಿರುವ ಚಿಪ್ಸ್ ಮಕ್ಕಳು ಮತ್ತು ದೊಡ್ಡವರು ಇಬ್ಬರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇದನ್ನು ಅತಿಯಾಗಿ ತಿನ್ನುವುದರಿಂದ ದೇಹಕ್ಕೆ ಅನಾವಶ್ಯಕವಾಗಿ ಕೊಬ್ಬು ಸೇರಿಕೊಳ್ಳುತ್ತದೆ. ಇದರಿಂದ ತೂಕ ಜಾಸ್ತಿಯಾಗುತ್ತದೆ. ಜೊತೆಗೆ ಬಿಪಿ ಹೆಚ್ಚಾಗುವ ಸಾಧ್ಯತೆ ಸಹ ಇರುತ್ತದೆ. ಮಾತ್ರವಲ್ಲ ಬೇರೆ ಆರೋಗ್ಯಕರ ಸಮಸ್ಯೆಗಳು ಶುರುವಾಗಬಹುದು.

ಇಷ್ಟು ಮಾತ್ರವಲ್ಲದೆ, ಆಲೂಗಡ್ಡೆ ಚಿಪ್ಸ್ ಇಂದ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಶುರುವಾಗಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ, ಆಲೂಗಡ್ಡೆ ಚಿಪ್ಸ್ ಬಿಟ್ಟು ಆರೋಗ್ಯಕ್ಕೆ ಒಳ್ಳೆಯದನ್ನು ಮಾಡುವ ಹಣ್ಣು, ತರಕಾರಿ ತಿನ್ನಿ. ಇದು ಆರೋಗ್ಯಕ್ಕೆ ಒಳ್ಳೆಯದು, ರುಚಿ ಕೂಡ ಚೆನ್ನಾಗಿರುತ್ತದೆ. ಚಿಪ್ಸ್ ತಿನ್ನುವುದನ್ನು ಈಗಲೇ ಬಿಟ್ಟುಬಿಡಿ.

Leave a Comment