Lifestyle: ಗರ್ಭಿಣಿ ಮಹಿಳೆಯರು ಆಕ್ಟಿವ್ ಆಗಿರೋದಕ್ಕೆ ಈ ಸಲಹೆಗಳನ್ನು ಪಾಲಿಸಿ

0 42

Lifestyle: ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದು ಬಹಳ ಸ್ಪೆಷಲ್. ಈ ಸಮಯದಲ್ಲಿ ಮಹಿಳೆಯರು ಬಹಳ ಹುಷಾರಾಗಿರಬೇಕು. ಹಾಗೆಯೇ ಗರ್ಭಿಣಿ ಆಗಿರುವ ಕಾರಣಕ್ಕೆ ಅವರಿಗೆ ಇಷ್ಟಬಂದ ಹಾಗೆ ಮಾಡುವ ಹಾಗಿಲ್ಲ, ದೊಡ್ಡವರು ಹೇಳಿದ್ದನ್ನು ಕೇಳಬೇಕು. ಹಾಗೆಯೇ ಗರ್ಭಿಣಿ ಆಗಿರುವವರು ಆಕ್ಟಿವ್ ಆಗಿ ಕೂಡ ಇರಬೇಕು. ಗರ್ಭಿಣಿಯರು ಆಕ್ಟಿವ್ ಆಗಿರಬೇಕು ಎಂದರೆ, ಈ ಕೆಲವು ಟಿಪ್ಸ್ ಫಾಲೋ ಮಾಡಿ…

ವಾಕಿಂಗ್ ಮಾಡಿ: ಸಮಯ ಸಿಕ್ಕಾಗಲೆಲ್ಲಾ ವಾಕ್ ಮಾಡಿ. ಬಸ್ ನಲ್ಲಿ ಓಡಾಡುವವರು ಬಸ್ ಸ್ಟಾಪ್ ಇಂದ ಮನೆಗೆ ನಡೆದುಕೊಂಡು ಹೋಗಬಹುದು.
ಹೊರಗಡೆ ಸುತ್ತಾಡಿ: ಕೆಲಸದಿಂದ ಒಂದು ಬ್ರೇಕ್ ತೆಗೆದುಕೊಂಡು ಸಾಧ್ಯ ಆದಾಗಲೆಲ್ಲಾ ಹೊರಗಡೆ ಅಕ್ಕ ಪಕ್ಕದ ಜಾಗದಲ್ಲೇ ಸುತ್ತಾಡಿ. ಇದರಿಂದ ಮನಸ್ಸಿಗೂ ಬದಲಾವಣೆ ಆಗುತ್ತದೆ, ನೀವು ಕೂಡ ಫ್ರೆಶ್ ಆಗುತ್ತೀರಿ..

ಲಿಫ್ಟ್ ಇಂದ ದೂರವಿರಿ: ಗರ್ಭಾವಸ್ಥೆಯಲ್ಲಿ ಲಿಫ್ಟ್ ಮೇಲೆ ಹೆಚ್ಚು ಅವಲಂಬಿಸಬೇಡಿ, ಮೆಟ್ಟಿಲುಗಳ ಮೂಲಕ ಓಡಾಡುವುದಕ್ಕೆ ಶುರು ಮಾಡಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಹಾಗೆಯೇ ದೇಹದ ಅಂಗಾಂಗಳು ಆಕ್ಟಿವ್ ಆಗಿರುವುದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಮೆಟ್ಟಿಲುಗಳನ್ನು ಬಳಸಿ.
ತೋಳುಗಳ ಆರೋಗ್ಯ ನೋಡಿಕೊಳ್ಳಿ: ಸಣ್ಣ ವಸ್ತುಗಳನ್ನು ಎತ್ತುವುದು, ಬ್ಯಾಗ್ ಗಳನ್ನು ಎತ್ತುವುದು ಮಾಡಿ. ಇದರಿಂದ ತೋಳು ಬಲವಾಗಿರುತ್ತದೆ. ಆದರೆ ಅತಿಯಾದ ಭಾರವಾದ ವಸ್ತುಗಳನ್ನು ಎತ್ತಬೇಡಿ.

ಮನೆಕೆಲಸ ಮಾಡಿ: ಆಗಾಗ ನೀವು ಮನೆಕೆಲಸಗಳಲ್ಲಿ ಕೂಡ ತೊಡಗಿಸಿಕೊಳ್ಳಬೇಕು. ಸಂಗೀತ ಕೇಳೋದು, ಸಿನಿಮಾ ನೋಡೋದು ಈ ವೇಳೆ ಸಣ್ಣ ಕೆಲಸಗಳನ್ನ ಮಾಡಿ.
ಹೂವುಗಳನ್ನು ಬೆಳೆಸಿ: ನಿಮ್ಮ ಮನೆಯಲ್ಲಿ ಜಾಗ ಇದ್ದರೆ ಹೂವುಗಳನ್ನು ಬೆಳೆಸಿ. ಗಿಡ ಬೆಳೆಸಿ, ಗಿಡಗಳ ಆರೈಕೆ ಮಾಡುವುದು ಈ ಎಲ್ಲಾ ಕೆಲಸಗಳನ್ನು ಮಾಡಿದರೆ, ನಿಮಗೆ ವಿಟಮಿನ್ ಡಿ ಸಿಗುತ್ತದೆ. ಜೊತೆಗೆ ಇದು ವ್ಯಾಯಾಮದ ಒಂದು ಮಾರ್ಗ ಕೂಡ ಆಗಿದೆ.

ವ್ಯಾಯಾಮ ಮಾಡಿ: ಸಮಯ ಸಿಕ್ಕಾಗಲೆಲ್ಲಾ ಮನೆಯಲ್ಲೇ ಸಣ್ಣದಾಗಿ ವ್ಯಾಯಾಮ ಮಾಡಿ. ಇದಕ್ಕಾಗಿ ನಿಮಗೆ ಯೂಟ್ಯೂಬ್, ಡಿವಿಡಿ ಎಲ್ಲವೂ ಸಿಗುತ್ತದೆ..ಅವುಗಳನ್ನು ಬಳಸಿ ವ್ಯಾಯಾಮ ಮಾಡಿ.
ಪೆಲ್ವಿಕ್ ಫ್ಲೋರ್ ವ್ಯಾಯಾಮ: ಇದು ಬಹಳ ಮುಖ್ಯವಾದ ವಿಚಾರ ಆಗಿದ್ದು, ಈ ವ್ಯಾಯಾಮ ಮಾಡಿದರೆ ನಿಮಗೆ ಹೆರಿಗೆ ಸಮಯದಲ್ಲಿ ಸಹಾಯ ಆಗುತ್ತದೆ.

Leave A Reply

Your email address will not be published.