Weight Loss Salad: ತೂಕ ಕಡಿಮೆ ಮಾಡೋಕೆ ಈ ಹೆಲ್ತಿ ಸಲಾಡ್ ತಪ್ಪದೇ ಸೇವಿಸಿ

0 56

Weight Loss Salad: ತೂಕ ಜಾಸ್ತಿ ಇರುವವರು ಆದಷ್ಟು ಬೇಗ ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಲೇ ಇರುತ್ತಾರೆ. ವ್ಯಾಯಾಮ ಮಾಡಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ಎಷ್ಟು ಮುಖ್ಯವೋ, ತೂಕ ಕಡಿಮೆ ಆಗುವುದಕ್ಕೆ ಆಹಾರದ ಬಗ್ಗೆ ಕಾಳಜಿ ವಹಿಸುವುದು ಕೂಡ ಅಷ್ಟೇ ಸುಲಭ ಆಗುತ್ತದೆ. ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಬಂದರೆ, ದೇಹದ ತೂಕ ಕಡಿಮೆ ಆಗುತ್ತದೆ. ಇಂದು ಅಂಥದ್ದೇ ಒಂದು ಪದಾರ್ಥದ ಬಗ್ಗೆ ತಿಳಿಯೋಣ..

ತೂಕ ಕಡಿಮೆ ಮಾಡಲು ತರಕಾರಿಗಳನ್ನು ಸೇವಿಸುವುದು ತುಂಬಾ ಮುಖ್ಯವಾಗುತ್ತದೆ. ತರಕಾರಿಗಳನ್ನು ಸೇವನೆಯನ್ನು ಸಲಾಡ್ ಗಳ ಮೂಲಕ ಕೂಡ ಮಾಡಬಹುದು. ಈ ಆರೋಗ್ಯಕರವಾದ ಸಲಾಡ್ ಅನ್ನು ನೀವು ತಿಂದರೆ, ಬೇಗ ಸಣ್ಣ ಆಗ್ತೀರಿ. ಇದು ಮಿಕ್ಸ್ಡ್ ವೆಜಿಟೇಬಲ್ ಸಲಾಡ್ ಆಗಿದ್ದು, ಮಾಡೋದು ಹೇಗೆ? ಯಾವೆಲ್ಲಾ ತರಕಾರಿಗಳು ಬೇಕಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಅಗತ್ಯವಿರುವ ಸಾಮಗ್ರಿಗಳು:

*ಮಿಕ್ಸ್ ವೆಜಿಟೇಬಲ್ಸ್ (ಸೌತೆಕಾಯಿ, ಈರುಳ್ಳಿ, ಟೊಮ್ಯಾಟೋ) : 2 ಕಪ್ಸ್
*ಮೊಸರು : 1 ಕಪ್
*ಲೆಮನ್ ಜ್ಯುಸ್ : 1 ಸ್ಪೂನ್
*ಆಲಿವ್ ಆಯ್ಲ್ : 1 ಸ್ಪೂನ್
*ಗಾರ್ಲಿಕ್ ಪೌಡರ್ : 1/4 ಸ್ಪೂನ್
*ಉಪ್ಪು : ರುಚಿಗೆ ತಕ್ಕಷ್ಟು
*ಬ್ಲ್ಯಾಕ್ ಪೆಪ್ಪರ್ : ರುಚಿಗೆ ತಕ್ಕಷ್ಟು
*ಈರುಳ್ಳಿ ಪುಡಿ ಮಿಕ್ಸ್ : 1/4 ಸ್ಪೂನ್

ತಯಾರಿಸುವ ವಿಧಾನ:

*ಮೊದಲು ಒಂದು ಬೌಲ್ ಗೆ ಮೊಸರು, ಲೆಮನ್ ಜ್ಯುಸ್, ಆಲಿವ್ ಆಯ್ಲ್, ಗಾರ್ಲಿಕ್ ಪೌಡರ್, ಉಪ್ಪು, ಬ್ಲ್ಯಾಕ್ ಪೆಪ್ಪರ್, ಈರುಳ್ಳಿ ಪುಡಿ ಇದೆಲ್ಲವನ್ನು ಹಾಕಿ ಡ್ರೆಸಿಂಗ್ ಪ್ರಿಪೇರ್ ಮಾಡಿ.
*ಬಳಿಕ ತರಕಾರಿಗಳನ್ನು ಸಣ್ಣದಾಗಿ ಕಟ್ ಮಾಡಿ
*ಕಟ್ ಮಾಡಿದ ತರಾಕಾರಿಗಳನ್ನು ಮೊಸರಿನ ಡ್ರೆಸ್ಸಿಂಗ್ ಗೆ ಹಾಕಿ, ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ
*ಮಿಕ್ಸ್ ಮಾಡಿದ ತಕ್ಷಣ ಅಥವಾ ಫ್ರಿಜ್ ನಲ್ಲಿಟ್ಟು ಸ್ವಲ್ಪ ಹೊತ್ತಿನ ನಂತರ ತಿನ್ನಬಹುದು.

ಈ ಸಲಾಡ್ ನಲ್ಲಿ ನಿಮಗೆ 10 ಗ್ರಾಮ್ ಪ್ರೊಟೀನ್, 5 ಗ್ರಾಮ್ ಫೈಬರ್, ವಿಟಮಿನ್ ಎ, ಸಿ ಅಂಡ್ ಕೆ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಇದೆಲ್ಲವೂ ಸಿಗುತ್ತದೆ. ತೂಕ ಇಳಿಸಲು ಇಂಥ ಸಲಾಡ್ ಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ಇದೇ ಸಲಾಡ್ ಗೆ ಬೇರೆ ತರಕಾರಿಗಳನ್ನು ಕೂಡ ಸೇರಿಸಿಕೊಳ್ಳಬಹುದು.

Leave A Reply

Your email address will not be published.