Summer Tips: ಬೇಸಿಗೆಯಲ್ಲಿ ಸಿಕ್ಕ ಸಿಕ್ಕ ಕಡೆ ಕಬ್ಬಿನ ಜ್ಯುಸ್ ಕುಡಿಯುವ ಮೊದಲು ಈ ವಿಚಾರ ನೆನಪಲ್ಲಿಡಿ

0 54

Summer Tips: ಚಳಿಗಾಲ ಮುಗಿಯುವುದಕ್ಕಿಂತ ಮೊದಲೇ ಬೇಸಿಗೆಯ ಬಿಸಿಲು ಶುರುವಾಗಿದೆ. ಈಗಲೇ ಇಷ್ಟು ಬಿಸಿಲಿದ್ದು, ಮುಂದೆ ಇನ್ನೆಷ್ಟು ಮಟ್ಟಿಗೆ ಟೆಂಪರೇಚರ್ ಜಾಸ್ತಿ ಆಗುತ್ತೋ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ. ಬೇಸಿಗೆಯ ವೇಳೆ ನಾವು ನಮ್ಮ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು. ಈ ವೇಳೆ ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ ಆಗುತ್ತದೆ..

ಬೇಸಿಗೆ ವೇಳೆ ಸೌತೆಕಾಯಿ ಅಂಥ ಆಹಾರ ಸೇವಿಸುವುದು, ಸ್ವಲ್ಪ ಉಪ್ಪು ಮತ್ತು ನಿಂಬೆರಸ ಬೆರೆಸಿದ ನೀರು ಕುಡಿಯುವುದು ಇದೆಲ್ಲವೂ ಒಳ್ಳೆಯ ಅಭ್ಯಾಸ ಆಗಿರುತ್ತದೆ. ಹಾಗೆಯೇ ಸಮ್ಮರ್ ನಲ್ಲಿ ಹರಡುವ ಸೂಕ್ಷ್ಮಜೀವಿಗಳ ಬಗ್ಗೆ ಕೂಡ ನಾವು ತಿಳಿದಿರಬೇಕು. ಈ ವೇಳೆ ನಾವು ಬಿಸಿಲಿನಿಂದ ಹೆಚ್ಚು ಬೆವರುತ್ತೇವೆ. ಆ ನೀರಿನಲ್ಲಿ ಕೂಡ ಬ್ಯಾಕ್ಟೀರಿಯಾ, ವೈರಾಣುಗಳು ಇರುತ್ತದೆ. ಹಾಗಾಗಿ ಹುಷಾರಾಗಿರಬೇಕು..

ಬೇಸಿಗೆ ವೇಳೆ ಬಿಸಿಲಿನ ಬೇಗೆಯಿಂದ ಬಾಯಾರಿಕೆ ಜಾಸ್ತಿ ಇರುತ್ತದೆ, ಹಾಗಾಗಿ ನಾವು ಹೆಚ್ಚು ನೀರು ಕುಡಿಯುತ್ತೇವೆ. ಹಲವು ಸಾರಿ ನಮ್ಮ ಬಳಿ ನೀರು ಇಲ್ಲದೇ ಇದ್ದಾಗ ಹೊರಗಡೆ ಸಿಗುವ ನೀರು, ಜ್ಯುಸ್, ಕಬ್ಬಿನ ಜ್ಯುಸ್ ಇದನ್ನೆಲ್ಲಾ ಕುಡಿಯುತ್ತೇವೆ. ಆದರೆ ಕಬ್ಬಿನ ಜ್ಯುಸ್ ಕುಡಿಯುವುದಕ್ಕಿಂತ ಕೆಲವು ವಿಚಾರಗಳನ್ನ ನೀವು ನೆನಪಿಡಬೇಕು. ಸೂಕ್ಷ್ಮಜೀವಿಗಳು ನೀರಿನಿಂದ ಕೂಡ ಹರಡುತ್ತದೆ. ಹಾಗಾಗಿ ಎಲ್ಲೆಂದರಲ್ಲಿ ಜ್ಯುಸ್ ಕುಡಿಯಬಾರದು.

ಬಸ್ ಸ್ಟ್ಯಾಂಡ್ ನಲ್ಲಿ ಸಿಗುವ ನೀರಿನಿಂದ ಅಥವಾ ಸಾರ್ವಜನಿಕವಾಗಿ ಸಿಗುವ ನೀರಿನಿಂದ ತಯಾರಿಸಿದ್ದರೆ , ಅಂಥ ನೀರಿನಲ್ಲಿ ಮಾಡಿದ ಜ್ಯುಸ್ ಕುಡಿದರೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಹಾಗಾಗಿ ಎಲ್ಲೇ ಆದರೂ ಜ್ಯುಸ್ ಕುಡಿಯುವ ಮೊದಲು ಹುಷಾರಾಗಿರಿ.

Leave A Reply

Your email address will not be published.