Deepika Padukone: ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ? ಫೋಟೋ ಬಯಲು ಮಾಡಿದ ಗುಟ್ಟು!

0 39

Deepika Padukone: ನಟಿ ದೀಪಿಕಾ ಪಡುಕೋಣೆ ಅವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ದೀಪಿಕಾ ಪಡುಕೋಣೆ ಅವರು ಇಂದು ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್. ಗ್ಲೋಬಲ್ ಲೆವೆಲ್ ನಲ್ಲಿ ಕೂಡ ದೀಪಿಕಾ ಅವರು ಸದ್ದು ಮಾಡಿದ್ದಾರೆ. ಇದೀಗ ಇವರು ತಾಯಿ ಆಗುತ್ತಿದ್ದಾರಾ ಎನ್ನುವ ಮಾತು ಕೇಳಿಬರುತ್ತಿದೆ. ಅಷ್ಟಕ್ಕೂ ಈ ವಿಚಾರ ನಿಜವೇ? ತಿಳಿಸುತ್ತೇವೆ ನೋಡಿ..

ನಟಿ ದೀಪಿಕಾ ಪಡುಕೋಣೆ ಅವರು ಕನ್ನಡದಿಂದ ಸಿನಿಮಾ ಜರ್ನಿ ಶುರುಮಾಡಿ, ಬಾಲಿವುಡ್ ಗೆ ಎಂಟ್ರಿ ಕೊಟ್ಟು, ಇಂದು ಹಾಲಿವುಡ್ ನಲ್ಲಿ ಕೂಡ ಹೆಸರು ಮಾಡಿದ್ದಾರೆ. ಇವರು ಬಾಲಿವುಡ್ ನ ಖ್ಯಾತ ನಟ ರಣವೀರ್ ಸಿಂಗ್ ಅವರೊಡನೆ 2019ರಲ್ಲಿ ಮದುವೆಯಾದರು. ಈ ಜೋಡಿ ಎಲ್ಲರ ಫೇವರೆಟ್ ಎಂದರೆ ತಪ್ಪಲ್ಲ. ಈ ಜೋಡಿ ಮದುವೆ ಆಗಿ 5 ವರ್ಷಗಳ ಕಾಲ ಕಳೆದಿದೆ..

ಆದರೆ ಇವರಿಬ್ಬರು ಇನ್ನು ಕೂಡ ಮಗು ಹೊಂದುವ ಪ್ಲಾನ್ ನಲ್ಲಿ ಇರಲಿಲ್ಲ. ಆದರೆ ಇದೀಗ ಮದುವೆಯಾಗಿ 5 ವರ್ಷಗಳ ನಂತರ ದೀಪಿಕಾ ಪಡುಕೋಣೆ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ದೀಪಿಕಾ ಅವರು ಈಗ 2 ತಿಂಗಳ ಗರ್ಭಿಣಿ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದು, ದೀಪಿಕಾ ಅವರು ಸಿನಿಮಾ ಇಂದ ಕೆಲ ಸಮಯ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ..

ಆದರೆ ಇದು ನಿಜವೋ ಸುಳ್ಳೋ ಗೊತ್ತಿಲ್ಲ, ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರು ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸುತ್ತಿರುವ ಕೆಲವು ಫೋಟೋಸ್ ಗಳು ವೈರಲ್ ಆಗುತ್ತಿದೆ. ಬಹುಶಃ ಗರ್ಭಿಣಿ ಆಗಿರುವ ಕಾರಣಕ್ಕೆ ದೀಪಿಕಾ ಪಡುಕೋಣೆ ಅವರು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರಾ ಎನ್ನುವ ಮಾತು ಈಗ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ದೀಪಿಕಾ ಅವರಾಗಲಿ ರಣವೀರ್ ಸಿಂಗ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave A Reply

Your email address will not be published.