Darshan: ಜೀವನದಲ್ಲಿ ತೊಂದರೆ ಬಂದರೆ ದರ್ಶನ್ ಅವರು ಹೇಗೆ ಹ್ಯಾಂಡಲ್ ಮಾಡ್ತಾರಂತೆ ಗೊತ್ತಾ? ಇದನ್ನ ಎಲ್ಲರೂ ಫಾಲೋ ಮಾಡಬೇಕು

0 45

Darshan: ನಟ ದರ್ಶನ್ ಅವರು ಒಂದು ರೀತಿ ಎಲ್ಲರಿಗು ಸ್ಫೂರ್ತಿ. ಕರ್ನಾಟಕದಲ್ಲಿ ಇವರಿಗೆ ಇರುವ ಮಾಸ್ ಫ್ಯಾನ್ ಬೇಸ್ ಬೇರೆ ಯಾವ ನಟನಿಗೂ ಇರುತ್ತೋ ಇರಲ್ವೋ ಗೊತ್ತಿಲ್ಲ. ಡಿಬಾಸ್ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದು ಕರೆದು, ಎದೆಯ ಮೇಲೆ ಸದಾ ಅಭಿಮಾನಿಗಳೇ ಇರಬೇಕು ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ನಟ ದರ್ಶನ್ ಅವರಿಂದ ಬದುಕಿನ ಬಹು ಮುಖ್ಯವಾದ ಪಾಠವನ್ನು ಕೂಡ ಕಲಿಯೋಣ.. ಜೀವನದಲ್ಲಿ ಯಾವುದೇ ಸಮಸ್ಯೆ ಬಂದಾಗ ಅದನ್ನು ಹೇಗೆ ಎದುರಿಸಬೇಕು ಎಂದು ತಿಳಿಸುತ್ತೇವೆ ನೋಡಿ…

ಡಿಬಾಸ್ ದರ್ಶನ್ ಅವರು ತಮ್ಮ ಜೀವನದಲ್ಲಿ ಎಂಥದ್ದೇ ಸಮಸ್ಯೆಗಳು ಬಂದರು ಸಹ, ಅದನ್ನು ಧೈರ್ಯವಾಗಿ ಎದುರಿಸಿ, ಅವಮಾನಗಳನ್ನು ಮರೆತು ಮುನ್ನುಗ್ಗಿ ಇಂದು ತಮ್ಮದೇ ಆದ ಕೋಟೆಯನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿ ಅಭಿಮಾನಿಗಳಿಗೆ ಅಗ್ರಸ್ಥಾನವನ್ನು ನೀಡಿದ್ದಾರೆ. ಕೆಲವೊಮ್ಮೆ ವಿವಾದಗಳಿಂದಲೇ ದರ್ಶನ್ ಅವರು ಸುದ್ದಿಯಾದರು ಕೂಡ ಅವರದ್ದು ಎಂಥ ಒಳ್ಳೆಯ ಗುಣ ಎಂದು ನಮಗೆಲ್ಲಾ ಗೊತ್ತೇ ಇದೆ. ದರ್ಶನ್ ಅವರು ಬದುಕನ್ನು ಎದುರಿಸುವ, ಸಮಸ್ಯೆಗಳನ್ನು ಹ್ಯಾಂಡಲ್ ಮಾಡುವ ರೀತಿಯೇ ಬೇರೆ..

ಅದನ್ನು ನಾವು ಅರ್ಥ ಮಾಡಿಕೊಂಡು, ಅವರ ರೀತಿ ತೊಂದರೆಗಳನ್ನು ಹೇಗೆ ಫೇಸ್ ಮಾಡಬೇಕು ಎಂದು ಅರ್ಥ ಮಾಡಿಕೊಂಡರೆ, ಬಹುಶಃ ನಮಗೆ ತೊಂದರೆಗಳು ಕಷ್ಟ ಅನ್ನಿಸುವುದಿಲ್ಲ. ಅಷ್ಟಕ್ಕೂ ದರ್ಶನ್ ಅವರು ತೊಂದರೆಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವ ಬಗ್ಗೆ ಖುದ್ದು ಅವರೇ ಸಂದರ್ಶನ ಒಂದರಲ್ಲಿ ಹೇಳಿದ್ದರು, ಅದು ಹೇಗೆ ಎಂದು ಇಂದು ತಿಳಿಸುತ್ತೇವೆ ನೋಡಿ..

ದರ್ಶನ್ ಅವರು ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಮಾಡುವಾಗ ಅವರಿಗೆ ಒಂದು ಕಾಲ್ ಬಂದು, ಬಂಗಳೂರಿನಲ್ಲಿ ಸಮಸ್ಯೆ ಆಗಿದೆ ಎಂದು ತಿಳಿಸಿದರಂತೆ. ಆ ವೇಳೆ ದರ್ಶನ್ ಅವರು ತಕ್ಷಣವೇ ಬೆಂಗಳೂರಿಗೆ ಬರಬೇಕಿತ್ತು, ಆದರೆ ಶೂಟಿಂಗ್ ನಡೆಯುತ್ತಿದ್ದ ಕಾರಣ ತಕ್ಷಣವೇ ಫ್ಲೈಟ್ ಹತ್ತಿ ಹೊರಡಲು ಸಾಧ್ಯವಾಗಿಲ್ಲ. ಹಾಗಾಗಿ ಶೂಟಿಂಗ್ ಮುಗಿದ ಮೇಲೆ ಹೋಗೋಣ ಎಂದುಕೊಂಡರಂತೆ, ನಂತರ ಶೂಟಿಂಗ್ ಮುಗಿಯೋದು ತಡ ಆದಾಗ ನಾಳೆ ಹೋಗೋಣ ಅಂದುಕೊಂಡರಂತೆ.

ಹಾಗೆ ಕೆಲಸಗಳು ಬಂದು, ದರ್ಶನ್ ಅವರಿಗೆ ಹೊರಡೋಕೆ ಸಾಧ್ಯವಾಗಲೇ ಇಲ್ಲ. ಒಂದು ವಾರ ಬಿಟ್ಟು ಆಮೇಲೆ ಹೋಗೋಣ ಅಂದುಕೊಂಡಿದ್ದರಂತೆ, ಒಂದು ವಾರ ಆದಮೇಲೆ ಹೋಗಿ ನೋಡಿದಾಗ ಆ ತೊಂದರೆ ಒಂದು ತೊಂದರೆಯಾಗೆ ಇರಲಿಲ್ಲ. ಅದೊಂದು ಸಣ್ಣ ವಿಚಾರ ಆಗಿತ್ತು. ಯಾವುದೇ ತೊಂದರೆ ಆಗಲಿ, ಎಂಥದ್ದೇ ತೊಂದರೆ ಆಗಲಿ ದರ್ಶನ್ ಅವರು ಹೇಳೋ ಹಾಗೆ ಸ್ವಲ್ಪ ಸಮಯ ಬಿಟ್ಟುಬಿಟ್ರೆ, ಅದು ಯಾವ ತೊಂದರೆಯೇ ಆಗಿದ್ರು, ಚಿಕ್ಕದಾಗಿ ಹೋಗುತ್ತದೆ. ತೊಂದರೆ ಇದೆ ಅಂತ ತಲೆ ಕೆಡಿಸಿಕೊಂಡು ಇರೋದನ್ನ ಬಿಟ್ಟು ಸಮಯಕ್ಕೆ ಅವುಗಳನ್ನ ಬಿಟ್ಟುಬಿಟ್ಟರೆ, ಅವುಗಳಿಂದ ಸುಲಭವಾಗಿ ಹೊರಬರಬಹುದು.

Leave A Reply

Your email address will not be published.