Astro Tips: ರಸ್ತೆಯಲ್ಲಿ ಸಿಗೋ ಹಣವನ್ನು ತೆಗೆದುಕೊಂಡು ಬಳಸಬಹುದಾ? ಧರ್ಮ ಏನು ಹೇಳುತ್ತೆ?

0 54

Astro Tips: ನಾವು ದಾರಿಯಲ್ಲಿ ಹೋಗುವಾಗ ಅಕಸ್ಮಾತ್ ಆಗಿ ಹಣ ಬಿದ್ದಿರುವುದನ್ನು ನೋಡುತ್ತೇವೆ, ಆ ರೀತಿ ನೋಡಿದಾಗ ಹಣವನ್ನು ನೀವು ತೆಗೆದುಕೊಳ್ಳಬಹುದಾ? ಹಣವನ್ನು ಖರ್ಚು ಮಾಡಬಹುದಾ? ಹೇಗೆ ಉಪಯೋಗಿಸಬೇಕು? ಇಂಥ ಗೊಂದಲಗಳು ಎಲ್ಲರಲ್ಲೂ ಕೂಡ ಇದ್ದೇ ಇರುತ್ತದೆ. ಆದರೆ ಧರ್ಮ ಹೇಳೋದೇನು? ಈ ಬಗ್ಗೆ ಇಂದು ತಿಳಿಯೋಣ..

ನಮ್ಮ ಧರ್ಮದಲ್ಲಿ ಹಣ ಸಂಪತ್ತನ್ನು ತಾಯಿ ಲಕ್ಷ್ಮೀದೇವಿಗೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿ ರಸ್ತೆಯಲ್ಲಿ ಬಿದ್ದಿರುವ ಹಣದ ನೋಟ್ ಅನ್ನು ರಸ್ತೆಯಲ್ಲಿ ನೋಡಿ, ನೋಡದೆಯೇ ಹೋಗಬಾರದು. ಹಣಕ್ಕೆ ಅಂದರೆ ಲಕ್ಷ್ಮೀದೇವಿಗೆ ಅವಮಾನ ಮಾಡಿದ ಹಾಗೆ ಆಗುತ್ತದೆ, ಹಾಗಾಗಿ ಕೆಳಗೆ ಬಿದ್ದಿರುವ ಹಣವನ್ನು. ತೆಗೆದುಕೊಂಡು ಅದನ್ನು ಆ ವ್ಯಕ್ತಿಗೆ ತಲುಪಿಸುವುದಕ್ಕೆ ಆದಷ್ಟು ಟ್ರೈ ಮಾಡಬೇಕು.

ರಸ್ತೆಯಲ್ಲಿ ಹಣ ಸಿಗೋದನ್ನು ಎರಡು ರೀತಿಯಲ್ಲಿ ಹೇಳಲಾಗುತ್ತದೆ, ಒಂದು ಹಣ ಸಿಗೋದು ನೀವು ಮನೆಯಿಂದ ಹೊರಗಡೆ ಹೋಗುವಾಗ, ಅಥವಾ ಹೊರಗಡೆಯಿಂದ ವಾಪಸ್ ಮನೆಗೆ ಬರುವಾಗ. ಈ ಎರಡು ರೀತಿ ವಿಂಗಡಿಸಲಾಗುತ್ತದೆ..ಒಂದು ವೇಳೆ ನೀವು ಮನೆಗಿಂದ ಹೊರಗಡೆ ಬರುವಾಗ ಹಣ ಸಿಕ್ಕರೆ, ಅದನ್ನು ತೆಗೆದುಕೊಂಡು ನಿಮ್ಮ ಆಫೀಸ್ ನಲ್ಲಿ ಅಥವಾ ದೇವಸ್ಥಾನದಲ್ಲಿ ಬಿಟ್ಟುಬಿಡಿ.

ಆದರೆ ಹೀಗೆ ಸಿಗುವ ಹಣವನ್ನು ಯಾವುದೇ ಕಾರಣಕ್ಕೂ ಖರ್ಚು ಮಾಡಬಹುದು. ನೀವು ಹೊರಗಡೆ ಇಂದ ಮನೆಗೆ ಬರುವಾಗ ಹಣ ಸಿಕ್ಕರೆ, ಆ ಹಣವನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಬಹುದು. ಅಂದರೆ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದೇ ಹೊರತು, ಆ ಹಣವನ್ನು ನಿಮ್ಮ ಸ್ವಂತಕ್ಕಾಗಿ ಖರ್ಚು ಮಾಡಬಾರದು. ಈ ರೀತಿ ಮಾಡಿದರೆ ನಿಮ್ಮ ಹತ್ತಿರ ಇರುವ ಹಣ ಅನಿರೀಕ್ಷಿತವಾಗಿ ಖರ್ಚಾಗಿರುವ ಬಿಡುತ್ತದೆ.

Leave A Reply

Your email address will not be published.