Fitness Tips: ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

0 64

Fitness Tips: ಈಗಿನ ದಿನಗಳಲ್ಲಿ ಬಹುತೇಕ ಎಲ್ಲರೂ ಕೂಡ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡುತ್ತಾರೆ. ನಾವು ಫಿಟ್ ಆಗಿರಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ. ಅದೇ ರೀತಿ ವ್ಯಾಯಾಮ ಮಾಡುವಾಗ ಹುಷಾರಾಗಿ ಇರಬೇಕು, ಕೆಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಜಿಮ್ ನಲ್ಲಿ ಅಥವಾ ಮನೆಯಲ್ಲಿ ವರ್ಕ್ ಔಟ್ ಮಾಡುವಾಗ ಯಾವುದೇ ಕಾರಣಕ್ಕೂ ಈ ಕೆಲವು ತಪ್ಪುಗಳನ್ನು ಮಾಡ್ಬಆರದು. ಗಮನದಲ್ಲಿ ಇಟ್ಟುಕೊಳ್ಳಿ..

ನೀರು ಕುಡಿಯಬೇಕು: ವ್ಯಾಯಾಮ ಮಾಡುವಾಗ ನೀರು ಕುಡಿಯುವುದು ಬಹಳ ಮುಖ್ಯ. ಹೃದಯದ ಆರೋಗ್ಯ, ಸ್ನಾಯುಗಳು ಇದ್ಯಾವುದಕ್ಕೂ ತೊಂದರೆ ಆಗಬಾರದು ಎಂದರೆ ನೀರು ಕುಡಿಯಬೇಕು. ವ್ಯಾಯಾಮ ಮಾಡುವಾಗ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ, ಹಾಗಾಗಿ ನೀರು ಕುಡಿಯುವುದು ಮುಖ್ಯ.

ವಾರ್ಮ್ ಅಪ್: ಯಾವಾಗಲು ವರ್ಕ್ ಔಟ್ ಶುರು ಮಾಡುವುದಕ್ಕಿಂತ ಮೊದಲು ವಾರ್ಮ್ ಅಪ್ ಮಾಡಬೇಕು. ಇದರಿಂದ ನಿಮ್ಮ ದೇಹದ ಮಸಲ್ಸ್ ಗಳು ಫ್ಲೆಕ್ಸಿಬಲ್ ಆಗುತ್ತದೆ. ಹಾಗಾಗಿ ವಾರ್ಮ್ ಅಪ್ ಮಾಡುವುದನ್ನು ಮಾತ್ರ ಮರೆಯಬೇಡಿ.
ಸ್ಥಿರತೆ ಇರಬೇಕು: ಒಂದು ವಾರದ ಅವಧಿಯಲ್ಲಿ ಮಾಡಬೇಕಾದ ವರ್ಕ್ ಔಟ್ ಅನ್ನು ಎರಡೇ ದಿನಗಳಲ್ಲಿ ಮಾಡಬೇಡಿ. ವರ್ಕೌಟ್ ಮಾಡುವಾಗ ಸ್ಥಿರತೆ ಬಹಳ ಮುಖ್ಯ. ಇದಂಜು ಮಾತೆಯ ಬಿಡಬೇಡಿ.

ಹೆಚ್ಚು ವೇಟ್ಸ್ ಎತ್ತಬೇಡಿ: ವರ್ಕೌಟ್ ಶುರು ಮಾಡಿದಾಗಲೇ ಜಾಸ್ತಿ ಭಾರ ಎತ್ತಬಾರದು. ಇದರಿಂದ ನಿಮ್ಮ ಮೂಳೆಗಳಿಗೆ ಸಮಸ್ಯೆ ಉಂಟಾಗಬಹುದು. ಹಾಗಾಗಿ ಶುರುವಿನಲ್ಲೇ ಈ ರೀತಿ ಮಾಡಬೇಡಿ.
ಭಂಗಿ ಬಗ್ಗೆ ಗಮನ ಕೊಡಿ: ವರ್ಕೌಟ್ ಮಾಡುವಾಗ ಯಾವ ಭಂಗಿಯಲ್ಲಿ ಮಾಡುತ್ತೀರಿ ಎನ್ನುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ಸರಿಯಾದ ಭಂಗಿಯಲ್ಲಿ ವರ್ಕೌಟ್ ಮಾಡಿ.

Leave A Reply

Your email address will not be published.