ಗಾಢವಾದ ನಿದ್ರೆ ,ಕಣ್ತುಂಬ ನಿದ್ದೆ ಬರಲು 3 ಟಿಪ್ಸ್ ಮಲಗುವ ಮುನ್ನ

0 611

ಒಳ್ಳೆಯ ನಿದ್ರೆ ಅಗತ್ಯವಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಒಳ್ಳೆಯ ನಿದ್ದೆ ಪಡೆಯುವುದು ಹೇಗೆ? ನಿತ್ಯಜೀವನದ ಚಿಂತೆಗಳಿಂದ ಸುಖವಾಗಿ ನಿದ್ದೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ಸುಖವಾದ ನಿದ್ದೆ ತುಂಬಾ ತಡವಾಗಿ ಆಗಮಿಸಿದರೆ ಇಂದಿನ ಲೇಖನ ನಿಮಗೆ ಅತ್ಯಂತ ಮಹತ್ವದ್ದಾಗಿದೆ. ಇಂದು ನಾವು ಒಂದು ಅದ್ಭುತ ಪೇಯವನ್ನು ಪ್ರಸ್ತುತಪಡಿಸುತ್ತಿದ್ದು ಇದರ ಸೇವನೆಯ ಕೊಂಚ ಹೊತ್ತಿಗೇ ಗಾಢ ನಿದ್ದೆ ಆವರಿಸಿ ಮರುದಿನ ಲವಲವಿಕೆ ಮೂಡಿಸುತ್ತದೆ. ತುಂಬಾ ಹೊತ್ತು ನಿದ್ದೆ ಮಾಡುವವರಿಗಾಗಿ ಈ ಲೇಖನ

ಇದನ್ನು ತಯಾರಿಸುವುದು ತುಂಬಾ ಸುಲಭವಾಗಿದ್ದು ಕೇವಲ ಹಾಲು, ವನಿಲ್ಲಾದ ಸಾರ ಮತ್ತು ಜೇನು ಇಷ್ಟೇ ಸಾಕು. ಇದರ ಹೆಗ್ಗಳಿಕೆ ಎಂದರೆ ಇವೆಲ್ಲವೂ ಸುಲಭವಾಗಿ ಲಭ್ಯವಾಗುವ ಸಾಮಾಗ್ರಿಗಳಾಗಿದ್ದು ಇದಕ್ಕಾಗಿ ಹೆಣಗಾಡಬೇಕಾಗಿಲ್ಲ. ಬನ್ನಿ, ಈ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ…

ಹಾಲು

ಇದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಿದ್ದು ಇವೆರಡೂ ಮೆದುಳಿನಲ್ಲಿ ಸೆರಟೋನಿನ್ ಮತ್ತು ಮೆಲಟೋನಿನ್ ಎಂಬ ರಸದೂತಗಳ ಉತ್ಪತ್ತಿಗೆ ನೆರವಾಗುತ್ತವೆ. ಈ ರಸದೂತಗಳು ಮೆದುಳಿನಲ್ಲಿ ಸಂವೇದನೆಯುಂಟುಮಾಡಿ ನಿದ್ದೆ ಬರಿಸಲು ನೆರವಾಗುತ್ತವೆ.

ಜೇನುತುಪ್ಪ

ಇದೊಂದು ಅದ್ಭುತವಾದ ನೈಸರ್ಗಿಕ ಪೋಷಕಾಂಶವಾಗಿದ್ದು ಮೆದುಳಿನಲ್ಲಿ ಮೆಲಟೋನಿನ್ ರಸದೂತದ ಉತ್ಪತ್ತಿಗೆ ನೆರವಾಗುತ್ತದೆ. ಇದೂ ನುಖನಿದ್ದೆ ತಕ್ಷಣ ಆವರಿಸಲು ನೆರವಾಗುತ್ತದೆ.

ವೆನಿಲ್ಲಾ ಸಾರ

ವಿಶ್ವದಾದ್ಯಂತ ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ವನಿಲ್ಲಾ ಸಾರದ ಪರಿಮಳವನ್ನು ಆಸ್ವಾದಿಸುವ ಮೂಲಕ ಮೆದುಳಿಗೆ ಹೆಚ್ಚಿನ ಆರಾಮ ದೊರಕುತ್ತದೆ ಹಾಗೂ ಸುಖನಿದ್ದೆಗೆ ಜಾರಲು ನೆರವಾಗುತ್ತದೆ.

ತಯಾರಿಸುವ ವಿಧಾನ

1. ಒಂದು ಕಪ್ ಹಾಲು ಬಿಸಿಮಾಡಿ, ಕುದಿಯಲು ಪ್ರಾರಂಭಿಸಿದ ತಕ್ಷಣ ಉರಿ ನಂದಿಸಿ

ತಯಾರಿಸುವ ವಿಧಾನ

2. ಬಿಸಿಹಾಲನ್ನು ಒಂದು ಲೋಟಕ್ಕೆ ಬಗ್ಗಿಸಿ ಇದಕ್ಕೆ ಒಂದು ದೊಡ್ಡಚಮಚ ಜೇನು ಮತ್ತು ಕೊಂಚವೇ ವನಿಲ್ಲಾ ಸಾರವನ್ನು ಸೇರಿಸಿ ಚೆನ್ನಾಗಿ ಕಲಕಿ.

ತಯಾರಿಸುವ ವಿಧಾನ

3. ಈ ಪೇಯವನ್ನು ರಾತ್ರಿ ಮಲಗುವ ಮುನ್ನ ಕುಡಿದು ಮಲಗಿ. ಒಂದೇ ನಿಮಿಷದಲ್ಲಿ ನೀವು ಗಾಢನಿದ್ದೆಗೆ ಜಾರಿರುತ್ತೀರಿ.

Read More :ನಿಮ್ಮ ಆಸೆ ಬೇಗ ಈಡೇರಲು ಈ ರೀತಿ ನಂದಿಯನ್ನ ಬೇಡಿಕೊಳ್ಳಿ!

Leave A Reply

Your email address will not be published.