ನಿಮ್ಮ ಆಸೆ ಬೇಗ ಈಡೇರಲು ಈ ರೀತಿ ನಂದಿಯನ್ನ ಬೇಡಿಕೊಳ್ಳಿ!

0 343

ನಂದಿ ಮುಖಾಂತರ ಈಶ್ವರನನ್ನು ನೋಡಿದರೆ ಎಷ್ಟು ಶ್ರೇಷ್ಠ ನಂದಿ ಹತ್ತಿರ ನಾವು ಯಾವ ರೀತಿ ಬೇಡಿಕೊಂಡರೆ ಇಷ್ಟರ್ಥ ಸಿದ್ದಿಯಾಗುತ್ತದೆ ಎಂದು ಹಿರಿಯರು ತಿಳಿಸಿದ್ದಾರೆ.ನೀವು ಯಾವುದೇ ಶಿವನ ದೇವಾಲಯಕ್ಕೆ ಹೋದರು ನಂದಿಯನ್ನು ನೋಡಬಹುದು. ಈಶ್ವರನ ಮುಂದೆ ನಂದಿಯನ್ನು ಪ್ರತಿಷ್ಟಾಪನೆ ಮಾಡಿರುತ್ತಾರೆ. ಮೊದಲನೇ ಬಾರಿಗೆ ದೇವಸ್ಥಾನಕ್ಕೆ ಹೋದಾಗ ಮೊದಲು ನಾವು ನಂದಿಗೆ ಕೈ ಮುಗಿಯಬೇಕಾಗುತ್ತದೆ.

ನಂದಿಯ ಎರಡು ಕೊಂಬುಗಳ ಹೆಬ್ಬೆರಳು ಮತ್ತು ತೋರು ಬೆರಳಿನ ಮುಖಾಂತರ ಹಿಡಿದುಕೊಂಡು ಶಿವನ ಮುಖವನ್ನು ನೋಡಬೇಕು. ತುಂಬಾ ವಿಶೇಷವಾದ ಶಕ್ತಿ ಇದೆ ಎಂದು ಹೇಳುತ್ತಾರೆ. ಈ ರೀತಿ ದರ್ಶನ ಮಾಡಿದರೆ ವಿಶೇಷವಾದ ಫಲಗಳು ನಿಮಗೆ ಸಿಗುತ್ತವೆ. ಹಾಗಾಗಿ ಯಾವುದೇ ಶಿವನ ದೇವಸ್ಥಾನಕ್ಕೆ ಹೋದಾಗ ಮೊದಲು ನಂದಿಗೆ ನಮಸ್ಕಾರ ಮಾಡಿ ನಂದಿ ಮುಖಾಂತರ ಶಿವನ ದರ್ಶನ ಮಾಡಬೇಕು.

ಇನ್ನು ನಂದಿ ಕಿವಿಯಲ್ಲಿ ಎಂತದ್ದೇ ಕೋರಿಕೆಯನ್ನು ಹೇಳಿಕೊಂಡರು ನಂದಿ ಬೇಗ ಹೋಗೀ ಈಶ್ವರನಿಗೆ ತಲುಪಿಸುತ್ತಾನೆ ಅಂತೆ. ನಿಮ್ಮ ಭಕ್ತರಿಕೆ ಈ ರೀತಿ ಅವಶ್ಯಕತೆ ಇದೆ. ನಂದಿ ಕಿವಿಯಲ್ಲಿ ಹೇಳುವಾಗ ಒಂದು ಕಿವಿ ಮುಚ್ಚಿಕೊಂಡು ಇನ್ನೊಂದು ಕಿವಿಯಿಂದ ಹೇಳಬೇಕಂತೆ. ಈ ರೀತಿ ಮಾಡಿದರೆ ಬೇಗನೆ ಇಷ್ಟರ್ಥಗಳು ಸಿದ್ದಿಯಾಗುತ್ತವೆ.

ಮನಸ್ಸಿಗೆ ನೆಮ್ಮದಿ ಸಿಗಬೇಕು ಎಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತೇವೆ.ಈ ಉದ್ಭವ ಲಿಂಗ ಇರುವ ದೇವಸ್ಥಾನಗಳಲ್ಲಿ ಪೂರ್ಣ ಪ್ರದಕ್ಷಿಣೆ ಹಾಕಬೇಕಂತೆ. ಏಕೆಂದರೆ ಆ ಒಂದು ಧನತ್ಮಕ ಶಕ್ತಿಯನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇರುವುದಿಲ್ಲ.ಹಾಗಾಗಿ ಪೂರ್ಣ ಪ್ರದಕ್ಷಿಣೆ ಹಾಕಿ ಬರಬೇಕು.

Leave A Reply

Your email address will not be published.