Astrology: ಭಕ್ತಿಯಿಂದ ರುದ್ರಾಕ್ಷಿ ಧರಿಸುತ್ತೀರಾ? ಹಾಗಿದ್ರೆ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

0 28

Astrology: ಸಾಕಷ್ಟು ಜನ ರುದ್ರಾಕ್ಷಿ ಧರಿಸುವುದನ್ನು ನೋಡಿರುತ್ತೇವೆ. ಭಕ್ತಿಯ ಜೊತೆಗೆ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗಲಿ ಎಂದು ರುದ್ರಾಕ್ಷಿ ಧರಿಸುತ್ತಾರೆ. ರುದ್ರಾಕ್ಷಿಯನ್ನು ಭಗವಾನ್ ಶಿವನ ಕಣ್ಣೀರಿನಿಂದ ತಯಾರಾಗುತ್ತದೆ ಎಂದು ಹೇಳುತ್ತಾರೆ. ದೊಡ್ಡವರು ರುದ್ರಾಕ್ಷಿ ಧರಿಸುವುದಕ್ಕೆ ಸಲಹೆ ಕೂಡ ನೀಡುತ್ತಾರೆ. ಒಂದು ವೇಳೆ ನೀವು ರುದ್ರಾಕ್ಷಿ ಧರಿಸಬೇಕು ಅಂದುಕೊಂಡಿದ್ದರೆ ಅಥವಾ ಈಗಾಗಲೇ ರುದ್ರಾಕ್ಷಿ ಧರಿಸಿದ್ದರೆ, ಈ ಕೆಲವು ತಪ್ಪುಗಳನ್ನ ಯಾವುದೇ ಕಾರಣಕ್ಕೂ ಮಾಡಬೇಡಿ..

ರುದ್ರಾಕ್ಷಿ ಧರಿಸುವುದರಿಂದ ಆ ವ್ಯಕ್ತಿಯ ಬದುಕಿನಿಂದ ನೆಗಟಿವಿಟಿ ದೂರವಾಗುತ್ತದೆ. ಮನುಷ್ಯನ ಬದುಕಿಗೆ ರುದ್ರಾಕ್ಷಿ ಶುಭ ತರುತ್ತದೆ ಎಂದು ಬಲ್ಲವರು ಹೇಳುತ್ತಾರೆ. ರುದ್ರಾಕ್ಷಿ ಧರಿಸಿದರೆ ನಿಮ್ಮ ಸುತ್ತ ಮುತ್ತ ಇರುವ ಪ್ರದೇಶದಲ್ಲಿ ಕೂಡ ನೆಗಟಿವಿಟಿ ಕಡಿಮೆ ಆಗುತ್ತದೆ. ಆದರೆ ಕೆಲವು ಜಾಗಕ್ಕೆ ರುದ್ರಾಕ್ಷಿ ಧರಿಸಿ ಹೋಗಬಾರದು ಎಂದು ಹೇಳುತ್ತಾರೆ. ಆ ರೀತಿ ಹೇಳೋದು ಯಾಕೆ? ಆ ಸ್ಥಳಗಳು ಯಾವುವು? ಇಂದು ತಿಳಿಯೋಣ..

ಸ್ಮಶಾನ: ಯಾವುದಾದರೂ ಒಬ್ಬ ವ್ಯಕ್ತಿ ತೀರಿಹೋದಾಗ, ಅವರನ್ನು ನೋಡೋಕೆ ಹೋಗುವಾಗ ಮತ್ತು ಸ್ಮಶಾನಕ್ಕೆ ಹೋಗುವಾಗ ಯಾವುದೇ ಕಾರಣಕ್ಕೂ ರುದ್ರಾಕ್ಷಿ ಧರಿಸಿ ಹೋಗಬಾರದು. ಇದನ್ನು ನೆನಪಿನಲ್ಲಿ ಇಡಿ. ಈ ರೀತಿ ಮಾಡಿದರೆ ಶಿವನಿಗೆ ಕೋಪ ಬಂದು, ಅದರ ಪ್ರಭಾವ ನಿಮ್ಮ ನೆಲೆ ಬೀರುತ್ತದೆ.

ನಾನ್ ವೆಜ್ ಮತ್ತು ಮದ್ಯಪಾನ: ಯಾವ ಸ್ಥಳದಲ್ಲಿ ಮಾಂಸದ ಆಹಾರ ಇರುತ್ತದೆ, ಅಥವಾ ಅದರ ಅಡುಗೆ ಮಾಡುತ್ತಾರೆ ಅಂಥ ಸ್ಥಳಗಳಲ್ಲಿ .. ಜೊತೆಗೆ ಮದ್ಯಪಾನ ಸೇವನೆ ಮಾಡುವ ಕಡೆಗೆ ರುದ್ರಾಕ್ಷಿ ಧರಿಸಿ ಹೋಗಬಾರದು. ಇಂಥ ಜಾಗಕ್ಕೆ ಹೋಗುವಾಗ ರುದ್ರಾಕ್ಷಿಯನ್ನು ತೆಗೆದಿಟ್ಟು ಹೋಗಿ.

ಮಗು ಹುಟ್ಟಿದ ಸ್ಥಳ: ಒಂದು ಮಗು ಹುಟ್ಟಿರುವ ಜಾಗಕ್ಕೆ ರುದ್ರಾಕ್ಷಿ ಧರಿಸಿ ಹೋಗುವ ಹಾಗಿಲ್ಲ. ಒಂದು ವೇಳೆ ಹೋದರೆ ಬದುಕಿನಲ್ಲಿ ಕಷ್ಟಗಳ ಸಂಕೋಲೇ ಎದುರಿಸುವ ಪರಿಸ್ಥಿತಿ ಬರುತ್ತದೆ.
ಈ ಕಾರಣದಿಂದ ಮಗು ಹುಟ್ಟಿದ ಜಾಗಕ್ಕೆ ಯಾವುದೇ ಕಾರಣಕ್ಕೂ ರುದ್ರಾಕ್ಷಿ ಧರಿಸಿ ಹೋಗಬೇಡಿ.

Leave A Reply

Your email address will not be published.