Radhika Pandit: ವಿಶೇಷವಾಗಿ ಪ್ರೇಮಿಗಳ ದಿನ ಆಚರಣೆ ಮಾಡಿದ ರಾಧಿಕಾ ಪಂಡಿತ್! ಅಭಿಮಾನಿಗಳು ಫುಲ್ ಖುಷ್!

0 19

Radhika Pandit: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಕೆಜಿಎಫ್ ಸಿನಿಮಾದಿಂದ ಯಶ್ ಅವರ ಸಿನಿಕೆರಿಯರ್ ಸಂಪೂರ್ಣ ಬದಲಾಯಿತು ಎಂದರೆ ತಪ್ಪಾಗುವುದಿಲ್ಲ. ಕನ್ನಡ ಚಿತ್ರರಂಗಕ್ಕೆ ಸೀಮಿತರಾಗಿದ್ದ ಯಶ್, ಇಡೀ ಭಾರತ ಚಿತ್ರರಂಗವೇ ಕೊಂಡಾಡುವಂತೆ ಬೆಳೆದಿದ್ದಾರೆ, ಆದರೆ ಒಂದೇ ದಿನದಲ್ಲಿ ಕಲ್ಲು ಶಿಲೆಯಾಗುವುದಿಲ್ಲ ಎಂಬಂತೆ ಯಶ್ ಒಂದೇ ದಿನದಲ್ಲಿ ಸ್ಟಾರ್ ಆದವರಲ್ಲ.

ಯಶ್ ನಡೆದು ಬಂದ ಹಾದಿಯಲ್ಲಿ, ಅವಮಾನ ಕಷ್ಟ ಹಸಿವು ತಿರಸ್ಕಾರ ಎಲ್ಲವೂ ಇತ್ತು. ಕಷ್ಟದಿಂದ ಕೂಡಿದ ಪ್ರತಿಯೊಂದು ಹಂತವನ್ನು ದಾಟಿಯೇ ಯಶ್ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಆ ಎಲ್ಲಾ ಕಷ್ಟದ ಸಮಯದಲ್ಲಿ ಯಶ್ ಅವರ ಜೊತೆಗೆ ಇದ್ದಿದ್ದು ಅವರ ಪತ್ನಿ ರಾಧಿಕಾ ಪಂಡಿತ್. ಯಶ್ ಅವರು ಕಷ್ಟಪಡುತ್ತಿದ್ದ ದಿನಗಳಿಂದಲೂ ಇವರಿಬ್ಬರು ಸ್ನೇಹಿತರಾಗಿ ಜೊತೆಗೆ ಇದ್ದಾರೆ. ಬಳಿಕ ಇಬ್ಬರು ಪ್ರೀತಿಸಲು ಶುರು ಮಾಡಿ, ಮದುವೆಯಾದರು.

ಇವರಿಬ್ಬರು ಜೀವನ ನಡೆಸುತ್ತಿರುವ ರೀತಿ ಎಲ್ಲಾ ಪ್ರೇಮಿಗಳಿಗೆ ಸ್ಫೂರ್ತಿ ಎಂದರೆ ತಪ್ಪಲ್ಲ. ಈ ಜೋಡಿಯನ್ನು ಕಂಡರೆ ಎಲ್ಲರಿಗೂ ಅಷ್ಟು ಇಷ್ಟ. ಇಂದು ಬದುಕಿನಲ್ಲಿ ಸಕ್ಸಸ್ ಕಂಡು ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ..

ನಿನ್ನೆಯಷ್ಟೇ ಪ್ರೇಮಿಗಳ ದಿನವಾಗಿದ್ದು ರಾಧಿಕಾ ಪಂಡಿತ್ ಅವರು ಯಶ್ ಅವರ್ಕ್ ಜೊತೆಗಿರುವ ಸ್ಪೆಷಲ್ ಫೋಟೋ ಶೇರ್ ಮಾಡಿ, ಪ್ರೇಮಿಗಳ ದಿನಕ್ಕೆ ಶುಭಾಶಯ ತಿಳಿಸಿದ್ದಾರೆ. ಹೊರದೇಶದಲ್ಲಿ ಇಬ್ಬರು ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋ ಇದಾಗಿದ್ದು, ರಾಧಿಕಾ ಪಂಡಿತ್ ಅವರು ಇಂಗ್ಲಿಷ್ ನಲ್ಲಿ ಸುಂದರವಾದ ಕ್ಯಾಪ್ಶನ್ ಸಹ ಬರೆದಿದ್ದಾರೆ. ಇದೀಗ ಈ ಜೋಡಿಯ ವ್ಯಾಲೆಂಟೈನ್ಸ್ ಡೇ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave A Reply

Your email address will not be published.