Vastu Tips: ಪೊರಕೆ ಬಳಸಿ ಈ ಕೆಲಸ ಮಾಡಿ ಸಾಕು, ನೀವೇ ಹಣವಂತರು!

0 18

Vastu Tips:: ಯಾರಿಗೆ ತಾನೇ ಶ್ರೀಮಂತರಾಗಬೇಕು ಎಂದು ಆಸೆ ಇರೋದಿಲ್ಲ? ಎಲ್ಲರಿಗೂ ಕೂಡ ಚೆನ್ನಾಗಿ ಹಣ ಸಂಪಾದನೆ ಮಾಡಿ, ಶ್ರೀಮಂತರಾಗಬೇಕು ಎಂದು ಆಸೆ ಇರುತ್ತದೆ. ಆದರೆ ನಾನಾ ಕಾರಣಗಳಿಂದ ಅದು ಸಾಧ್ಯ ಆಗುವುದಿಲ್ಲ. ಆದರೆ ಹಣದ ಸಮಸ್ಯೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ.

ನಿಮ್ಮ ಹಣದ ಸಮಸ್ಯೆಯನ್ನು ಸರಿಪಡಿಸಿ ನೀವು ಶ್ರೀಮಂತರಾಗಲು ಒಂದೇ ಒಂದು ವಸ್ತು ಇದ್ದರೆ ಸಾಕು. ಆ ಒಂದು ವಸ್ತು ನಿಮ್ಮ ಮನೆಯಲ್ಲೇ ಯಾವಾಗಲೂ ಇರುತ್ತದೆ. ಆ ಒಂದು ವಸ್ತು ಬಳಸಿ ನೀವು ಶ್ರೀಮಂತರಾಗಬಹುದು. ಆ ಒಂದು ವಸ್ತು ಏನು? ಆ ವಸ್ತುವಿನಿಂದ ನಿಮ್ಮ ಶ್ರೀಮಂತಿಕೆ ಹೇಗೆ ಹೆಚ್ಚಾಗುತ್ತದೆ ಎಂದು ಸಂಪೂರ್ಣವಾಗಿ ತಿಳಿಯೋಣ…

ನಿಮ್ಮ ಸಮಸ್ಯೆಗಳನ್ನು ನಾಶಮಾಡಿ, ನೀವು ಶ್ರೀಮಂತರಾಗುವ ಹಾಗೆ ಮಾಡುವುದು ನಿಮ್ಮ ಮನೆಯಲ್ಲಿ ಯಾವಾಗಲೂ ಇರುವ ಪೊರಕೆ. ಹೌದು, ನಮ್ಮ ಧರ್ಮದಲ್ಲಿ ಪೊರಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಕರೆಯುತ್ತಾರೆ. ವಾಸ್ತು ಶಾಸ್ತ್ರದ ಅನುಸಾರ ಪೊರಕೆ ವಿಚಾರದಲ್ಲಿ ನಾವು ಕೆಲವು ನಿಯಮಗಳನ್ನು ಪಾಲಿಸುತ್ತೇವೆ. ಪಾಲಿಸದೇ ಹೋದರೆ,.ವಾಸ್ತು ದೋಷ ಬರುತ್ತದೆ, ಒಂದು ವೇಳೆ ಹೀಗಾದರೆ ಮನೆಯ ನೆಮ್ಮದಿ ಹಾಳಾಗುತ್ತದೆ.

ಹಾಗಾಗಿ ಪೊರಕೆ ವಿಚಾರಕ್ಕೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುವು ಎಂದು ತಿಳಿಯೋಣ.. ಮೊದಲನೆಯದು ಯಾವುದೇ ಕಾರಣಕ್ಕೂ ಶನಿವಾರದ ದಿನ ಹೊಸದಾಗಿ ಪೊರಕೆಯನ್ನು ಮನೆಗೆ ತರಬೇಡಿ. ಇದನ್ನು ನೆನಪಿನಲ್ಲಿ ಇಡಿ. ಒಂದು ವೇಳೆ ಜಾತಕದಲ್ಲಿ ಶನಿದೇವರ ಸಾಡೇಸಾತಿ, ಧೈಯಾ, ಮಹಾಶ ತೊಂದರೆ ಇದ್ದರೆ ಶನಿವಾರ ಹೊಸ ಪೊರಕೆ ತಂದರೆ ಪರಿಣಾಮ ಜಾಸ್ತಿಯಾಜಿತ್ತದೆ…

ಪೊರಕೆಯನ್ನು ತುಳಿಯಬಾರದು. ಅದಕ್ಕೆ ಗೌರವ ಕೊಡಬೇಕು. ನೀವು ಪೊರಕೆಗೆ ಗೌರವ ಕೊಟ್ಟರೆ, ನಿಮಗೆ ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ. ಇದರಿಂದ ನಿಮ್ಮ ಬದುಕು ಸುಗಮವಾಗುತ್ತದೆ, ಸಮೃದ್ಧಿ ಹೆಚ್ಚಾಗುತ್ತದೆ ನೀವು ಶ್ರೀಮಂತರಾಗುತ್ತೀರಿ.

Leave A Reply

Your email address will not be published.