Lifestyle: ಆಫೀಸ್ ನಲ್ಲಿ ಇರುವಾಗ ಊಟ ಮಾಡೋಕೆ ಟೈಮ್ ಇಲ್ಲ ಅಂದ್ರೆ, ಈ ಆಹಾರ ಪದಾರ್ಥವನ್ನ ಸೇವಿಸಿ

0 30

Lifestyle: ಕೆಲಸಕ್ಕೆ ಹೋಗುವವರಿಗೆ ಬಹಳಷ್ಟು ವರ್ಕ್ ಪ್ರೆಶರ್ ಗಳು, ಟೆನ್ಷನ್ ಗಳು ಇರುತ್ತದೆ. ಅವರಿಗೆ ಕೆಲಸ ಮಾಡುವ ವೇಳೆ ಬ್ರೇಕ್ ತೆಗೆದುಕೊಂಡು ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡಲು ಆಗುವುದಿಲ್ಲ. ಆದರೆ ಕೆಲಸದ ಒತ್ತಡದಲ್ಲಿ ನೀವು ಈ ರೀತಿ ಆರೋಗ್ಯದ ಬಗ್ಗೆ ಊಟದ ಬಗ್ಗೆ ಕಾಳಜಿ ವಹಿಸದೇ ಇದ್ದರೆ, ನೀವು ಅನಾರೋಗ್ಯಕ್ಕೆ ತುತ್ತಾಗಬಹುದು.

ಸಮಯಕ್ಕೆ ಸರಿಯಾಗು ಊಟ ತಿಂಡಿ ಮಾಡದೆ ಇರುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತೀರಿ. ಇದರಿಂದ ಜೀರ್ಣಕ್ರಿಯೆಗೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಕೆಲಸದ ಒತ್ತಡ ಎಷ್ಟೇ ಇದ್ದರು ಕೂಡ, ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಒಂದು ವೇಳೆ ಆಫೀಸ್ ನಲ್ಲಿ ಊಟ ಮಾಡುವಷ್ಟು ಸಮಯ ಇಲ್ಲದೇ ಹೋದರೆ, ಈ ಕೆಲವು ಆಹಾರ ಪದಾರ್ಥಗಳನ್ನು ತಿನ್ನಬಹುದು. ಆ ಪದಾರ್ಥಗಳು ಯಾವುವು ಎಂದು ತಿಳಿಯೋಣ..

*ಮಜ್ಜಿಗೆ :- ಆಫೀಸ್ ನಲ್ಲಿ ಬೆಳಗ್ಗೆ 10 ರಿಂದ 11 ಗಂಟೆ ಒಳಗೆ ಮಜ್ಜಿಗೆ ಕುಡಿದರೆ ಒಳ್ಳೆಯದು. ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಪ್ರೊಟೀನ್ ಹಾಗೂ ಪ್ರೊ ಬಯೋಟಿಕ್ಸ್ ಎರಡು ಸಮೃದ್ಧವಾಗಿದೆ.
*ಪುದೀನಾ ಟೀ :- ಜೀರ್ಣಕ್ರಿಯೆ ಸಮಸ್ಯೆ ಇದ್ದರೆ, ಅದನ್ನು ಸರಿಪಡಿಸಿಕೊಳ್ಳಲು ಪುದೀನಾ ಟೀ ಕುಡಿಯುವುದು ಒಳ್ಳೆಯ ಆಯ್ಕೆ ಆಗಿರುತ್ತದೆ..ಇದರಿಂದ ಆಮ್ಲೀಯತೆ ಸಮಸ್ಯೆ ಕೂಡ ಕಡಿಮೆ ಆಗುತ್ತದೆ.

*ಬಾಳೆಹಣ್ಣು :- ಇದರಿಂದ ಹಲವು ಪ್ರಯೋಜನಗಳಿವೆ. ಬಾಳೆ ಹಣ್ಣು ತಿಂದರೆ ನಿಮಗೆ ನಿಶಕ್ತಿ ಸಮಸ್ಯೆ ಆಗುವುದಿಲ್ಲ. ಮಾನಸಿಕವಾಗಿ ಕೂಡ ನೆಮ್ಮದಿ ಇರುತ್ತದೆ.
*ಹುರಿದ ಕಡಲೆ :- ಇದರಲ್ಲಿ ನಿಮಗೆ ಫೈಬರ್ ಮತ್ತು ಪ್ರೊಟೀನ್ ಮತ್ತು ಫೈಬರ್ ಎರಡು ಕೂಡ ಹೇರಳವಾಗಿದೆ. ಹಾಗಾಗಿ ಹುರಿದ ಕಡಲೆ ಸೇವಿಸುವುದು ಒಳ್ಳೆಯದು. ಆಫೀಸ್ ನಲ್ಲಿ ಸೇವಿಸಿದರೆ ನಿಮಗೆ ಸುಸ್ತು ಆಗುವುದಿಲ್ಲ..

Leave A Reply

Your email address will not be published.