Vastu Tips: ನಿಮ್ಮ ಮನೆಗೆ ಈ ಪಕ್ಷಿಗಳು ಬಂದ್ರೆ, ಲಕ್ಷ್ಮೀದೇವಿಯ ಆಗಮನದ ಸೂಚನೆ

0 26

Vastu Tips: ವಾಸ್ತು ಶಾಸ್ತ್ರದಲ್ಲಿ ಅನೇಕ ವಿಚಾರಗಳನ್ನು ತಿಳಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮೀದೇವಿಯ ಆಗಮನ ನಿಮ್ಮ ಮನೆಗೆ ಆಗುತ್ತದೆ ಎಂದರೆ, ಲಕ್ಷ್ಮೀದೇವಿ ನಿಮಗೆ ಕೆಲವು ಸೂಚನೆಗಳನ್ನಿ ನೀಡುತ್ತಾಳೆ. ಅವುಗಳಲ್ಲಿ ಒಂದು ಪ್ರಕ್ಷಿಗಳು ಮನೆಗೆ ಬರುವುದು. ಹೌದು, ಈ ಕೆಲವು ಪಕ್ಷಿಗಳು ನಿಮ್ಮ ಮನೆಗೆ ಬಂದರೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಆಗಮಿಸುವ ಮುನ್ಸೂಚನೆ ಅದು ಎಂದು ಅರ್ಥ.

ಆ ಪಕ್ಷಿಗಳು ಮನೆಗೆ ಬಂದರೆ, ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲವು ಸಂಪೂರ್ಣವಾಗಿ ದೂರ ಆಗುತ್ತದೆ ಎಂದು ಅರ್ಥ. ಹಾಗಾಗಿ ದೇವರಿಂದ ಸಿಗುವಂಥ ಈ ಸೂಚನೆಗಳನ್ನು ಕಡೆಗಣಿಸಬೇಡಿ. ಹಾಗಿದ್ದರೆ, ನಿಮಗೆ ಸಿಗುವಂಥ ಸೂಚನೆಗಳ ಬಗ್ಗೆ, ಯಾವ ಪಕ್ಷಿಗಳು ಬಂದರೆ, ಮನೆಗೆ ಒಳ್ಳೆಯದು ಎಂದು ತಿಳಿಸುತ್ತೇವೆ ನೋಡಿ.. ಪೂರ್ತಿಯಾಗಿ ತಿಳಿದುಕೊಳ್ಳೋಣ..

ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಗಿಳಿ ಮತ್ತು ಗುಬ್ಬಚ್ಚಿ ಈ ಎರಡು ಪಕ್ಷಿಗಳು ಕೂಡ ಮನೆಗೆ ಬಂದರೆ ಲಕ್ಷ್ಮೀದೇವಿ ಮನೆಗೆ ಬರುವ ಸೂಚನೆ ಎಂದು ಹೇಳುತ್ತಾರೆ. ಈ ಎರಡು ಪಕ್ಷಿಗಳು ಬಂದರೆ ನಿಮ್ಮ ಮನೆಯ ಸಮೃದ್ಧಿ ಹೆಚ್ಚಾಗುತ್ತದೆ, ಹಣಕಾಸಿನ ವಿಚಾರದಲ್ಲಿ ಇರುವ ಎಲ್ಲಾ ಸಮಸ್ಯೆಗಳು ಕಡಿಮೆ ಆಗುತ್ತದೆ ಎಂದು ಸೂಚಿಸಲಾಗಿದೆ. ಗಿಳಿ ಪಕ್ಷಿಯು ಕುಬೇರನಿಗೆ ಸಂಬಂಧಪಟ್ಟ ಪಕ್ಷಿ ಆಗಿದೆ ಎಂದು ಹೇಳುತ್ತಾರೆ.

ನಿಮ್ಮ ಮನೆಗೆ ಗಿಳಿಯ ಪ್ರವೇಶವಾದರೆ, ಅದರಿಂದ ನಿಮ್ಮ ಮನೆಯಲ್ಲಿ ಆಸ್ತಿ ಹೆಚ್ಚಾಗುತ್ತದೆ. ಮನೆಗೆ ಗುಬ್ಬಚ್ಚಿ ಬರುವುದನ್ನು ಕೂಡ ಮನೆಗೆ ಒಳ್ಳೆಯ ಸಂಕೇತ ಎಂದು ಹೇಳಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟಿದರೆ, ನಿಮ್ಮ ಮನೆಯಲ್ಲಿ ಆರ್ಥಿಕ ವಿಚಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳುತ್ತಾರೆ. ವಾಸ್ತು ಶಾಸ್ತ್ರಗಳಲ್ಲಿ ಈ ವಿಚಾರವನ್ನು ತಿಳಿಸಿದ್ದು, ನಿಮ್ಮ ಮನೆಗೂ ಈ ಪಕ್ಷಿಗಳು ಬಂದರೆ, ಸೂಚನೆಗಳನ್ನು ಅರ್ಥ ಮಾಡಿಕೊಳ್ಳಿ.

Leave A Reply

Your email address will not be published.