Sangeetha Sringeri: ಬಿಗ್ ಮನೆಯೊಳಗೆ ನಡೆಯುವ ಮಹಿಳೆಯರ ಉಡುಪಿನ ವಿಚಾರದ ಬಗ್ಗೆ ಬಿಗ್ ಸೀಕ್ರೆಟ್ ತಿಳಿಸಿದ ಸಂಗೀತ!

0 26

Sangeetha Sringeri: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ಸಂಗೀತ ಶೃಂಗೇರಿ ಎಂದು ಹೇಳಿದರೆ ತಪ್ಪಲ್ಲ. ಮನೆಯೊಳಗೆ ಸಿಂಗಲ್ ಸಿಂಹಿಣಿ ಆಗಿ ಗುರುತಿಸಿಕೊಂಡವರು ಸಂಗೀತ. ಹೊರಗಡೆ ಇವರನ್ನು ಸ್ಟ್ರಾಂಗ್ ಲೇಡಿ ಎಂದು ಗುರುತಿಸಿದ್ದಾರೆ ಜನ. ಸಂಗೀತ ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲದೆ ಇದ್ದರು ಜನರ ಅಪಾರ ಪ್ರೀತಿ ಗಳಿಸಿದ್ದಾರೆ. ಇದೀಗ ಸಂಗೀತ ಅವರು ಬಿಗ್ ಬಾಸ್ ಮನೆ ಬಗ್ಗೆ ಒಂದು ಬಿಗ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ನಟಿ ಸಂಗೀತ ಶೃಂಗೇರಿ ಅವರು ಈ ಮೊದಲು ಕೋಟಿ ಕೊಟ್ರು ಬಿಗ್ ಬಾಸ್ ಗೆ ಹೋಗಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಬಂದು, 112 ದಿನಗಳ ಕಾಲ ಇದ್ದು, 2ನೇ ರನ್ನರ್ ಅಪ್ ಆಗಿ ಇಂದು ಸಿಂಹಿಣಿ ಸಂಗೀತ ಎಂದು ಹೆಸರು ಪಡೆದುಕೊಂಡಿದ್ದಾರೆ. ಸಂಗೀತ ಅವರು ನಟನೆಯ ಕೆರಿಯರ್ ಶುರು ಮಾಡಿದ್ದು ಹರಹರ ಮಹಾದೇವ ಧಾರವಾಹಿ ಮೂಲಕ, ಬಳಿಕ ಚಾರ್ಲಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು.

ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಒಂದು ಹಾಡು, ಸೇರಿದಂತೆ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಬಿಗ್ ಬಾಸ್ ಇವರ ಕೆರಿಯರ್ ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಲ್ಲ. ಬಿಗ್ ಬಾಸ್ ಗೆ ಹೋದ ಬಳಿಕ ಸಂಗೀತ ಅವರಿಗೆ ಫ್ಯಾನ್ ಫಾಲೋಯಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಹೇಳಬಹುದು. ಸಂಗೀತ ಅವರ ಫ್ಯಾಮಿಲಿ ಬಗ್ಗೆ ಕೂಡ ಜನರಿಗೆ ಗೌರವ ಜಾಸ್ತಿಯಾಗಿದೆ. ಬಿಗ್ ಬಾಸ್ ಮುಗಿದ ಮೇಲೆ ಸಂಗೀತ ಅವರು ಇಂಟರ್ವ್ಯೂ ಗಳಲ್ಲಿ ಬ್ಯುಸಿ ಆಗಿದ್ದಾರೆ.

ಹೀಗೆ ಒಂದು ಇಂಟರ್ವ್ಯೂ ವೇಳೆ ಸಂಗೀತ ಅವರು ಬಿಗ್ ಬಾಸ್ ಮನೆಯ ಬಿಗ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ಸಂಗೀತ ಅವರು ತಿಳಿಸಿರುವುದು ಏನು ಎಂದರೆ, ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಮಹಿಳಾ ಸ್ಪರ್ಧಿಗಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಕೆಲವೊಮ್ಮೆ ಮಹಿಳಾ ಸ್ಪರ್ಧಿಗಳು ಪಾರ್ಟಿ ವೇರ್ ಬಟ್ಟೆ ಧರಿಸಿದಾಗ, ಅವರವರಿಗೆ ಚೆನ್ನಾಗಿ ಕಾಣಿಸಿದರು ಸಹ, ಕೆಲವು ಕ್ಯಾಮೆರಾಗಳಲ್ಲಿ ಬೇರೆ ಥರವೇ ಕಾಣಿಸುತ್ತೆ, ಟಿಆರ್ಪಿ ಗೋಸ್ಕರ ಮಾಡಿದ್ರೆ, ಬೇರೆ ಥರವೇ ಬಳಸಿಕೊಳ್ಳಬಹುದಿತ್ತು..

ಬಿಗ್ ಬಾಸ್ ತಂಡ ಆ ಥರ ಮಾಡಿಲ್ಲ, ಹಾಗಾದಾಗ ಕನ್ಫೆಶನ್ ರೂಮ್ ನಲ್ಲಿ ಪತ್ರ ಇಡುತ್ತಿದ್ದರು, ನಿಮ್ಮ ಬಟ್ಟೆಗಳು ಸ್ವಲ್ಪ ರಿವೀಲಿಂಗ್ ಆಗಿದೆ, ಕೆಲವು ಕ್ಯಾಮೆರಾ ಗಳಲ್ಲಿ ಬೇರೆ ಥರ ಕಾಣುತ್ತೆ, ಬಟ್ಟೆಗಳನ್ನ ಸರಿಯಾಗಿ ಧರಿಸಿ ಅಂತ ಬರೆದಿರುತ್ತಿದ್ರು, ಆ ದೃಶ್ಯಗಳನ್ನೆಲ್ಲಾ ಟೆಲಿಕಾಸ್ಟ್ ಮಾಡಿಲ್ಲ ಅದರಲ್ಲೇ ಗೊತ್ತಾಗುತ್ತೆ ಅವರು ನಮ್ಮನ್ನ ಫ್ಯಾಮಿಲಿ ಥರ ನೋಡ್ಕೊಂಡಿದ್ದಾರೆ ಎಂದು ಹೇಳಿದ್ದಾರೆ ಸಂಗೀತ.

Leave A Reply

Your email address will not be published.