Madhumathi: ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮಧುಮತಿ ಈ ಮೊದಲು ಯಾವ ಕೆಲಸ ಮಾಡ್ತಿದ್ರು ಗೊತ್ತಾ?

0 26

Madhumathi: ನಟನೆಯಲ್ಲಿ ಆಸಕ್ತಿ ಇರುವ ಅದೆಷ್ಟೋ ಜನರಿಗೆ ಅವಕಾಶ ಸಿಗುವುದು ಕಡಿಮೆ. ಆದರೆ ಅವಕಾಶ ಸಿಕ್ಕವರು ನಿಜಕ್ಕೂ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತಾರೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಪ್ರಸ್ತುತ ಗಿಚ್ಚಿ ಗಿಲಿಗಿಲಿ ಧಾರವಾಹಿಯ ಸ್ಪರ್ಧಿಯಾಗಿ ಬಂದಿರುವ ಮಧುಮತಿ ಅವರು..

ಹೌದು, ಇವರು ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಶ್ರೇಷ್ಠ ತಾಯಿ ಯಶೋಧ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಯೂಟ್ಯೂಬ್ ನ ಕೆಲವು ವೆಬ್ ಸೀರೀಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಮಧುಮತಿ ಅವರು ಹುಟ್ಟಿದ್ದು ಬೆಳೆದದ್ದು ಓದಿದ್ದು ಎಲ್ಲವೂ ಬೆಂಗಳೂರಿನಲ್ಲೇ, ಇವರು ಬಿಕಾಂ ಪದವಿ ಮಾಡಿದ್ದಾರೆ. ನಟನೆಯಲ್ಲಿ ಮಧುಮತಿ ಅವರಿಗೆ ಆಸಕ್ತಿ ಇತ್ತು, ಆದರೆ ಮನೆಯಲ್ಲಿ ಅವರಿಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ.

ಮದುವೆ ನಂತರ ಟೀಚರ್ಸ್ ಟ್ರೇನಿಂಗ್ ಮಾಡಿಕೊಂಡು ಮಾಂಟೆಸರಿ ಸ್ಕೂಲ್ ನಲ್ಲಿ ಟೀಚರ್ ಆಗಿ 10 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಂತರ ನಟನೆಯಲ್ಲಿ ಮುಂದುವರೆಯಬೇಕು ಎಂದು ಆಸೆಪಟ್ಟರು. ಬಳಿಕ ಅವರಿಗೆ ಸೇವಂತಿ ಧಾರವಾಹಿಯಲ್ಲಿ ನಾಯಕಿಯ ಅಮ್ಮನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೀಗೆ ಒಂದೊಂದೇ ಅವಕಾಶಗಳನ್ನ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾ ಬಂದರು. ಹಾಗೆಯೇ ಭಾಗ್ಯಲಕ್ಷ್ಮಿ ಧಾರಾವಾಹಿಯ ಪಾತ್ರ ಸಿಕ್ಕಿತು.

ಈಗ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಇವರಿಗೆ ಅವಕಾಶ ಸಿಕ್ಕಿದೆ. ಶೋ ಶುರುವಾಗಿ 2 ವಾರಗಳು ಕಳೆದಿದ್ದು, ಮಧುಮತಿ ಅವರ ನಟನೆಯನ್ನು ಜನರು ಮತ್ತು ಜಡ್ಜ್ ಗಳು ಸಂತೋಷಪಟ್ಟಿದ್ದಾರೆ. ಮಧುಮತಿ ಅವರು ಹೀಗೆ ಮುಂದುವರೆದರೆ ಕನ್ನಡ ಚಿತ್ರರಂಗದಲ್ಲಿ ಇವರಿಗೆ ಒಳ್ಳೆಯ ಅವಕಾಶಗಳು ಸಿಗುವುದಂತು ಖಂಡಿತ ಎನ್ನುತ್ತಿದ್ದಾರೆ ನೆಟ್ಟಿಗರು.

Leave A Reply

Your email address will not be published.