Horoscope: ಕುಂಭರಾಶಿಯಲ್ಲಿ ಸೂರ್ಯ ಶನಿ ಸಂಯೋಗ! ಈ ರಾಶಿಯವರಿಗೆ ಭಾರಿ ಹಣಲಾಭ!

0 30

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳ ಸಂಯೋಗಕ್ಕೆ ವಿಶೇಷ ಮಹತ್ವವಿದೆ. ಇದೀಗ ಶನಿದೇವರು ತನ್ನದೇ ರಾಶಿ ಆಗಿರುವ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಇದೇ ರಾಶಿಗೆ ಸೂರ್ಯನ ಆಗಮನ ಕೂಡ ಇದೇ ವಾರ ಆಗಲಿದೆ. ಈ ಎರಡು ದೊಡ್ಡ ಗ್ರಹಗಳು ಎನ್ನುವ ವಿಷಯ ನಮಗೆ ಗೊತ್ತೇ ಇದೆ. ಇವರಿಬ್ಬರ ಸಂಯೋಗ ಕುಂಭ ರಾಶಿಯಲ್ಲಿ ನಡೆಯುವ ಕಾರಣ, ಈ ಕೆಲವು ರಾಶಿಗಳ ಅದೃಷ್ಟ ಬದಲಾಗುತ್ತದೆ. ಇವರಿಗೆ ಹಣಕಾಸಿನ ಮಳೆಯೇ ಹರಿಯಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಇದು ನಿಮಗೆ ಶುಭ ಸಮಯ ಆಗಿದ್ದು, ನಿಮ್ಮ ಎಲ್ಲಾ ಕಷ್ಟಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಮುಂದಿನ ಹಂತಕ್ಕೆ ಸಾಗುತ್ತೀರಿ. ನಿಮಗೆ ಅಗತ್ಯವಿರುವಷ್ಟು ಸಂಬಳ ಸಿಗುತ್ತದೆ, ಕೆಲಸಕ್ಕೆ ಒಳ್ಳೆಯ ಆಫರ್ ಸಿಗಲಿದ್ದು, ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ. ಸಿಹಿ ಸುದ್ದಿ ಕೇಳುವ ಸಮಯ ಹತ್ತಿರವಿದೆ, ನಿರೀಕ್ಷಿತ ಕೆಲಸಗಳು ಸರಿ ದಾರಿಯಲ್ಲಿ ಸಾಗುತ್ತಿದೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಇದು ಒಳ್ಳೆಯ ಸಮಯ, ನಿಮಗೆ ತೊಂದರೆ ಕೊಡುತ್ತಿದ್ದ ಸಮಸ್ಯೆಗಳು ದೂರವಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರು ಹೊಸ ಬ್ಯುಸಿನೆಸ್ ಶುರು ಮಾಡುವುದಕ್ಕೆ ಇದು ಒಳ್ಳೆಯ ಸಮಯ. ಕೆಲಸದಲ್ಲಿ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವ ಸಮಯ, ಏಳಿಗೆ ಕಾಣುತ್ತೀರಿ. ನಿಮ್ಮ ಸಂಗಾತಿ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಬದುಕಿನಲ್ಲಿ ಸಂತೋಷ ಇರುತ್ತದೆ. ಈ ವೇಳೆ ನಿಮ್ಮ ಆತ್ಮಸ್ಥೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ.

ಕನ್ಯಾ ರಾಶಿ :- ಬೇರೆಯವರ ನಿಮ್ಮ ಪ್ರಭಾವ ಜಾಸ್ತಿ ಇರುತ್ತದೆ. ನಿಮ್ಮ ಸ್ಕಿಲ್, ಕೆಲಸ ಮಾಡುವ ಶೈಲಿ, ನಿಮ್ಮ ಶ್ರಮ ಎಲ್ಲದಕ್ಕೂ ಒಳ್ಳೆಯ ಪ್ರಶಂಸೆ ಸಿಗುತ್ತದೆ. ಹೊಸ ಕೆಲಸ ಸಿಗಬಹುದು. ಈ ವೇಳೆ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಇನ್ವೆಸ್ಟ್ ಮಾಡುವುದರಿಂದ ಲಾಭ ಪಡೆಯುತ್ತೀರಿ. ಸಾಲವಾಗಿ ಬೇರೆಯವರಿಗೆ ಕೊಟ್ಟಿರುವ ಹಣ ನಿಮ್ಮನ್ನು ತಲುಪುತ್ತದೆ.

Leave A Reply

Your email address will not be published.