Astrology: ಮನೆಯಲ್ಲಿ ಪ್ರತಿದಿನ ಯಾಕೆ ಹೊಸಿಲಿನ ಪೂಜೆ ಮಾಡಬೇಕು?

0 26

Astrology: ನಮ್ಮ ಶಾಸ್ತ್ರ ಸಂಪ್ರದಾಯದಲ್ಲಿ ಹಲವು ಆಚರಣೆಗಳನ್ನು ಪಾಲಿಸಲಾಗುತ್ತದೆ. ಒಂದೊಂದು ಆಚರಣೆ, ಪೂಜೆ ಪುನಸ್ಕಾರ ಇದೆಲ್ಲದಕ್ಕೂ ಅದರದ್ದೇ ಆದ ಅರ್ಥ, ಮಹತ್ವವಿದೆ. ಅವುಗಳನ್ನು ತಿಳಿದು, ಅದೇ ರೀತಿ ಆಚರಣೆ ಮಾಡಿಕೊಂಡು ಹೋದರೆ, ನಮ್ಮ ಬದುಕು ಬಂಗಾರವಾಗುತ್ತದೆ. ದೇವರ ಕೃಪೆಯು ಸಿಗುತ್ತದೆ. ಅಂಥದ್ದೇ ಒಂದು ಪೂಜೆಯ ಬಗ್ಗೆ ಇಂದು ನಾವು ತಿಳಿಯೋಣ..

ನಮ್ಮ ಶಾಸ್ತ್ರದಲ್ಲಿ ಹೊಸಿಲಿನ ಪೂಜೆಗೆ ಮಹತ್ವವಿದೆ, ಪ್ರತಿ ಮನೆಯಲ್ಲಿ ಹೊಸಿಲಿನ ಪೂಜೆ ಮಾಡುತ್ತಾರೆ. ಕೆಲವರು ಹಬ್ಬಗಳು, ವಿಶೇಷ ದಿನಗಳು ಇದ್ದಾಗ ಮಾತ್ರ ಹೊಸಿಲಿನ ಪೂಜೆ ಮಾಡುತ್ತಾರೆ, ಆದರೆ ಹೊಸಿಲಿನ ಪೂಜೆ ಮಾಡುವುದಕ್ಕೆ ಇಂಥದ್ದೇ ದಿನ ಎಂದು ಇಲ್ಲ. ಪ್ರತಿದಿನ ಹೊಸಿಲಿನ ಪೂಜೆ ಮಾಡುವುದು ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ, ಪ್ರತಿದಿನ ಪೂಜೆ ಮಾಡಿದರೆ ಮನೆಗೂ ಒಳ್ಳೆಯದಾಗುತ್ತದೆ.

ಹೊಸಿಲಿನಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ಹೊಸಿಲಿನ ಪೂಜೆ ಮಾಡಿದರೆ, ಮನೆಯ ಮುತ್ತೈದೆಗೆ ನೆಮ್ಮದಿ, ಸೌಭಾಗ್ಯ ಸಿಗುತ್ತದೆ ಎಂದು ಹೇಳುತ್ತಾರೆ. “ಓಂಕಾರ ರೂಪಿಣೀ ದೇವಿ ವೀಣಾ ಪುಸ್ತಕ ಧಾರಿಣಿ, ಸೌಭಾಗ್ಯಮ್ ದೇಹಿಮೆ ನಿತ್ಯಂ ದಾರಿದ್ರ್ಯನ ಪ್ರಯಚ್ಛಮೇ” ಈ ಮಂತ್ರವನ್ನು ಜಪಿಸಿ..

“ದ್ವಾರದೇವಿ ನಮಸ್ತುಭ್ಯಮ್ ದ್ವಾರಕೇಶ್ವರ ಭಾಮಿನಿ, ಪ್ರತಿ ದ್ವಾರ ಹರಿ ಗುರು ಭಕ್ತಿಮ್ ಪುತ್ರಸ್ತ ದೇಹಿಮೇ”.. ಇದು ಕೂಡ ಹೊಸಿಲಿನ ಪೂಜೆಗೆ ಹೇಳುವ ಮಂತ್ರ. ಈ ಮಂತ್ರಗಳನ್ನು ಹೇಳಿ ಪೂಜೆ ಮಾಡುವುದರಿಂದ, ಶುಭವಾಗುತ್ತದೆ. ಹೊಸಿಲಿನ ಪೂಜೆ ಎಂದರೆ, ಲಕ್ಷ್ಮೀದೇವಿಯ ಆರಾಧನೆ, ಹೊಸಿಲಿಗೆ ಪೂಜೆ ಮಾಡುವುದರಿಂದ ಯಮಧರ್ಮರಾಯ ಮತ್ತು ಮೃತ್ಯು ಮನೆಯೊಳಗೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.

Leave A Reply

Your email address will not be published.