Nayanthara: ಸಂಭಾವನೆ ಕಡಿಮೆ ಎಂದು ಗಂಡನ ಸಿನಿಮಾ ಇಂದಲೇ ಹೊರಬಂದ ನಯನತಾರ!

0 24

Nayanthara: ಸೌತ್ ಇಂಡಿಯನ್ ಸಿನಿಮಾದ ಲೇಡಿ ಸೂಪರ್ ಸ್ಟಾರ್ ನಯನತಾರ ಅವರು ಅತಿಹೆಚ್ಚು ಬೇಡಿಕೆ ಇರುವ, ಸೌತ್ ಇಂಡಿಯನ್ ಸಿನಿಮಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ. ನಯನತಾರ ಅವರು ಮದುವೆಯಾದ ಮೇಲೆ ಕೂಡ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಇದೀಗ ನಯನತಾರ ಅವರು ಸಂಭಾವನೆ ಕಡಿಮೆ ಎಂದು ಗಂಡನ ಸಿನಿಮಾ ಇಂದಲೇ ಹೊರಬಂದಿದ್ದಾರೆ ಎನ್ನಲಾಗುತ್ತಿದೆ..

ನಟಿ ನಯನತಾರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕವೇ ಕಳೆದು ಹೋಗುತ್ತಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಹೆಚ್ಚಾಗಿ ನಟಿಸುವ ನಯನತಾರ ಅವರು ಕನ್ನಡದಲ್ಲಿ ಉಪೇಂದ್ರ ಅವರೊಡನೆ ಸೂಪರ್ ಸಿನಿಮಾದಲ್ಲಿ ನಟಿಸಿದರು. ಇನ್ನು ಬಾಲಿವುಡ್ ಗೆ ಕಳೆದ ವರ್ಷ ಜವಾನ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಎಲ್ಲಾ ಕಡೆ ಇವರದ್ದೇ ಹವಾ ಎಂದರೆ ತಪ್ಪಲ್ಲ..

ನಯನತಾರ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾಗಿ, ಇಬ್ಬರು ಮಕ್ಕಳನ್ನು ಪಡೆದಿದ್ದಾರೆ ಎನ್ನುವುದು ಗೊತ್ತೇ ಇದೆ. ಅವಳಿ ಗಂಡು ಮಕ್ಕಳಿಗೆ ಉಯಿರ್, ಉಲಗ್ ಎಂದು ಹೆಸರಿಟ್ಟಿದ್ದಾರೆ. ಸಿನಿಮಾ ಜೊತೆಗೆ ಹೆಚ್ಚಿನ ಸಮಯವನ್ನು ಮಕ್ಕಳ ಜೊತೆಗೆ ಕಳೆಯುತ್ತಿದ್ದಾರೆ ನಯನ್. ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ. ಇನ್ನು ಗಂಡನ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ..

ವಿಘ್ನೇಶ್ ಶಿವನ್ ಅವರು ಜೆಗ LIC ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರದೀಪ್, ಕೀರ್ತಿ ಶೆಟ್ಟಿ ಹಾಗು ಇನ್ನಿತರ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಯನತಾರ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಸಿನಿಮಾ ಟೈಟಲ್ ವಿಚಾರಕ್ಕೆ ವಿವಾದವಾಗಿ, ಕೇಸ್ ಆಗಿತ್ತು. ಇದಾದ ಬಳಿಕ ನಯನತಾರ ಅವರು LIC ಸಿನಿಮಾ ಇಂದ ಹೊರಬಂದಿದ್ದಾರೆ.

ಈಗ ನಯನತಾರ ಅವರು ಭಾರತ ಚಿತ್ರರಂಗದ ಸ್ಟಾರ್ ನಟಿ. ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಇವರಿಗೆ ಗಂಡನ ಸಿನಿಮಾದಲ್ಲಿ ಸಂಭಾವನೆ ಸಿಗೋದು ಕಡಿಮೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸಿನಿಮಾ ಇಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಶಾಕ್ ಆಗಿರುವುದಂತೂ ನಿಜ..

Leave A Reply

Your email address will not be published.