Health Tips: ಸಾಫ್ಟ್ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಇದ್ಯಾ? ಈಗಲೇ ಬಿಟ್ಟುಬಿಡಿ

0 31

Health Tips: ನಮ್ಮಲ್ಲಿ ಹಲವು ಜನರಿಗೆ ಸಾಫ್ಟ್ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಇರುತ್ತದೆ. ಹಲವು ಜನರು ಪ್ರತಿದಿನ ಕುಡಿಯುವ ಅಭ್ಯಾಸವನ್ನು ಕೂಡ ಹೊಂದಿರುತ್ತಾರೆ. ಒಂದು ವೇಳೆ ನಿಮಗೂ ಈ ಅಭ್ಯಾಸ ಇದ್ದರೆ, ಈಗಲೇ ಬಿಟ್ಟುಬಿಡಿ, ಇದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಅಗೋದು, ಹಾಗಿದ್ದರೆ ಸಾಫ್ಟ್ ಡ್ರಿಂಕ್ಸ್ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ಈ ಡ್ರಿಂಕ್ ಗಳಲ್ಲಿ ಶುಗರ್ ಕಂಟೆಂಟ್ ಜಾಸ್ತಿ ಇರುತ್ತದೆ, ಇದರಿಂದ ದೇಹದಲ್ಲಿ ಕೊಬ್ಬು ಜಾಸ್ತಿಯಾಗುತ್ತದೆ.
*ಇವುಗಳಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ, ಹಾಗಾಗಿ ಪ್ರೊಟೀನ್ ಅಂಶ ದೇಹಕ್ಕೆ ಸಿಗುವುದಿಲ್ಲ.
*ಅತಿಯಾಗಿ ಸಾಫ್ಟ್ ಡ್ರಿಂಕ್ಸ್ ಕುಡಿದರೆ, ಟೈಪ್ 2 ಡೈಯಾಬಿಟಿಸ್ ಗೆ ಗುರಿಯಾಗುತ್ತೀರಿ.
*ಅತಿಯಾಗಿ ಸಾಫ್ಟ್ ಡ್ರಿಂಕ್ಸ್ ಕುಡಿದರೆ, ಅದರಲ್ಲಿರುವ ಶುಗರ್ ಮತ್ತು ಆಮ್ಲ ಇಂದ ದಂತದ ಸಮಸ್ಯೆ ಶುರುವಾಗುತ್ತದೆ, ಕ್ಯಾವಿಟಿ ಉಂಟಾಗುತ್ತದೆ.

*ಇದರಲ್ಲಿ ಫಾಸ್ಫರಿಕ್ ಆಕ್ಸೈಡ್ ಅಂಶ ಇರುವುದರಿಂದ ಮೂಳೆಗಳಿಗೆ ಸಮಸ್ಯೆ ಉಂಟಾಗುತ್ತದೆ, ಮೂಳೆ ಮುರಿಯುವ ಸಾಧ್ಯತೆ ಇದೆ.
*ಹೆಚ್ಚಾಗಿ ಸಾಫ್ಟ್ ಡ್ರಿಂಕ್ಸ್ ಕುಡಿದರೆ, ನಿಮ್ಮಲ್ಲಿ ಹಾರ್ಟ್ ಪ್ರಾಬ್ಲಮ್ ಗಳು ಶುರುವಾಗಬಹುದು.
*ಮೂಡ್ ಸ್ವಿಂಗ್ ಶುರುವಾಗುತ್ತದೆ, ಬಿಪಿಯಲ್ಲಿ ಹೆಚ್ಚಾಗಿ ವೇರಿಯೇಷನ್ಸ್ ಆಗುತ್ತದೆ, ಹಾಗೆಯೇ ದೇಹಕ್ಕೆ ಹೆಚ್ಚು ಆಯಾಸ ಉಂಟಾಗುತ್ತದೆ.

*ಸಾಫ್ಟ್ ಡ್ರಿಂಕ್ಸ್ ಅತಿಯಾದ ಸೇವನೆ ಇಂದ ಕಿಡ್ನಿ ಸ್ಟೋನ್ ಶುರುವಾಗಬಹುದು.
*ಇದರಲ್ಲಿ ಕೆಫೀನ್ ಮತ್ತು ಸಕ್ಕರೆಯ ಅಂಶ ಜಾಸ್ತಿ ಇರುವ ಕಾರಣ ಇವುಗಳಿಗೆ ನೀವು ಅಡಿಕ್ಟ್ ಆಗಬಹುದು.
ಸಾಫ್ಟ್ ಡ್ರಿಂಕ್ಸ್ ಸೇವನೆ ಇಂದ ನಿಮ್ಮ ಆರೋಗ್ಯಕ್ಕೆ ಇಷ್ಟೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ, ಹಾಗಾಗಿ ಇವುಗಳ ಸೇವನೆ ನಿಲ್ಲಿಸುವುದು ಒಳ್ಳೆಯದು.

Leave A Reply

Your email address will not be published.