Lifestyle: ಫ್ರಿಜ್ ಇಲ್ಲದಿದ್ರು ಹೂಗಳು ಬಾಡಬಾರದು ಅಂದ್ರೆ ಈ ರೀತಿ ಮಾಡಿ!

0 20

ಈಗಿನ ಬ್ಯುಸಿ ಲೈಫ್ ನಲ್ಲಿ ಸಮಯ ಕಡಿಮೆ ಇರುವುದರಿಂದ ನಮಗೆ ಅಗತ್ಯವಿರುವ ವಸ್ತುಗಳನ್ನು ಮೊದಲೇ ತಂದು ಮನೆಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಜನರಲ್ಲಿ ಇರುತ್ತದೆ. ಅಂಥ ವಸ್ತುಗಳಲ್ಲಿ ಹೂವು ಕೂಡ ಒಂದು. ಮನೆಯಲ್ಲಿ ಪೂಜೆ ಅಥವಾ ಇನ್ನಿತರ ಕಾರ್ಯಗಳು ಇದ್ದಾಗ ಹೂವುಗಳನ್ನು ತಂದು ಇಟ್ಟುಕೊಳ್ಳಲಾಗುತ್ತದೆ. ಹೂವುಗಳನ್ನು ಫ್ರಿಜ್ ನಲ್ಲಿ ಇಟ್ಟರೆ ಅವು ಬಾಡುವುದಿಲ್ಲ. ಆದರೆ ಕೆಲವು ಮನೆಗಳಲ್ಲಿ ಫ್ರಿಜ್ ಇರುವುದಿಲ್ಲ.

ಅಂಥವರು ಹೂವುಗಳು ಬಾಡದೆ ಇರುವ ಹಾಗೆ ಮಾಡಲು ಏನು ಮಾಡಬೇಕು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಈ ರೀತಿಯ ಯೋಚನೆ ನಿಮಗು ಇದ್ದರೆ, ಇಂದು ನಿಮಗೆ ಕೆಲವು ಟಿಪ್ಸ್ ತಿಳಿಸಿಕೊಡುತ್ತೆವೆ.. ಅದನ್ನು ಅನುಸರಿಸಿದರೆ, ಫ್ರಿಜ್ ಇಲ್ಲದೆ ಇದ್ದರು ಹೂವುಗಳು ಫ್ರೆಶ್ ಆಗಿರುತ್ತದೆ..

*ಮಲ್ಲಿಗೆ ಹೂವನ್ನು ಮನೆಗೆ ತರುವುದಕ್ಕಿಂತ ಮಲ್ಲಿಗೆಯ ಮೊಗ್ಗುಗಳನ್ನು ತೆಗೆದುಕೊಂಡು ಬನ್ನಿ..
*ಇಡೀ ರಾತ್ರಿ ಹೂವನ್ನು ನಿಮ್ಮ ಮನೆಯಲ್ಲಿ ಇಬ್ಬನಿ ಬೀಳುವ ಜಾಗದಲ್ಲಿ ಇಡಿ.
*ಹೂವನ್ನು ಪ್ಲಾಸ್ಟಿಕ್ ಕವರ್ ಮೇಲೆ ಇಟ್ಟು, ಹೂವಿನ ಮೇಲೆ ನೀರು ಚಿಮುಕಿಸಿ.

*ಒದ್ದೆ ಬಟ್ಟೆ ಮಾಡಿ ಅದರ ಮೇಲೆ ನೀರು ಇಡುವುದನ್ನು ಮಾಡಬಹುದು. ಹೀಗೆ ಮಾಡಿದರೆ ಹೂವು ಬೇಗ ಬಾಡುವುದಿಲ್ಲ..
ಈ ವಿಧಾನಗಳನ್ನು ಅನುಸರಿಸುವ ಮೂಲಕ ಹೂವುಗಳು ಬಾಡದ ಹಾಗೆ ಮಾಡಬಹುದು. ಫ್ರಿಜ್ ಇಲ್ಲದೇ ಇದ್ದರು ಈ ರೀತಿ ಮಾಡಿ. ಸುಲಭದ ಮಾರ್ಗವಿದು.

Leave A Reply

Your email address will not be published.