Tips: ನಿಂಬೆಹಣ್ಣಿನ ರಸ ಬಳಸಿದ ಮೇಲೆ ಸಿಪ್ಪೆ ಬಿಸಾಕ್ತೀರಾ? ಅದರ ಬದಲು ಈ ಕೆಲಸಗಳಲ್ಲಿ ಬಳಸಿ!

0 30

Tips: ಸಾಮಾನ್ಯ ಪ್ರತಿದಿನ ನಮ್ಮ ಮನೆಗಳಲ್ಲಿ ನಿಂಬೆ ಹಣ್ಣನ್ನು ಹಲವು ಅಡುಗೆಗಳಿಗೆ ಬಳಸುತ್ತೇವೆ. ಚಿತ್ರಾನ್ನ, ರಸಂ ಸೇರಿದಂತೆ ಅನೇಕ ಅಡುಗೆ ಖಾದ್ಯಗಳಿಗೆ ನಿಂಬೆಹಣ್ಣಿನ ರಸವನ್ನು ಬಳಸಲಾಗುತ್ತದೆ. ಆದರೆ ನಿಂಬೆರಸ ತೆಗೆದುಕೊಂಡ ಮೇಲೆ ಸಾಮಾನ್ಯವಾಗಿ ಎಲ್ಲರೂ ಸಿಪ್ಪೆಯನ್ನು ಬಿಸಾಕಿ ಬಿಡುತ್ತಾರೆ. ಆದರೆ ನಿಂಬೆ ಸಿಪ್ಪೆಯನ್ನು ಬಿಸಾಕುವ ಬದಲು ಮನೆಯಲ್ಲೇ ಉಪಯುಕ್ತ ಆಗುವ ಕೆಲಸಗಳಿಗೆ ಬಳಸಿ. ಹಾಗಿದ್ದರೆ ಇದರ ಉಪಯೋಗಗಳು ಏನೇನು ಎಂದು ತಿಳಿಯೋಣ..

*ನಿಂಬೆ ಹಣ್ಣಿನ ಸಿಪ್ಪೆ ಒಂದು ರೀತಿ ನ್ಯಾಚುರಲ್ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ.. ಯಾವುದೇ ಪ್ರದೇಶದಲ್ಲಿ ಇರುವಂತಹ ಮೈಕ್ರೋ ಆರ್ಗ್ಯಾನಿಸಮ್ ಗಳನ್ನು ನಾಶ ಮಾಡುತ್ತದೆ. ಗ್ರೀಸ್ ಮತ್ತು ಗ್ರಿಮ್ ಅನ್ನು ಸಹ ತೊಡೆದು ಹಾಕುತ್ತದೆ.
*ನಿಂಬೆ ಸಿಪ್ಪೆಯನ್ನು ಪಾತ್ರೆ ತೊಳೆಯುವುದಕ್ಕೆ ಕೂಡ ಬಳಸಬಹುದು. ಬೇರೆ ಯಾವುದೋ ಸೋಪ್ ಅಥವಾ ಕೆಮಿಕಲ್ ಮಿಶ್ರಿತ ವಸ್ತುಗಳನ್ನು ಬಳಸುವ ಬದಲು ನೇರವಾಗಿ ನಿಂಬೆ ಹಣ್ಣಿನ ಸಿಪ್ಪೆಯನ್ನೇ ಪಾತ್ರೆ ತೊಳೆಯುವುದಕ್ಕೆ ಬಳಸಬಹುದು. ಪಾತ್ರೆಗಳು ಬಹಳ ಚೆನ್ನಾಗಿ ಕ್ಲೀನ್ ಆಗುತ್ತದೆ.

*ಮನೆಯಲ್ಲಿ ತರಕಾರಿ ಕಟ್ ಮಾಡಲು ಬಳಸುವ ಚಾಪಿಂಗ್ ಬೋರ್ಡ್ ಕ್ಲೀನ್ ಮಾಡಿ, ತೊಳೆಯುವುದಕ್ಕೆ ಕೂಡ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಳಸಬಹುದು. ನ್ಯಾಚುರಲ್ ಆಗಿ ವಸ್ತುಗಳಲ್ಲಿ ಇರುವ ಪಾಯಿಸನಸ್ ಅಂಶವನ್ನು ನಾಶ ಮಾಡುತ್ತದೆ.
*ಪಾತ್ರೆ ತೊಳೆಯಲು ಬಳಸುವ ಸಿಂಕ್ ಅನ್ನು ಕೂಡ ನಿಂಬೆ ಹಣ್ಣಿನ ಸಿಪ್ಪೆ ಬಳಸಿ ಕ್ಲೀನ್ ಮಾಡಬಹುದು. ಸಿಪ್ಪೆಗಳನ್ನು ರುಬ್ಬಿ, ಪುಡಿಯಾಗಿ ಮಾಡಿಕೊಂಡು ಕ್ಲೀನಿಂಗ್ ಗೆ ಬಳಸಬಹುದು.

*ಒಂದು ವೇಳೆ ನಿಮ್ಮ ಮನೆಯಲ್ಲಿ ಮೈಕ್ರೋವೇವ್ ಓವನ್ ಕೊಳಕು ಆಗಿದ್ದು, ಕ್ಲೀನ್ ಮಾಡಬೇಕು ಎಂದರೆ, ಮೊದಲಿಗೆ ಒಂದು ಬೌಲ್ ನಲ್ಲಿ ನಿಂಬೆಹಣ್ಣಿನ ಸಿಪ್ಪೆಯನ್ನು ಹಾಕಿ, ಅದನ್ನು ಓವನ್ ಒಳಗಿಟ್ಟು ಹೀಟ್ ಮಾಡಿದರೆ, ನಿಂಬೆಹಣ್ಣಿನ ಸಿಪ್ಪೆ ಆವಿಯಾಗಿ ಮೈಕ್ರೋವೇವ್ ನ ಒಳಗೆ ಪೂರ್ತಿಯಾಗಿ ಹರಡುತ್ತದೆ. ಬಳಿಕ ನೀವು ಓವನ್ ಅನ್ನು ಕ್ಲೀನ್ ಮಾಡಬಹುದು.
*ಹಲವು ಜನರು ಈಗಲೂ ಸಹ ತಾಮ್ರದ ಪಾತ್ರೆಯಲ್ಲಿ ಆಹಾರ ಇಡುವ ಅಭ್ಯಾಸ ಹೊಂದಿರುತ್ತಾರೆ. ಅವುಗಳಲ್ಲಿ ಊಟ ಮಾಡುವ ಅಭ್ಯಾಸ ಸಹ ಇರುತ್ತದೆ. ಒಂದು ವೇಳೆ ನೀವು ತಾಮ್ರದ ಪಾತ್ರೆಗಳನ್ನು ಬಳಸುವುದಾದರೆ, ನಿಂಬೆ ಹಣ್ಣಿನ ಸಿಪ್ಪೆಯಿಂದ ಕ್ಲೀನ್ ಮಾಡಬಹುದು.
*ಟೀ ಕಾಫಿ ಮಾಡುಗ ಪಾತ್ರೆಗಳು ಕೂಡ ಕಪ್ಪಾಗಿರುತ್ತದೇ, ಗಲೀಜಾಗುತ್ತದೆ. ಹಾಗಾಗಿ ಅವುಗಳನ್ನು ಕ್ಲೀನ್ ಮಾಡುವುದಕ್ಕೆ ಕೂಡ ನಿಂಬೆ ಹಣ್ಣಿನ ಸಿಪ್ಪೆ ಬಳಸಬಹುದು.

Leave A Reply

Your email address will not be published.