Jyothi Rai: ಬಾಯ್ ಫ್ರೆಂಡ್ ಗಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ನಟಿ ಜ್ಯೋತಿ ರೈ!

0 28

Jyothi Rai: ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ನಾಯಕಿಯರಲ್ಲಿ ಒಬ್ಬರು ಜ್ಯೋತಿ ರೈ. ಹಲವಾರು ಕನ್ನಡ ಸೀರಿಯಲ್ ಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಹೆಚ್ಚಾಗಿ ತಮ್ಮ ವಯಸ್ಸಿಗೆ ಮೀರಿದಂತಹ ಪಾತ್ರಗಳನ್ನೇ ಮಾಡಿದ್ದಾರೆ. ನಟಿ ಜ್ಯೋತಿ ರೈ ಅವರು ಹುಟ್ಟಿದ್ದು ಮಡಿಕೇರಿಯಲ್ಲಿ ಓದಿದ್ದು ಎಲ್ಲವೂ ಪುತ್ತೂರಿನಲ್ಲಿ. ಕಿರುತೆರೆ ಲೋಕದ ನಟಿಸುವ ಮೂಲಕ ಅಭಿನಯ ಶುರು ಮಾಡಿದ ಜ್ಯೋತಿ ಅವರು ಜನರ ಮನಮುಟ್ಟುವಂತಹ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಗುಳ ಧಾರವಾಹಿಯಲ್ಲಿ ಜ್ಯೋತಿ ಅವರ ಅಭಿನಯವನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ. ಮಗುವಿನ ಮೇಲೆ ಹಂಬಲ ಇಟ್ಟುಕೊಳ್ಳುವ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು ಜ್ಯೋತಿ ರೈ. ನಂತರದ ದಿನಗಳಲ್ಲಿ ಕಲರ್ಸ್ ಕನ್ನಡ, ಉದಯ ಟಿವಿ, ಕಸ್ತೂರಿ ಟಿವಿ ಹೀಗೆ ಎಲ್ಲಾ ಚಾನೆಲ್ ಗಳಲ್ಲೂ ಅನೇಕ ಧಾರವಾಹಿಗಳಲ್ಲಿ ನಟಿಸಿ ಕಿರುತೆರೆಯ ಬಹುಬೇಡಿಕೆಯ ನಟಿಯಾಗಿದ್ದಾರೆ.

ಇಂದಿಗೂ ಸಹ ಜ್ಯೋತಿ ಅವರು ಕಿರುತೆರೆ ಲೋಕದಲ್ಲಿ ಬಹಳ ಬೇಡಿಕೆ ಇದೆ, ಪ್ರಸ್ತುತ ಇವರು ತೆಲುಗಿನ ಗುಪ್ಪೆಡಂಥ ಮನಸ್ಸು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ, ಹಾಗೆಯೇ ಕೆಲವು ತೆಲುಗು ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಶೂಟ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಜ್ಯೋತಿ ರೈ ಅವರ ಹೊಸ ಪೋಸ್ಟ್ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಜ್ಯೋತಿ ರೈ ಅವರು ತಮ್ಮ ಬಾಯ್ ಫ್ರೆಂಡ್ ಪೂರ್ವಜ್ ಅವರು ಇಷ್ಟಪಟ್ಟು ಡಿಸೈನ್ ಮಾಡಿರುವ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಎದೆಯ ಮೇಲೆ ಒಂದು ಚಿಟ್ಟೆ, ಹಾಗೂ Hope ಎಂದು ಬರೆದಿರುವ ಟ್ಯಾಟೂ ಹಾಕಿಸಿಕೊಂಡಿದ್ದು, ಟ್ಯಾಟೂ ಹಾಕಿಸುತ್ತಿರುವ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ ಗೆ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಾಯ್ ಫ್ರೆಂಡ್ ಗೋಸ್ಕರ ಟ್ಯಾಟೂ ಹಾಕಿಸಿಕೊಂಡಿದ್ದೀರಾ ಎಂದು ನೆಟ್ಟಿಗರು ಕ್ಕ್ದ ಜ್ಯೋತಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

Leave A Reply

Your email address will not be published.